ಬೆಂಗಳೂರು: 2ಎ ಮೀಸಲಾತಿಗಾಗಿ ಪಟ್ಟು ಹಿಡಿದಿರುವ ಪಂಚಮಸಾಲಿ ಸಮುದಾಯದ ಹೋರಾಟದ ಬಿಸಿ ಕಡಿಮೆ ಮಾಡಲು ಸಿಎಂ ಬೊಮ್ಮಾಯಿ ಸಂಧಾನ ಸೂತ್ರ ಅನುಸರಿಸುತ್ತಿದ್ದಾರೆ. ಹೋರಾಟದ ಮುಂಚೂಣಿಯಲ್ಲಿರುವ ಜಯಮೃತ್ಯುಂಜಯ ಶ್ರೀಗಳ ಜೊತೆಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಇದೇ ತಿಂಗಳ 23 ರಂದು ಸಿಎಂ ಬೊಮ್ಮಾಯಿ ಅವರ ಶಿಗ್ಗಾವಿ ನಿವಾಸದ ಮುಂದೆ ಧರಣಿ ಮಾಡುವುದಾಗಿ ಜಯಮೃತ್ಯುಂಜಯ ಶ್ರೀ ಎಚ್ಚರಿಕೆ ನೀಡಿದ್ದರು. ಹೀಗಾಗಿ ಶ್ರೀಗಳ ಜೊತೆ ಮಾತುಕತೆಗೆ ಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ.
ಸಚಿವ ಸಿ.ಸಿ.ಪಾಟೀಲರ ಮೂಲಕ ಸಂಧಾನಕ್ಕೆ ಸಿಎಂ ಪ್ರಯತ್ನ ನಡೆಸಿದ್ದಾರೆ. ಜಯ ಮೃತ್ಯುಂಜಯಶ್ರೀಗಳ ಜೊತೆ ಮಾತುಕತೆ ನಡೆಸಿ ಎಂದು ಸಚಿವ ಸಿ.ಸಿ.ಪಾಟೀಲ್ ಅವರಿಗೆ ಸೂಚನೆ ನೀಡಿದ್ದಾರೆ.
ಇದನ್ನೂಓದಿ:ಎಡಿಯೂರು ಸಿದ್ದಲಿಂಗೇಶ್ವರನಿಗೆ ಸಿಎಂ ಬೊಮ್ಮಾಯಿ ವಿಶೇಷ ಪೂಜೆ
ಈ ಹಿನ್ನೆಲೆಯಲ್ಲಿ ಶ್ರೀಗಳಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿರುವ ಸಿ.ಸಿ. ಪಾಟೀಲ್, ರಾತ್ರಿ ಭೇಟಿಯಾಗಬೇಕಿದೆ ಎಂದು ಹೇಳಿದ್ದಾರೆ. ಆದರೆ, ಸಚಿವರ ಮನವಿಗೆ ಸ್ಪಷ್ಟವಾಗಿ ಏನನ್ನೂ ಹೇಳದ ಸ್ವಾಮೀಜಿ, ಸಂಧಾನಕ್ಕೆ ಹೋಗುವ ಎಂಬ ಗೊಂದಲದಲ್ಲಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಚುನಾವಣಾ ವರ್ಷದಲ್ಲಿ ಯಾವುದೇ ಮುಜುಗರ ತಪ್ಪಿಸಲು ಸಿಎಂ ಸಚಿವರ ಮೂಲಕ ಸಂಧಾನಕ್ಕೆ ಪ್ರಯತ್ನ ಮಾಡುತ್ತಿದ್ದಾರೆ.