Advertisement

ಬಿಲ್ಲವ ಸಮಾಜದ ಮೂರು ಬೇಡಿಕೆಗಳನ್ನು ತುರ್ತಾಗಿ ಈಡೇರಿಸುವ ಭರವಸೆ ನೀಡಿದ ಸಿಎಂ ಬೊಮ್ಮಾಯಿ

10:36 AM Jul 13, 2022 | Team Udayavani |

ಕಾಪು‌ : ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ, ಬಿಲ್ಲವ ಸಮಾಜವನ್ನು ಪ್ರವರ್ಗ (1) ಕ್ಕೆ ಸೇರ್ಪಡೆಗೊಳಿಸುವುದು, ಮಹಿಳಾ ಸ್ವಸಹಾಯ ಗುಂಪುಗಳಿಗೆ ಬಡ್ಡಿ ರಹಿತ ಸಾಲ, ಗರಡಿ ಅರ್ಚಕರಿಗೆ ಮಾಶಾಸನ, ಸಾಂಪ್ರಧಾಯಿಕ ಮೂರ್ತೆದಾರಿಕೆಗೆ ಪ್ರೋತ್ಸಾಹ ಮತ್ತು ಆಕಸ್ಮಿಕ ಅವಘಡದಿಂದ ಮೃತರಾಗುವ ಮೂರ್ತೆದಾರರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಬಿ.ಎನ್.‌ ಶಂಕರ ಪೂಜಾರಿ ನೇತೃತ್ವದಲ್ಲಿ ಮನವಿ ನೀಡಲಾಯಿತು.

Advertisement

ಮನವಿಗೆ‌ ಸ್ಪಂದಿಸಿದ ಮುಖ್ಯಮಂತ್ರಿಗಳು ಗರೊಡಿ ಅರ್ಚಕರಿಗೆ ಮಾಶಾಸನ, ಮೂರ್ತೆದಾರಿಕೆಗೆ ಪ್ರೋತ್ಸಾಹ ಮತ್ತು ಆಕಸ್ಮಿಕ ಅವಘಡ ಸಂಧರ್ಭದಲ್ಲಿ ಪರಿಹಾರ ನೀಡಿಕೆ, ನಾರಾಯಣಗುರು ಅನುಯಾಯಿಗಳಾಗಿರುವ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಮತ್ತು ಸ್ವ ಉದ್ಯೋಗ ನಡೆಸುತ್ತಿರುವವರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿಕೆಗೆ ಪ್ರಥಮ ಆದ್ಯತೆಯಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: ಬೈಂದೂರು: ಸುಟ್ಟು ಹೋದ ಸ್ಥಿತಿಯಲ್ಲಿ ಕಾರು ಹಾಗೂ ವ್ಯಕ್ತಿ ಪತ್ತೆ

ಬ್ರಹ್ಮಶ್ರೀ ನಾರಾಯಣ ಗುರುಗಳ ವಿಶ್ವಮಾನವತಾವಾದದ ಸಂದೇಶವು ಸಾರ್ವಕಾಲಿಕ ಸತ್ಯವಾಗಿದ್ದು, ಇದನ್ನು ಅನುಸರಿಸಿಕೊಂಡು ಬರುತ್ತಿರುವ ಕರಾವಳಿಯ ಬಿಲ್ಲವ ಸಮುದಾಯ ಸೇರಿದಂತೆ ಈಡಿಗ, ನಾಮಧಾರಿ ಹಾಗೂ ಇತರೇ ಉಪಪಂಗಡಗಳ ಬೇಡಿಕೆಯನ್ನು ಈಡೇರಿಸಲು ಸರಕಾರ ಸಿದ್ಧವಿದೆ. ಈ ಬಗ್ಗೆ ಚರ್ಚಿಸಲು ಬೆಂಗಳೂರಿಗೆ‌ ಆಗಮಿಸುವಂತೆ ಮುಖ್ಯಮಂತ್ರಿಗಳು ನಿಯೋಗಕ್ಕೆ ಸೂಚನೆ ನೀಡಿದರು.

ಬ್ರಹ್ಮಶ್ರೀ ನಾರಾಯಣಗುರುಗಳ ಪಠ್ಯದ ಭಾಗವನ್ನು ಸಮಾಜ ವಿಜ್ಞಾನ ಪಠ್ಯ ಪುಸ್ತಕಕ್ಕೆ‌ ಮರು ಸೇರ್ಪಡೆಗೆ ಆದೇಶಿಸಿದ ಸರಕಾರದ ನಿರ್ಧಾರವನ್ನು‌ ಪ್ರಶಂಶಿಸಿ ಮುಖ್ಯಮಂತ್ರಿಗಳನ್ನು‌ ಅಭಿನಂದಿಸಲಾಯಿತು.

Advertisement

ಸಚಿಚ ಕೋಟ‌ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ‌ ಭಟ್, ಸುಕುಮಾರ್ ಶೆಟ್ಟಿ, ಬಿಜೆಪಿ ಮಂಗಳೂರು ಪ್ರಭಾರಿ ಉದಯಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಬಿಲ್ಲವ‌ ಪರಿಷತ್ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ,  ಹಿರಿಯ ಮುಖಂಡ ಅಚ್ಯುತ ಅಮೀನ್‌ ಕಲ್ಮಾಡಿ, ಮಾಜಿ ಜಿ. ಪಂ. ಸದಸ್ಯರಾದ ಶಿಲ್ಪಾ ಜಿ. ಸುವರ್ಣ, ಗೀತಾಂಜಲಿ ಎಂ. ಸುವರ್ಣ, ಕ್ಷೇತ್ರಾಡಳಿತ‌ ಸಮಿತಿ ಗೌ. ಪ್ರ. ಕಾರ್ಯದರ್ಶಿ ಶಿವಾನಂದ ಪೂಜಾರಿ, ಕೋಶಾಧಿಕಾರಿ ವೀರೇಶ್ ಸುವರ್ಣ, ಪ್ರಮುಖರಾದ ರಾಜು ಪೂಜಾರಿ, ಭಾಸ್ಕರ ಪೂಜಾರಿ, ಕಾಮರಾಜ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು. ‌

Advertisement

Udayavani is now on Telegram. Click here to join our channel and stay updated with the latest news.

Next