Advertisement

ಶಾ ಭೇಟಿಯಾದ ಸಿಎಂ: ಯಾವಾಗ ಬೇಕಾದರೂ ಏನು ಬೇಕಾದರೂ ಆಗಬಹುದು !

03:32 PM May 11, 2022 | Team Udayavani |

ನವದೆಹಲಿ :ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಬುಧವಾರ ಭೇಟಿ ಮಾಡಿ ಚರ್ಚೆ ನಡೆಸಿದ್ದು, ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಜತೆಗೆ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆದಿದೆ.

Advertisement

ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ”ಸಂಪುಟ ವಿಚಾರದಲ್ಲಿ ಯಾವಾಗ ಬೇಕಾದರೂ ಏನು ಬೇಕಾದರೂ ಆಗಬಹುದು. ರಾಜಕೀಯ ಪಕ್ಷವಾಗಿ ತೀರ್ಮಾನ ಮಾಡಬೇಕಾಗುತ್ತದೆ. ರಾಜ್ಯದ ಸ್ಥಿತಿಗತಿಗಳನ್ನು ಹೇಳಿದ್ದೇನೆ. ಮುಂದಿನ ಒಂದು ವಾರ ನಿರ್ಣಾಯಕ.ಸ್ಥಳೀಯ ಸಂಸ್ಥೆಗಳ ಚುನಾವಣೆ ದೊಡ್ಡ ಪ್ರಮಾಣದಲ್ಲಿ ನಡೆಯಲಿದೆ, ಪಕ್ಷದಲ್ಲಿ ಆಯಾ ರಾಜ್ಯದ ಸ್ಥಿತಿ ಗತಿಯ ಮೇಲೆ ನಿರ್ಣಯಗಳಾಗುತ್ತದೆ” ಎಂದರು.

”ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಅನಿವಾರ್ಯವಾಗಿ ಪರಿಣಮಿಸಿದೆ. ವಿಧಾನಸಭಾ ಚುನಾವಣೆಗೆ ಮುನ್ನ ಈ ಚುನಾವಣೆಗಳು ನಡೆಯಬೇಕಿರುವುದರಿಂದ ಹೆಚ್ಚಿನ ಗಮನ ನೀಡುವಂತೆ ಅಮಿತ್ ಶಾ ಸೂಚಿಸಿದ್ದಾರೆ” ಎಂದರು.

”ಎರಡು ಮೂರು ದಿವಸಗಳ ಬೆಳವಣಿಗೆಯ ಆಧಾರದ ಮೇಲೆ ನಿರ್ಣಯವನ್ನು ಹೇಳುವುದಾಗಿ ತಿಳಿಸಿದ್ದಾರೆ. ನಡ್ಡಾ ಅವರೊಂದಿಗೆ ಅಂತಿಮವಾಗಿ ಚರ್ಚೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ” ಎಂದರು.

”ಸ್ಥಳೀಯ ಸಂಸ್ಥೆ, ರಾಜ್ಯಸಭೆ, ವಿಧನ ಪರಿಷತ್ ಚುನಾವಣೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದು, ವಿವರಣೆಗಳನ್ನು ನೀಡಲಾಗಿದೆ” ಎಂದು ತಿಳಿಸಿದರು.

Advertisement

ಶಾ ಭೇಟಿ ಸಂದರ್ಭದಲ್ಲಿ ಸಂಪುಟ ವಿಸ್ತರಣೆಗಿಂತ ಇದೇ ವಿಚಾರವೇ ಚರ್ಚೆಯ ಪ್ರಧಾನ ಭೂಮಿಕೆಯಾಗಿತ್ತು. ಸಂಪುಟದ ಬಗ್ಗೆ ನಡ್ಡಾ ಜತೆಗೆ ಮಾತನಾಡಿ ಎಂದು ಸೂಚನೆ ನೀಡಿದ್ದು, ಸಂಜೆ ೫ ಗಂಟೆ ಸುಮಾರಿಗೆ ಜೆ.ಪಿ.ನಡ್ಡಾ ನಿವಾಸಕ್ಕೆ ಸಿಎಂ ಭೇಟಿ ನೀಡಲಿದ್ದಾರೆ. ಆದರೆ ಸಂಪುಟ ವಿಸ್ತರಣೆ ಬಗ್ಗೆ ರಾಜ್ಯ ನಾಯಕರಿಗೆ ಮಾಹಿತಿ ಲಭಿಸಿದ್ದು, ಬಹುತೇಕ ಸೋಮವಾರ ಸಂಪುಟ ಪುನರ್ ರಚನೆ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next