Advertisement
ಅವರು ಇಂದು ಕೋರಮಂಗಲದ ಪೊಲೀಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಗತಿಪರ ಸಮಾಜ, ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಪೊಲೀಸರ ನಿಷ್ಠೆ, ದಕ್ಷತೆಯಿಂದ ಸಾಧ್ಯವಿದೆ. ಅಪರಾಧಿಗಳೊಂದಿಗೆ ರಾಜಿಯಿಲ್ಲದೆ ಕೆಲಸ ಮಾಡಿದರೆ ಅಪರಾಧ ತನ್ನಿಂದ ತಾನೇ ಕಡಿಮೆಯಾಗುತ್ತದೆ. ರಾಜ್ಯ ಸರ್ಕಾರ ಕ್ಕೆ ನಿಮ್ಮ ಸೇವೆಗಳ ಬಗ್ಗೆ ಹೆಮ್ಮೆಯಿದೆ. ರಾಷ್ಟ್ರದಲ್ಲಿ ಕರ್ನಾಟಕ ಪೊಲೀಸ್ ಅಗ್ರ ಸ್ಥಾನಕ್ಕೆ ಏರಲಿ ಎಂದರು.
Related Articles
Advertisement
ಕಲ್ಯಾಣ ಕಾರ್ಯಕ್ರಮ: ಪೊಲೀಸರ ಕಾರ್ಯದಲ್ಲಿ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಪೊಲೀಸ್ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಆರೋಗ್ಯ, ಸೇವೆ, ಬಂದೋಬಸ್ತಿಗೆ ಭತ್ಯೆ, ಬಡ್ತಿಗಳನ್ನು ನೀಡಿದೆ. ಪೊಲೀಸ್ ಗೃಹ ಯೋಜನೆ ಯಡಿ 10 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣಕ್ಕೆ ಅನುಮೋದನೆ ಹಾಗೂ ಅನುದಾನ ನೀಡಿದೆ. ಪೊಲೀಸರ ಆರೋಗ್ಯ ಕ್ಕಾಗಿ 100 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಪೊಲೀಸರ ದಕ್ಷತೆಗೆ ಅನುಗುಣವಾಗಿ ಅವರ ಕಲ್ಯಾಣ ಕಾರ್ಯಕ್ರಮಗಳಿಗೆ ವೇಗವಾಗಿ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಸಿಎಂ ಹೇಳಿದರು.
ಆಧುನೀಕರಣ: ಆಧುನೀಕರಣಕ್ಕೆ ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ಕರ್ನಾಟಕ ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ. ಸೈಬರ್ ಅಪರಾಧ ಮತ್ತು ನಾರ್ಕೋಟಿಕ್ಸ್ ತಡೆಯಲು ದೊಡ್ಡ ಪ್ರಮಾಣದಲ್ಲಿ ಆಧುನೀಕರಣ ಮಾಡುವ ಅವಶ್ಯಕತೆ ಇದೆ. ಸಿಬ್ಬಂದಿಗಳ ತರಬೇತಿ, ಆಧುನಿಕ ತಂತ್ರಜ್ಞಾನ ಬಳಕೆಯ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಹಲವಾರು ಸುಧಾರಣಾ ಕ್ರಮಗಳನ್ನು ಕರ್ನಾಟಕ ಪೊಲೀಸ್ ಕೈಗೊಂಡಿದೆ. ಆರ್ಥಿಕ ಅಪರಾಧಗಳನ್ನು ಪತ್ತೆಹಚ್ಚಲು ಎಸ್.ಎಂ.ಎಸ್ ಮೂಲಕವೇ ಪ್ರಕರಣ ದಾಖಲಿಸಿ ಖಾತೆಗಳನ್ನು ಮುಟ್ಟುಗೋಲು ಹಾಕುವ ಕ್ರಮ ಕೈಗೊಂಡಿದೆ. ಕಳ್ಳತನ ನಿಲ್ಲಿಸಲು ಕರ್ನಾಟಕ ಪೊಲೀಸರಿಗೆ ಸಾಧ್ಯವಾಗಿದೆ ಎಂದರು
ಡ್ರಗ್ಸ್ ವಿರುದ್ದದ ಸಮರ ನಿರಂತರವಾಗಿರಲಿ: ಮಾದಕವಸ್ತು ಮಾರಾಟದ ವಿರುದ್ಧ ಸಮರ ಸಾರಿರುವ ಕರ್ನಾಟಕ ಪೊಲೀಸ್ ಅತಿ ಹೆಚ್ಚು ಡ್ರಗ್ಸ್ ನ್ನು ವಶಪಡಿಸಿ ಕೊಳ್ಳಲಾಗಿದೆ. ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ನೂತನ ಕಾನೂನಿನ ಅನ್ವಯ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ. ಡ್ರಗ್ಸ್ ವಿರುದ್ದದ ಸಮರ ನಿರಂತರವಾಗಿ ನಡೆಯಬೇಕು. ಸಂಪೂರ್ಣವಾಗಿ ನಿಷೇಧ ವಾಗುವವರೆಗೂ ಪ್ರಯತ್ನ ಜಾರಿಯಲ್ಲಿರಬೇಕು. ಶಾಲಾ, ಕಾಲೇಜು, ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಬೇಕು ಎಂದು ಸಿಎಂ ಸೂಚಿಸಿದರು.