Advertisement
ಸೋಮವಾರ ಬೆಳಗ್ಗೆ ರಾಣಿಬೆನ್ನೂರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಪರ ರೋಡ್ ಶೋ, ಸಾರ್ವಜನಿಕ ಸಭೆ ನಡೆಸಿದರು. ಮಧ್ಯಾಹ್ನ 1 ಗಂಟೆಗೆ ಹಾವೇರಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣನವರ ಪರ ರೋಡ್ ಶೋ ಹಾಗೂ ಸಾರ್ವಜನಿಕರ ಸಭೆ ನಡೆಸಿದ ಬಳಿಕ ಸ್ವಕ್ಷೇತ್ರ ಶಿಗ್ಗಾವಿಯ ಬಂಕಾಪುರ, ಸವಣೂರು ಪಟ್ಟಣದಲ್ಲಿ ರೋಡ್ ಶೋ, ಸಾರ್ವಜನಿಕರ ಸಭೆ ನಡೆಸಿದರು. ಮೂರು ಕ್ಷೇತ್ರಗಳಲ್ಲಿ ಜನರ ಅಭಿಮಾನದ ಹೂಮಳೆ ಯಲ್ಲಿ ಮಿಂದೆದ್ದರು. ಎಲ್ಲ ಕಡೆಗಳಲ್ಲೂ ಕಾರ್ಯಕರ್ತರು ಹಾಗೂ ಬೆಂಬಲಿಗರಿಂದ ಅದ್ಧೂರಿ ಸ್ವಾಗತ ದೊರೆಯಿತು. “ಮುಂದಿನ ಸಿಎಂ ಬಸವರಾಜ ಬೊಮ್ಮಾಯಿ’ ಎಂಬ ಘೋಷಣೆಗಳು ಮೊಳಗಿದವು.ಹಾವೇರಿಯ ಗಾಂಧಿ ವೃತ್ತದಲ್ಲಿ ಮಾತನಾ ಡಿದ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಜೆ.ಎಚ್. ಪಾಟೀಲ, ಮಾಜಿ ಸಚಿವರಾದ ಸಿ.ಎಂ.ಉದಾಸಿ ಹಾವೇರಿ ಜಿಲ್ಲಾ ಕೇಂದ್ರ ಮಾಡಿದ್ದಾರೆ. ಕಾಂಗ್ರೆಸ್ಸಿಗರ ಕೈಯಲ್ಲಿ ಅಧಿಕಾರ ಇದ್ದರೂ ಜಿಲ್ಲೆ ರಚಿಸಲಿಲ್ಲ. ಹಾವೇರಿ ಸಮಗ್ರ ಅಭಿವೃದ್ಧಿ ಮಾಡಿದ್ದು ಬಿ.ಎಸ್. ಯಡಿಯೂರಪ್ಪ. ಯುಟಿಪಿ ಯೋಜನೆ ಮೂಲಕ ಹಿರೇಕೆರೂರ, ಬ್ಯಾಡಗಿ, ರಾಣಿಬೆ ನ್ನೂರ, ಹಾವೇರಿ ತಾಲೂಕು ಸೇರಿ ಲಕ್ಷ ಎಕರೆಗೆ ನೀರಾವರಿ ಕಲ್ಪಿಸಿದ್ದೇವೆ. ನೂರಾರು ಕೆರೆ ತುಂಬಿಸಿದ್ದೇವೆ. ಹಾವೇರಿ ಯಲ್ಲಿ ಎಂಜಿನಿ ಯರಿಂಗ್ ಕಾಲೇಜ್, ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದೇವೆ ಎಂದರು.
Related Articles
ಕಾಂಗ್ರೆಸ್ಸಿಗರು ಉತ್ತರ ಕರ್ನಾಟಕ ವಿರೋಧಿಗಳು. ಕಾಂಗ್ರೆಸ್ ಅಧಿಕಾರದಲ್ಲಿ ದ್ದಾಗ ಉತ್ತರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷ ಮಾಡಿದರು. ಕಾಂಗ್ರೆಸ್ ಅಧಿಕಾ ರ ದಲ್ಲಿದ್ದಾಗ ಸಿಎಂಗೆ ಕೆಲ ಫೈಲ್ ಬರುತ್ತಿ ದ್ದವು. ಅವುಗಳಿಗೆ “ಜಿಲೆಬಿ’ (ಜಿ-ಗೌಡ್ರು, ಲೆ-ಲಿಂಗಾಯತರು, ಬಿ-ಬ್ರಾಹ್ಮಣರು) ಎಂಬ ಹೆಸರಿಟ್ಟಿದ್ರು. ಜಿಲೆಬಿ ಫೈಲ್ ಬಂದ್ರೆ ಕಿತ್ತು ಒಗೀರಿ ಎನ್ನುತ್ತಿದ್ದರು ಎಂದು ಸಿಎಂ ಬೊಮ್ಮಾಯಿ ಹರಿಹಾಯ್ದರು.
Advertisement
25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿಸ್ವತ್ಛ ಗಾಳಿ, ನೀರು, ವಿಚಾರ ಆಡಳಿತ ಬರಲಿ ಎಂಬ ಕಾರಣಕ್ಕೆ ಹೊಸ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣವರಿಗೆ ಟಿಕೆಟ್ ಕೊಟ್ಟಿದ್ದೇವೆ. ಹಾವೇರಿ ಜನ ಸತ್ಯ, ನ್ಯಾಯ, ಸರಳತೆ, ಸಜ್ಜನಿಕೆಗೆ ಬೆಲೆ ಕೊಡುತ್ತಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣವರ ಅವರಿಗೆ ಆಡಳಿತದಲ್ಲಿ ಅಪಾರ ಅನುಭವ ಹೊಂದಿದ್ದು, ನೀವು ದ್ಯಾಮಣ್ಣವರಿಗೆ ಹಾಕುವ ಒಂದೊಂದು ಮತವೂ ನನಗೇ ಹಾಕಿದಂತೆ. ಕಾರಣ ದ್ಯಾಮಣ್ಣನವರ ಅವರನ್ನು 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕೆಂದು ಸಿಎಂ ಬೊಮ್ಮಾಯಿ ಮನವಿ ಮಾಡಿದರು. ಸಮಾಜ ಒಡೆಯುವ ಕೆಲಸ ಮಾಡಿದ ಕಾಂಗ್ರೆಸ್ಸಿಗರು ಈಗ ಬಸವಕಲ್ಯಾಣಕ್ಕೆ ರಾಹುಲ್ ಗಾಂಧಿ ಕರೆದುಕೊಂಡು ಬಂದಿದ್ದಾರೆ. ಪಾಪ ರಾಹುಲ್‌ಗೆ ಬಸವಣ್ಣನವರು ಅಂದ್ರೆ ಯಾರು ಅಂತಾನೇ ಗೊತ್ತಿಲ್ಲ. ಬಸವಣ್ಣನ ತತ್ವಗಳಿಗೆ ಕಾಂಗ್ರೆಸ್ ವಿರುದ್ಧವಾಗಿದೆ. ದೇಶ ಒಡೆದವರು ಕಾಂಗ್ರೆಸ್ಸಿಗರು. ಒಡೆದು ಆಳುವ ನೀತಿ ಕಾಂಗ್ರೆಸ್ಸಿನದು. ಕಾಂಗ್ರೆಸ್ಸಿಗರು ಗ್ಯಾರೆಂಟಿ ಯೋಜನೆ ತಂದಿದ್ದಾರೆ. ಅನ್ನಭಾಗ್ಯ ಎನ್ನುವುದು ಚುನಾವಣೆ ಸ್ಟಂಟ್. ಚುನಾವಣೆ ಮುಗಿಯುವರೆಗೂ ಗ್ಯಾರೆಂಟಿ, ಆಮೇಲೆ ಅವು ಗಳಗಂಟಿ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ.