Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ , ಬೆಂಗಳೂರಿನಲ್ಲಿ 90 ಮಿಲಿ ಮೀಟರ್ ಮಳೆ ಬಿದ್ದರೇ ತಗ್ಗು ಪ್ರದೇಶಗಳು ಜಲಾವೃತವಾಗುತ್ತದೆ. ನೀರಿಕ್ಷೆ ಮೀರಿ 100,102, 103 ಮಿಲಿ ಮೀಟರ್ ಮಳೆ ಆಗಿದೆ. ನಾನು ಈಗಾಗಲೇ ಬಿಬಿಎಂಪಿ ಆಯುಕ್ತರು, ಇಂಜಿನಿಯರ್ ಗಳೊಂದಿಗೆ ಮಾತನಾಡಿದ್ದೇನೆ , ಹಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಅದನ್ನು ಪಂಪ್ ಗಳ ಮೂಲಕ ಹೊರ ಹಾಕುವ ಕೆಲಸ ಮಾಡಲಾಗುತ್ತಿದೆ. ಹೋಂ ಗಾರ್ಡ್ ಗಳು, ಬಿಬಿಎಂಪಿ ಸಿಬ್ಬಂದಿಗಳು, ಎಸ್ ಡಿಆರ್ ಎಫ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದರು.
Related Articles
Advertisement
ಸಿಎಂ ಅವರೊಂದಿಗೆ ಸಚಿವರಾದ ಆರ್. ಅಶೋಕ್, ಮುನಿರತ್ನ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮತ್ತು ಇತರ ಅಧಿಕಾರಿಗಳು ಇದ್ದರು. ಸಿಎಂ ಚಿಕ್ಕಮಗಳೂರಿಗೆ ತೆರಳುವ ವೇಳೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.