Advertisement
ದಿನಾಂಕ 12ರಂದು ಕೊಡಗು ಹಾಗೂ ದಕ್ಷಿಣ ಕನ್ನಡ ನೆರೆ ಹಾನಿಯನ್ನು ವೀಕ್ಷಣೆ ಮಾಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂದು ಉಡುಪಿಯಲ್ಲಿ ಮೊಕ್ಕಾಂ ಹೂಡುವರು. ಜು.13ರಂದು ಬುಧವಾರ ಮಧ್ಯಾಹ್ನ 12 ಗಂಟೆಗೆ ರಸ್ತೆ ಮಾರ್ಗವಾಗಿ ಜಿಲ್ಲೆಗೆ ಪ್ರವೇಶ ಮಾಡುವ ಮುಖ್ಯ ಮಂತ್ರಿಗಳು ಭಟ್ಕಳದ ಹಾನಿಯನ್ನು ಪರಿಶೀಲಿಸಲಿದ್ದಾರೆ. ನಂತರ ಅಧಿಕಾರಿಗಳೊಂದಿಗೆ ಜಿಲ್ಲೆಯ ಮಳೆ ಹಾನಿಯ ಕುರಿತು ಚರ್ಚೆ ನಡೆಸಲಿದ್ದಾರೆ. ನಂತರ ಮುಖ್ಯ ಮಂತ್ರಿಗಳು ಮಧ್ಯಾಹ್ನ 2.45ಕ್ಕೆ ಮತ್ತೆ ಉಡುಪಿ ಜಿಲ್ಲೆಗೆ ಪ್ರಯಾಣ ಬೆಳೆಸಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ಪ್ರಥಮ ಬಾರಿಗೆ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುತ್ತಿದ್ದು ಜಿಲ್ಲೆಯ ಪ್ರಜೆಗಳು ಮುಖ್ಯಮಂತ್ರಿಗಳ ಆಗಮನದಿಂದ ಜಿಲ್ಲೆಯ ಸಮಸ್ಯೆ ಪರಿಹಾರವಾದೀತೇ ಎಂದು ಕಾತುರರಾಗಿದ್ದಾರೆ. ಜಿಲ್ಲೆಯಲ್ಲಿ ಪ್ರಮುಖವಾಗಿ ಹೆದ್ದಾರಿ ನಿರ್ಮಾಣ ಮಾಡುತ್ತಿರುವ ಕಂಪೆನಿ ಸರಿಯಾಗಿ ನಿರ್ವಹಣೆ ಮಾಡದೇ ಸ್ವತ್ತು, ಜೀವ ಹಾನಿಯಾಗುತ್ತಿದ್ದು ಕೇಳುವವರೇ ಇಲ್ಲವಾಗಿದೆ. ಭಟ್ಕಳದಿಂದ ಗೋವಾ ತನಕದ ಹೆದ್ದಾರಿ ಗುತ್ತಿಗೆ ಪಡೆದ ಕಂಪೆನಿಗಳು ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅನೇಕ ಜನರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲವಾದರೂ ಕೂಡಾ ಟೋಲ್ ವಸೂಲಾತಿಯನ್ನು ಆರಂಭಿಸಿ ವರ್ಷಗಳೇ ಕಳೆದಿದೆ. ನಗರದಲ್ಲಿ ಹೆದ್ದಾರಿಗೆ ಪಿಲ್ಲಾರ್ ಹಾಕಿ ಫ್ಲೈ ಓವರ್ ಮಾಡಬೇಕೆನ್ನುವ ಬೇಡಿಕೆ ಇದ್ದರೂ ಕೂಡಾ ಕಂಪೆನಿ ನಿರ್ಲಕ್ಷ ಮಾಡುತ್ತಿರುವುದನ್ನು ಈಗಾಗಲೇ ಮುಖ್ಯಮಂತ್ರಿಗಳಾದಿಯಾಗಿ ಮಂತ್ರಿಗಳು, ಜಿಲ್ಲೆಯ ಸಂಸದರು, ಶಾಸಕರ ಗಮನ ಸೆಳೆದಿದ್ದು ಮುಖ್ಯ ಮಂತ್ರಿಗಳ ಆಗಮನದಿಂದ ಪ್ರಜೆಗಳ ಆಸೆ ಚಿಗುರಿದೆ.
Related Articles
Advertisement
ತಾಲೂಕಿನಲ್ಲಿ ಬಿದ್ದ ಭಾರೀ ಮಳೆಗೆ ಈಗಾಗಲೇ ಲೋಕೋಪಯೋಗಿ ಇಲಾಖೆ, ತಾಲೂಕಾ ಪಂಚಾಯತ್, ಪುರಸಭೆ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಗಳಿಗೆ ಹಾನಿ ಸಂಭವಿಸಿದ್ದು ಪರಿಹಾರ ದೊರೆಯುವ ಭರವಸೆ ಚಿಗುರಿದೆ. ಹೆಸ್ಕಾಂ ಇಲಾಖೆಗೆ ಕೂಡಾ ಅಪಾರ ಹಾನಿಯಾಗಿದೆ. ರೈತರ ಬೆಳೆ ಹಾನಿಯಾದರೆ ತೋಟಗಾರಿಕಾ ಬೆಳೆಗಳೂ ಕೂಡಾ ಹಾನಿಯಾಗುವ ಲಕ್ಷಣ ಕಂಡು ಬಂದಿದೆ. ಸಂಪೂರ್ಣ ಮನೆ ಕುಸಿದವರಿಗೆ 5 ಲಕ್ಷ ರೂಪಾಯಿ ಹಾಗೂ ಭಾಗಷ: ಮನೆ ಕುಸಿತ ಉಂಟಾದವರಿಗೆ ಪರಿಹಾರ ದೊರೆಯುವ ಕುರಿತೂ ಜನತೆ ಚಿಂತನೆ ಮಾಡುತ್ತಿದ್ದಾರೆ.