ಬೆಂಗಳೂರು : ಆನಂದ್ ಸಿಂಗ್ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಎಲ್ಲವೂ ಬಗೆ ಹರಿಯುವ ವಿಶ್ವಾಸ ಇದೆ. ಖಾತೆ ಬದಲಾವಣೆಯ ವಿಚಾರದ ಬಗ್ಗೆ ವರಿಷ್ಠರಿಂದ ಯಾವುದೇ ಸೂಚನೆ ಈವರೆಗೆ ಬಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಆನಂದ್ ಸಿಂಗ್ ಅವರ ಭಾವನೆ ಅರ್ಥ ಮಾಡಿಕೊಡೊದ್ದೇನೆ. ಅವರು ಭಾವನಾತ್ಮಕ ಗಳಿಯೆಗಲ್ಲಿ ಮಾತನಾಡಿದ್ದಾರೆ. ಅವರ ಜೊತೆ ಪಕ್ಷದ ಅಧ್ಯಕ್ಷರು ಮಾತನಾಡಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ : ರಾಹುಲ್ ಗಾಂಧಿ ಪೋಸ್ಟ್ ನಮ್ಮ ಪಾಲಸಿಗೆ ವಿರುದ್ಧವಾಗಿತ್ತು : ದೆಹಲಿ ಹೈಕೋರ್ಟ್ ಗೆ ಟ್ವೀಟರ್
ನಮ್ಮದು ರಾಷ್ಟ್ರೀಯ ಪಕ್ಷ. ಪಕ್ಷದ ನಾಯಕರೂ ಮಾತನಾಡುತ್ತಾರೆ. ಆನಂದ್ ಸಿಂಗ್ ಜೊತೆ ಮಾತಾಡಿದ ಮೇಲೆ ವರಿಷ್ಟರ ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನು, ನಾಳೆ(ಗುರುವಾರ, ಆಗಸ್ಟ್ 12) ನಾನು ಮಂಗಳೂರಿಗೆ ಹೊಗುವವನಿದ್ದೇನೆ. ಅವರು ನಾಳೆ ಭೇಟಿಯಾಗುವುದೆಂದು ನಿಗದಿಯಾಗಿತ್ತು. ಆದರೇ, ಇವತ್ತು ಸಂಜೆಯೇ ಭೇಟಿಯಾಗುವ ಸಾಧ್ಯತೆ ಇದೆ. ಇಲ್ಲದಿದ್ದರೆ ನಾಡಿದ್ದು ಭೇಟಿ ಮಾಡುವಂತೆ ತಿಳಿಸಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : ನಾವು ಹೊಡೆದಾಟಕ್ಕೆ ರೆಡಿ ಇದ್ದೀವಿ.. ಅಂದ್ರೆ ನೀವು ಏನು ಸಂದೇಶ ಕೊಡ್ತೀರಾ ಈಶ್ವರಪ್ಪನವರೇ..?