Advertisement

ನಂಜನಗೂಡು ಮಂದಿರದಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ: ಸಿಎಂ ಬೊಮ್ಮಾಯಿ

12:04 PM Sep 19, 2021 | Team Udayavani |

ದಾವಣಗೆರೆ: ನಂಜನಗೂಡು ಮಂದಿರದ ಘಟನೆ ಮತ್ತೆ ಮರುಕಳಿಸದಂತೆ ಅಗತ್ಯ ಕಾನೂನಾತ್ಮಕ, ಆಡಳಿತಾತ್ಮಕ ಕ್ರಮ ತೆಗೆದುಕೊಳ್ಳಲು ಚಿಂತನೆ ನಡೆಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.

ನಂಜನಗೂಡು ಮಂದಿರ ನೆಲಸಮವಾದ ಘಟನೆ ಎಲ್ಲರ ಮನಸ್ಸಿಗೆ ನೋವು ತಂದಿದೆ. ಅಧಿಕಾರಿಗಳು ನಮ್ಮ ಗಮನವನ್ನು ಬಾರದೆ ಮಾಡಿರುವ ಘಟನೆ ಇದಾಗಿದೆ. ಹಿಂದಿನ ತೀರ್ಪುಗಳಿವೆ. ಮಂದಿರದ ಘಟನೆ ನಡೆದ ದಿನದಿಂದ ನಾನು ನಿರಂತರ ಚರ್ಚೆ ಮಾಡಿದ್ದೇನೆ. ಶಾಂತಿ ಕದಡುವ ವಿಚಾರಗಳಿಗೆ ಪೂರ್ಣ ವಿರಾಮ‌ ನೀಡುವ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಇಂತಹ ಘಟನೆ ಇದೇ ಮೊದಲಲ್ಲ, ಗುಜರಾತ್- ಮಹಾರಾಷ್ಟ್ರ ಎಲ್ಲ ಕಡೆ ಆಗಿವೆ. ನಮ್ಮ ಹಿರಿಯೂರು ಮುತ್ಸದ್ದಿತನ ತೋರಿ ಸಮಸ್ಯೆ ಬಗೆಹರಿಸಿದ್ದಾರೆ. ನಂಜನಗೂಡು ಘಟನೆ, ಕಾರ್ಯಕರ್ತರ ನಮ್ಮ ಮೇಲೆ ಹಲ್ಲೆ, ನಮ್ಮ ಜನರ ಹಕ್ಕು ಕಸಿದುಕೊಳ್ಳುವ ಪರಿಸ್ಥಿತಿ ಎಲ್ಲವನ್ನೂ ಸವಾಲಾಗಿ ಸ್ವೀಕರಿಸಿದ್ದು ಆಡಳಿತಾತ್ಮಕ, ಕಾನೂನಾತ್ಮಕ ಕ್ರಮ ತೆಗೆದುಕೊಂಡು ಘಟನೆ ಮರುಕಳಿಸದಂತೆ ನೋಡಿ ಕೊಳ್ಳುತ್ತೇವೆ. ಅಲ್ಲಿನ ಭಕ್ತರ‌ ಮನಸ್ಸಿಗೆ ಆಗಿರುವ ಘಾಸಿಯನ್ನು ಸರಿಪಡಿಸುವ ಪ್ರಯತ್ನವನ್ನು ಹಿರಿಯರ ಜೊತೆ ಚರ್ಚಿಸಿ ತೆಗೆದುಕೊಳ್ಳುತ್ತೇನೆ ಎಂದು ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ:ರಾಜಕಾರಣಕ್ಕೂ ದರ ಏರಿಕೆಗೂ ಸಂಬಂಧ ಇಲ್ಲ: ಸಚಿವ ಈಶ್ವರಪ್ಪ

Advertisement

ನಿಮಗೆಲ್ಲಾ ಒಪ್ಪಿಗೆ ಆಗುವಂತೆ ನಮ್ಮ ನಿರ್ಧಾರ ಇರುತ್ತದೆ. ನಿಮ್ಮ ನೋವು ಭಾವನೆಗೆ ಸ್ಪಂದಿಸಿ, ನಿಮ್ಮ ಮನಸ್ಸಿಗೆ ತಕ್ಕಂತೆ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ವಿನಂತಿ ಮಾಡಿದರು.

ಮೀಸಲಾತಿ ಕುರಿತು ಪರೋಕ್ಷ ಪ್ರಸ್ತಾಪ: ನಮ್ಮ ನಡುವೆ ಕೆಲ ಸೂಕ್ಷ್ಮ ವಿಚಾರಗಳಿವೆ ಎಂದು ವಿಷಯ ಪ್ರಸ್ತಾಪಿಸಿದ ಬಸವರಾಜ ಬೊಮ್ಮಾಯಿ, ಎಲ್ಲ ಸಮುದಾಯದ ಆಶೋತ್ತರ ಹೆಚ್ಚಾಗಿವೆ. ಅವರಿಗೆ ಸ್ಪಂದಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.

ಇದಕ್ಕೆ ಕಾನೂನಾತ್ಮಕವಾಗಿ, ಸಂಘಟನಾತ್ಮಕವಾಗಿ ನಿರ್ಣಯ ತೆಗೆದುಕೊಳ್ಳುವ ಅಗತ್ಯ ಇದೆ ಎಂದು ಪರೋಕ್ಷವಾಗಿ ಮೀಸಲಾತಿ ಹೆಸರು ಹೇಳದೆ ಸಮುದಾಯದ ಆಶೋತ್ತರ ಎಂದು ಹೇಳುವ ಮೂಲಕ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು

ವಿಜಯ ಯಾತ್ರೆ ಮುಂದುವರೆಯುತ್ತದೆ: ಜಿಪಂ, ತಾಪಂ, ಉಪ ಚುನಾವಣಾ ಬಗ್ಗೆ ಚಿಂತನೆ ಮಾಡಿದ್ದೇವೆ. ಎಲ್ಲ ಚುನಾವಣೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಸೊಸೈಟಿ ಚುನಾವಣೆಯನ್ನು ನಿರ್ಲಕ್ಷ್ಯ ಮಾಡುವಿದಿಲ್ಲ. ಇದೇ ಕಾರಣಕ್ಕೆ ಮೂರು ಪಾಲಿಕೆಗಳಲ್ಲಿ ಆಡಳಿತ ಹಿಡಿಯಲಿದ್ದೇವೆ. ಕಲಬುರಗಿ 24 ಸ್ಥಾನಗಳಿವೆ, ದೊಡ್ಡಬಳ್ಳಾಪುರದಲ್ಲಿ ಸಂಪೂರ್ಣ ಮೆಜಾರಿಟಿ ಬರುತ್ತೆ, ಮೈಸೂರಿನ ಮೇಯರ್‌ ಚುನಾವಣೆಯಲ್ಲಿ ಸೋಮಶೇಖರ್, ಅಲ್ಲಿನ ಸಂಸದರು ಸೇರಿದಂತೆ ಎಲ್ಲರೂ ಸೇರಿ ಬಿಜೆಪಿಯ ಮೊದಲ ಮೇಯರ್ ಆಯ್ಕೆ ಆಗುವಂತೆ ಮಾಡಿದ್ದಾರೆ ಎಂದರು.

ಇಲ್ಲಿಂದ ನಮ್ಮ ವಿಜಯಯಾತ್ರೆ ಆರಂಭವಾಗಿದೆ. ಮುಂದೆ ಬಿಬಿಎಂಪಿ ಚುನಾವಣೆಯಲ್ಲಿ ಸ್ವತಂತ್ರವಾಗಿ ಮೆಜಾರಿಟಿಯಲ್ಲಿ ಬಿಜೆಪಿ ಬರುತ್ತೆ. ಬೆಂಗಳೂರಿನ ನಾಯಕರು ಇದನ್ನು ಮಾಡುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next