Advertisement

ಕಾಂಗ್ರೆಸ್‌ಗೆ ತಾಕತ್ತು ಇದ್ದರೆ ಮೀಸಲು ನಿಲುವು ಸ್ಪಷ್ಟಪಡಿಸಲಿ: Basavaraj Bommai ಸವಾಲು

12:32 AM Apr 07, 2023 | Team Udayavani |

ಹುಬ್ಬಳ್ಳಿ: ಕಾಂಗ್ರೆಸ್‌ಗೆ ತಾಕತ್ತು ಇದ್ದರೆ ತಾನು ಮೀಸಲು ಹೆಚ್ಚಳ ಹಾಗೂ ಒಳ ಮೀಸಲಾತಿಯ ಪರವೋ, ವಿರೋಧವೋ ಎಂಬ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲೆಸೆದರು.

Advertisement

ಮೀಸಲಾತಿ ಹೆಚ್ಚಳ-ಒಳ ಮೀಸಲಾತಿ ಜಾರಿ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳ ಒಕ್ಕೂಟ ನಗರದಲ್ಲಿ ಗುರುವಾರ ಆಯೋಜಿಸಿದ್ದ ಅಭಿನಂದನ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಇದು ಪರೀಕ್ಷೆ ಕಾಲ. ಇಲ್ಲಿಯವರೆಗೂ ದಲಿತರನ್ನು ಮತ ಬ್ಯಾಂಕ್‌ ಆಗಿಸಿಕೊಂಡು ಅಧಿಕಾರ ಅನುಭವಿಸುತ್ತಾ ಬಂದಿತ್ತು. ಮೀಸಲು ಹೆಚ್ಚಳ ಹಾಗೂ ಒಳ ಮೀಸಲಾತಿ ವಿಚಾರದಲ್ಲೂ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿತ್ತು. ಕಾಂಗ್ರೆಸ್‌ ಅಸಾಧ್ಯವೆಂದು ರಾಜಕೀಯವಾಗಿ ವ್ಯಾಖ್ಯಾನಿಸುತ್ತಿದ್ದ ಮೀಸಲು ಹೆಚ್ಚಳ ಹಾಗೂ ಒಳಮೀಸಲು ನೀಡಿಕೆಯನ್ನು ಬಿಜೆಪಿ ಸರಕಾರ ಸಾಧ್ಯವಾಗಿಸಿದೆ. ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನಾಯಕರು ತಾವು ಮೀಸಲು ಹೆಚ್ಚಳ ಹಾಗೂ ಒಳಮೀಸಲು ಪರ ಅಥವಾ ವಿರೋಧವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಬಂಜಾರ, ಭೋವಿ ಸೇರಿದಂತೆ ಆರು ಸಮಾಜದವರನ್ನು ಮೀಸಲಾತಿ ಪಟ್ಟಿಯಿಂದ ತೆಗೆಯದ ರೀತಿಯಲ್ಲಿ ಆಜ್ಞೆ ಹೊರಡಿಸಿದ್ದೇನೆ ಎಂದು ಸಿಎಂ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next