Advertisement
ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಲ್ಲಿ ಸಮಗ್ರ ವರದಿ ಕೇಳಿದ್ದೇನೆ. ಸಚಿವರು ಗುರುವಾರ ವರದಿ ನೀಡಲಿದ್ದಾರೆ. ಹಾಗೆಯೇ ವಿವಿಧ ಮಠದ ಸ್ವಾಮೀಜಿಗಳು, ಬೇರೆಯವರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪತ್ರವನ್ನು ಬರೆದಿದ್ದಾರೆ ಮತ್ತು ಪರಿಷ್ಕರಣೆಯಲ್ಲಿ ಆತಂಕ ಪಡುವ ವಿಷಯ ಏನೂ ಇಲ್ಲ ಎಂಬ ವಾದವೂ ಇದೆ. ಹೀಗಾಗಿ ಈ ಎಲ್ಲ ಅಂಶಗಳನ್ನು ಪರಿಶೀಲಿಸಿ, ಶಿಕ್ಷಣ ಸಚಿವರ ವರದಿಯನ್ನು ಆಧರಿಸಿ, ವಾಸ್ತವಾಂಶ ಏನಿದೆ ಎಂಬುದನ್ನು ತಿಳಿದು ಜೂನ್ 2 ರಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಯಾರ್ಯಾರು ತಮ್ಮ ಪಠ್ಯ, ಪದ್ಯಗಳನ್ನು ವಾಪಸ್ ಪಡೆಯಲು ಪತ್ರ ಬರೆದಿದ್ದಾರೋ ಅವರೊಂದಿಗೂ ಮಾತುಕತೆ ನಡೆಸಲಿದ್ದೇನೆ ಎಂದರು.
Related Articles
Advertisement
ನಮ್ಮ ಸರಕಾರ ಬಂದ ಅನಂತರದಲ್ಲಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ಬಲಗೊಳಿಸಿದ್ದೇವೆ ಮತ್ತು ಅದಕ್ಕೊಂದು ಪ್ರತ್ಯೇಕ ವ್ಯವಸ್ಥೆಯೂ ಬಂದಿದೆ. ಲೋಕಾಯುಕ್ತ ಇದ್ದರೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲು ಎಸಿಬಿಗೆ ಆಗುತ್ತಿರಲಿಲ್ಲ. ಈಗ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲು, ದಾಳಿ ನಡೆಸಲು ಅವಕಾಶ ನೀಡಲಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲೂ ಪ್ರಕರಣ ಇರುವುದರಿಂದ ಅದಕ್ಕೂ ಕಾಯುತ್ತಿದ್ದೇವೆ ಎಂದರು.
ಕಾನೂನು ಪಾಲನೆ ಮಾಡಬೇಕು :
ಲವ್ ಜಿಹಾದ್ ಹೊಸದೇನಲ್ಲ. ಮೊದಲಿನಿಂದಲೂ ಇದೆ. ಅದರ ನಿಯಂತ್ರಣಕ್ಕಾಗಿ ಕಾನೂನು ಮಾಡಿದ್ದೇವೆ. ಆ ಕಾನೂನಿನ ಅಡಿಯಲ್ಲಿ ಎಲ್ಲವನ್ನು ಪರಿಗಣಿಸಿಸುತ್ತೇವೆ. ಯಾರು ಕೂಡ ಕಾನೂನು ಉಲ್ಲಂಘನೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.