Advertisement

ಸಿಎಂ ಸಮಯ ಕೇಳಿದ್ದಾರೆ,ಕಾಯುವೆ: ವಿಶ್ವನಾಥ್‌

09:17 AM Feb 06, 2020 | Sriram |

ಮೈಸೂರು: ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಗೆ ಕಾರಣರಾದ ನಮ್ಮ ಶಾಸಕ ಸ್ನೇಹಿತರು ಗುರುವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಬೆಂಗಳೂರಿಗೆ ಹೋಗಿ ಅವರಿಗೆಲ್ಲ ಶುಭಾಶಯ ಕೋರಿ ಬರುತ್ತೇನೆಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ತಿಳಿಸಿದ್ದಾರೆ.

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನನಗೆ ಅವಸರವಿದೆಯೇ ಹೊರತು ಸಚಿವನಾಗಲು ಅವಸರವಿಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜತೆ ಮಾತನಾಡಿದ್ದೇನೆ.

ಮುಖ್ಯಮಂತ್ರಿಯಾದವರಿಗೆ ಕೆಲ ತೊಡಕುಗಳಿರುತ್ತವೆ. ಹೀಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಿ ಎಂದು ಅವರು ಹೇಳಿದ್ದಾರೆ. ಅದಕ್ಕಾಗಿ ಕಾಯುತ್ತೇನೆ ಎಂದರು.
ನಮ್ಮನ್ನೆಲ್ಲ ಒಟ್ಟುಗೂಡಿಸಿ, ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗುವುದರಲ್ಲಿ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಪಾತ್ರ ಏನೇನೂ ಇಲ್ಲ. ಅವರಿಗೇಕೆ ಸಚಿವ ಸ್ಥಾನ ಕೊಡಬೇಕು ಎಂದು ಪ್ರಶ್ನಿಸಿದ ವಿಶ್ವನಾಥ್‌ ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡುವುದನ್ನು ಬಿಜೆಪಿಯಲ್ಲಿನ ಹಿರಿಯರೇ ಒಪ್ಪುತ್ತಿಲ್ಲ. ಹೀಗಿರುವಾಗ ಅವರಿಗೆ ಸಚಿವ ಸ್ಥಾನ ಕೊಡುವ ಅಗತ್ಯವೇನಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next