ಮೈಸೂರು: ಮೃಗಾಲಯಗಳ ನಿರ್ವಹಣೆ ಹಾಗೂ ಖರ್ಚು-ವೆಚ್ಚಗಳಿಗೆ ಹಣ ಮಂಜೂರು ಮಾಡಲು ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ತಿಳಿಸಿದರು.
ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಸಭಾಂಗಣದಲ್ಲಿ ಬುಧವಾರ ಆನ್‌ಲೈನ್ ವೇದಿಕೆಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮೃಗಾಲಯ ಪ್ರಾಧಿಕಾರದ ಆಡಳಿತ ಮಂಡಳಿಸಭೆಯಲ್ಲಿ ಮಾತನಾಡಿದ ಅವರು, ಎಲ್ಲಮೃಗಾಲಯಗಳ ನಿರ್ವಹಣೆಗೆ 17 ಕೋಟಿ ರೂ.ಹಣ ಮಂಜೂರು ಮಾಡಲು ಸಿಎಂ ಸಮ್ಮತಿಸಿದ್ದು,ಶೀಘ್ರವೇ ಹಣ ಮಂಜೂರಾಗಲಿದೆ ಎಂದರು.
ಬಳಿಕ ನಡೆದ ಆಡಳಿತ ಮಂಡಳಿ ಸಭೆಯಲ್ಲಿ2021 -22ನೇ ಸಾಲಿನ ಮೃಗಾಲಯ ಪ್ರಾಧಿಕಾರದ ಆದಾಯ ಮತ್ತು ವೆಚ್ಚಗಳ ಅಂದಾಜು ಬಜೆಟ್ ಅನುಮೋದನೆ ನೀಡುವುದು, ಗದಗ ಮತ್ತು ಹಂಪಿ ಮೃಗಾಲಯಗಳ ಪ್ರಾಣಿ-ಪಕ್ಷಿಗಳಿಗೆ ಚಿಕಿತ್ಸೆ ನೀಡುವ ಬಗ್ಗೆ ಅಗತ್ಯವಾದ ವೈದ್ಯಕೀಯ ಉಪಕರಣ ಖರೀದಿಸಿ, ಮೃಗಾಲಯಗಳಿಗೆ ನೀಡಿರುವ ಕಾರ್ಯಕ್ಕೆ ಘಟನೋತ್ತರ ಮಂಜೂರಾತಿ ನೀಡುವ ಸಂಬಂಧಸಭೆಯಲ್ಲಿ ಚರ್ಚಿಸಲಾಯಿತು.
ಕೋವಿಡ್ ಹಿನ್ನೆಲೆ ಪ್ರವಾಸಿಗರ ಹಿತದೃಷ್ಟಿಯಿಂದ ಇಳಿಸಿದ್ದ ಬ್ಯಾಟರಿ ಚಾಲಿತ ವಾಹನ ದರಗಳನ್ನು ಪರಿಷ್ಕರಿಸಲು ಅನುಮೋದನೆ ನೀಡುವುದು, ಮೈಸೂರು ಮೃಗಾಲಯದ ನೇರ ಗುತ್ತಿಗೆ ನೌಕರರಿಗೆ ಮಾಡಿಸಿರುವ ಗ್ರೂಪ್ ಗ್ರಾಜುಟಿ ಸ್ಕೀಮ್ ನವೀಕರಣಮಾಡುವುದು, ಕಾರಂಜಿ ಕೆರೆ ದೋಣಿ ವಿಹಾರಗುತ್ತಿಗೆ ಅವಧಿ ವಿಸ್ತರಣೆ, ಮೈಸೂರು ಮೃಗಾಲಯದಪ್ರವೇಶ ಟಿಕೆಟ್ ಮತ್ತು ವಿದ್ಯಾರ್ಥಿಗಳ ರಿಯಾಯಿತಿ ಟಿಕೆಟ್ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನದ ಪ್ರವೇಶ ಟಿಕೆಟ್ ದರಗಳನ್ನು ಪರಿಷ್ಕರಿಸಲು ಅನುಮೋದನೆ ನೀಡುವ ಸಂಬಂಧ ಪ್ರಾಧಿಕಾರದ ಸದಸ್ಯರು ಹಾಗೂ ಅಧಿಕಾರಿಗಳು ವಿಷಯ ಪ್ರಸ್ತಾಪಿಸಿಚರ್ಚೆ ನಡೆಸಿದರು.
ಶೀಘ್ರವೇ ಒರಾಂಗುಟನ್: ಪ್ರಾಣಿ ವಿನಿಮಯದಡಿ 02 ಒರಾಂಗುಟನ್‌ಗಳನ್ನು ಸಿಂಗಾಪುರ್ ಮೃಗಾಲಯದಿಂದ ಮೈಸೂರು ಮೃಗಾಲಯಕ್ಕೆತರಲು ಸಭೆಯಲ್ಲಿ ಚರ್ಚಿಸಿ ಒಪ್ಪಿಗೆಪಡೆಯಲಾಯಿತು. ಜೊತೆಗೆ ಅವುಗಳ ಸಾಕಾಣಿಕೆ ಬಗ್ಗೆ ತರಬೇತಿ ಪಡೆಯಲು ಪಶುವೈದ್ಯಾಧಿಕಾರಿ ಡಾ.ಕೆ.ವಿ. ಮದನ್ ಸಿಂಗಾಪುರ ಮೃಗಾಲಯಕ್ಕೆ ಭೇಟಿ ನೀಡಲು ಅನುಮತಿ ನೀಡಲಾಯಿತು.ಕೇಂದ್ರ ಮೃಗಾಲಯ ಪ್ರಾಧಿಕಾರದ 10 ವರ್ಷವಿಶನ್ ಪ್ಲಾನ್ ಅಡಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಸೂರು ಮೃಗಾಲಯವನ್ನುಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮೈಸೂರು ಮೃಗಾಲಯ ಹಾಗೂ ಕೆನಡಾದ ಟೊರೆಂಟೊ ಮೃಗಾಲಯ ನಡುವಿನ ಸಹಭಾಗಿತ್ವಕ್ಕೆ ಅನುಮೋದನೆ ನೀಡುವ ಸಂಬಂಧ ಚರ್ಚೆ ನಡೆಸಲಾಯಿತು.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಫಾರಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ವಿಶೇಷ ಸಫಾರಿಗಾಗಿ ವಾಹನಗಳನ್ನು ಖರೀದಿಸುವುದು, ಉದ್ಯಾನವನದ ಪ್ರಾಣಿ-ಪಕ್ಷಿಗಳಿಗೆ ಹಾಗೂ ಪ್ರವಾಸಿಗರಿಗೆಅನುಕೂಲವಾಗುವಂತೆ ಕಾವೇರಿ ನೀರನ್ನು ಒದಗಿಸುವ ಸಲುವಾಗಿ ಪ್ರತ್ಯೇಕ ಕೊಳವೆ ಅಳವಡಿಸುವ ಕಾಮಗಾರಿ ಕುರಿತು, ಗದಗಮೃಗಾಲಯದ ವಾಹನ ನಿಲ್ದಾಣ ಹಾಗೂಉಪಾಹಾರ ಗೃಹದ ಬಾಡಿಗೆ ಮೊತ್ತವನ್ನುಪಾವತಿಸುವ ಬಗ್ಗೆ ಚರ್ಚೆ ನಡೆಸಲಾಯಿತು.