Advertisement

ರಸ್ತೆಗಳು ಜಲಾವೃತ : ಸಿಎಂ ವೈಮಾನಿಕ ಸಮೀಕ್ಷೆ

09:51 AM Aug 10, 2019 | Team Udayavani |

ಬಾಗಲಕೋಟೆ : ಜಿಲ್ಲೆಯ ಆರು ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಹುತೇಕ ಜಲಾವೃತಗೊಂಡಿರುವುದರಿಂದ ಸಿಎಂ ಯಡಿಯೂರಪ್ಪ ಅವರು, ರಸ್ತೆ ಮೂಲಕ ತೆರಳುವ ಬದಲು, ವೈಮಾನಿಕ ಸಮೀಕ್ಷೆ ನಡೆಸಲು ಮುಂದಾಗಿದ್ದಾರೆ.

Advertisement

ಮುಧೋಳದಲ್ಲಿ ವಾಸ್ತವ್ಯ ಮಾಡಿರುವ ಸಿಎಂ, ಶುಕ್ರವಾರ ಬೆಳಗ್ಗೆ ಜಮಖಂಡಿ ತಾಕೂಕಿನ ಜಲಾವೃತಗೊಂಡಿರುವ ಚಿಕ್ಕಪಡಸಲಗಿ, ಹಿಪ್ಪರಗಿ, ಮಹಾಲಿಂಗಪುರ ಬಳಿಯ ಡವಳೇಶ್ವರದಲ್ಲಿ ಪ್ರವಾಹ ಪರಿಸ್ಥಿತಿ ವೈಮಾನಿಕ ಸಮೀಕ್ಷೆ ನಡೆಸುವರು. ಅಲ್ಲಿಂದ ಬಾಗಲಕೋಟೆಯ ಹಿನ್ನೀರ ಪ್ರದೇಶ ಬಳಿಕ ಮೂರು ನದಿಗಳ ಸಂಗಮವಾದ ಕೂಡಲಸಂಗಮದ ಸುತ್ತ ವೈಮಾನಿಕ ಸಮೀಕ್ಷೆ ನಡೆಯಲಿದೆ. ನಂತರ ಬಾದಾಮಿ ತಾಲೂಕಿನಲ್ಲಿ ಮಲಪ್ರಭಾ ನದಿಯಿಂದ ಬಾಧಿತಗೊಂಡ ಗ್ರಾಮಗಳ ವೈಮಾನಿಕ ಸಮೀಕ್ಷೆ ಕೈಗೊಂಡು, ಬಾಗಲಕೋಟೆಗೆ ಆಗಮಿಸಿ, ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸುವರು.

ಬೆಳಗ್ಗೆ ಮುಧೋಳ ನಗರದಲ್ಲಿ ನಿರಾಶ್ರಿತರನ್ನು ಭೇಟಿ ಮಾಡಿ, ಸಮಸ್ಯೆ ಆಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next