Advertisement
ಫ್ಯಾಷನ್ ಲೋಕದಲ್ಲಿ ಮತ್ತೆ ಲಗ್ಗೆ ಇಟ್ಟಿರುವ ವಸ್ತುಗಳಲ್ಲಿ, ಸದ್ಯಕ್ಕೆ ಟ್ರೆಂಡ್‌ಆಗುತ್ತಿರುವ ಕ್ಲಚ್ ಕೂಡಾ ಒಂದು. ಇದು, ಪರ್ಸ್‌ಗಿಂತ ದೊಡ್ಡದಾದ ಮತ್ತು ಬ್ಯಾಗ್‌ಗಿಂತ ಚಿಕ್ಕದಾದ, ಚೊಕ್ಕದಾದ ಹಾಗೂ ಟ್ರೆಂಡಿ ಆಗಿರುವ ವಾಲೆಟ್.
ದೊಡ್ಡ ಹ್ಯಾಂಡ್ ಬ್ಯಾಗಿನೊಳಗೆ ಈ ಪುಟ್ಟ ಕ್ಲಚ್‌ಅನ್ನು ಆರಾಮಾಗಿ ಕೊಂಡೊಯ್ಯಬಹುದು. ಮದುವೆ, ಹಬ್ಬ, ಸಮಾರಂಭ, ಪಾರ್ಟಿಗಳಿಗೆ ಹೋದಾಗ ಬ್ಯಾಗನ್ನು ಕಾರಿನಲ್ಲೋ, ಬೈಕಿನಲ್ಲೋ ಬಿಟ್ಟು, ಬರೀ ಕ್ಲಚ್ ಅನ್ನು ತೆಗೆದುಕೊಂಡು ಹೋಗಬಹುದು. ಅಗತ್ಯ ವಸ್ತುಗಳಾದ ಹಣ, ಡೆಬಿಟ್-ಕ್ರೆಡಿಟ್ ಕಾರ್ಡ್, ಮನೆ ಮತ್ತು ಗಾಡಿಯ ಕೀ, ಮೊಬೈಲ್, ಪೆನ್ ಅಷ್ಟೇ ಅಲ್ಲದೆ, ಲಿಪ್‌ಸ್ಟಿಕ್, ಪುಟ್ಟ ಕನ್ನಡಿ, ಟಿಶ್ಯೂ, ಐ ಲೈನರ್ ಮುಂತಾದ ಮೇಕಪ್ ಸಾಮಗ್ರಿಗಳನ್ನೂ ಇದರೊಳಗೆ ಇಡಬಹುದು. ಎರಡು ವಿಧಗಳಿವೆ
ಧರಿಸುವ ಬಟ್ಟೆಯಷ್ಟೇ, ಕೈಯಲ್ಲಿ ಹಿಡಿವ ಆ್ಯಕ್ಸೆಸರೀಸ್‌ಗಳೂ ಪ್ರಾಮುಖ್ಯತೆ ಪಡೆಯುವ ಈ ದಿನಗಳಲ್ಲಿ, ಕ್ಲಚ್‌ಗಳಲ್ಲಿ ಎರಡು ವಿಧಗಳನ್ನು ಕಾಣಬಹುದು. ಒಂದು-ದಿನನಿತ್ಯ ಉಪಯೋಗಿಸುವ ವಾಟರ್‌ಪ್ರೂಫ್ ಮೆಟೀರಿಯಲ್‌ನ ಕ್ಲಚ್‌ಗಳು. ಆಫೀಸ್‌ಗೆ, ಕಾಲೇಜಿಗೆ ಹೋಗುವಾಗ ಅಗತ್ಯ ವಸ್ತುಗಳನ್ನು ಇಡುವ ಈ ಕ್ಲಚ್‌ಗಳಲ್ಲಿ ಹೆಚ್ಚು ಆಡಂಬರ ಕಾಣಿಸದು. ಎರಡನೆಯದು-ಸಮಾರಂಭಗಳಿಗೆ ಹೋಗುವಾಗ ಬಳಸುವ ಕ್ಲಚ್‌ಗಳು. ಇವುಗಳು ಕನ್ನಡಿ, ಗಾಜು, ಬಣ್ಣದಕಲ್ಲು, ಮುತ್ತು, ಮಣಿ, ದಾರ, ಉಣ್ಣೆ, ಚಿನ್ನ- ಬೆಳ್ಳಿ ಅಥವಾ ಇತರ ಹೊಳೆಯುವ ವಸ್ತುಗಳನ್ನು ಬಳಸಿ, ಕಸೂತಿ ಮಾಡಿರುವ ವಿನ್ಯಾಸಗಳಿಂದ ನೋಡುಗರ ಕಣ್ಮನ ಸೆಳೆಯುತ್ತವೆ.
Related Articles
ಲೆದರ್ (ಚರ್ಮ), ಆರ್ಟಿಫಿಷಿಯಲ್ ಲೆದರ್, ಪ್ಲಾಸ್ಟಿಕ್, ರಬ್ಬರ್‌ನಂಥ ವಸ್ತುಗಳಿಂದ ತಯಾರಿಸಿದ ಕ್ಲಚ್‌ಗಳನ್ನು ಆಫೀಸ್‌ವೇರ್ ಜೊತೆ ಬಳಸಬಹುದು. ಪಾರ್ಟಿವೇರ್ ಜೊತೆಗೆ, ಕಾಟೂìನ್, ಕಾಮಿಕ್ ಕ್ಯಾರೆಕ್ಟರ್, ಡೂಡಲ್, ವಾರ್ಲಿಕಲೆ, ಇನ್ನಿತರ ಬಗೆಯ ಚಿತ್ರಕಲೆ, ಅನಿಮಲ್ ಪ್ರಿಂಟ್, ಫ್ಲೋರಲ್ ಪ್ರಿಂಟ್, ಪೋಲ್ಕಾ ಡಾಟ್ಸ್, ನಿಮ್ಮದೇ ಭಾವಚಿತ್ರ… ಹೀಗೆ ಅನೇಕ ಬಗೆಯ ವಿನ್ಯಾಸಗಳನ್ನು, ಬಣ್ಣಗಳನ್ನು, ಪ್ರಿಂಟ್‌ಗಳನ್ನೂ ಆಯ್ಕೆ ಮಾಡಬಹುದು. ಮೊಬೈಲ್ ಕವರ್‌ಗಳನ್ನು ಆಗಾಗ ಬದಲಿಸಿದಂತೆ, ಕ್ಲಚ್‌ಗಳ ಮೇಲೂ ಪ್ರಯೋಗ ಮಾಡಬಹುದು. ಆದರೆ, ಸಾಂಪ್ರದಾಯಿಕ ಉಡುಗೆಗಳ ಜೊತೆ ಫಳ ಫಳ ಹೊಳೆಯುವ ಕ್ಲಚ್‌ಗಳೇ ಚಂದ!
Advertisement
ನೇತಾಡುವ ಕ್ಲಚ್ಗಳುಕ್ಲಚ್ಗಳನ್ನು ಕೈಯಲ್ಲಿ ಹಿಡಿದು ಓಡಾಡುವುದು ಕಷ್ಟ ಆಗಬಾರದೆಂದು ಇದೀಗ ಅವುಗಳಿಗೆ ಸ್ಟ್ರಾಪ್, ಚೈನ್ ಮತ್ತು ಬೆಲ್ಟ್‌ಗಳನ್ನು ಪೋಣಿಸುವ ಆಯ್ಕೆಯೂ ಲಭ್ಯ ಇವೆ. ಬೇಕಿದ್ದರೆ ಇವುಗಳನ್ನು ಲಗತ್ತಿಸಬಹುದು, ಬೇಡವಾದರೆ ಬಿಚ್ಚಿಟ್ಟು ಕ್ಲಚ್ ಅನ್ನು ಮಾತ್ರ ಕೈಯಲ್ಲಿ ಹಿಡಿದು ಓಡಾಡಬಹುದು. ಬಹಳಷ್ಟು ಉದ್ದಕ್ಕಿರುವ ಈ ಚೈನ್ ಅಥವಾ ಸ್ಟ್ರಾಪ್‌ಗ್ಳಿಂದಾಗಿ ಈ ಕ್ಲಚ್‌ಗಳು ಸೊಂಟದ ಬಳಿ ಸ್ಲಿಂಗ್ (sling) ಬ್ಯಾಗ್‌ನಂತೆ ಜೋತಾಡುತ್ತವೆ. ಸೆಲೆಬ್ರಿಟಿ ಕ್ಲಚ್
ಸೆಲೆಬ್ರಿಟಿಗಳ ಡ್ರೆಸ್‌ನಷ್ಟೇ ಅವರ ಕ್ಲಚ್‌ಗಳೂ ಕ್ಯಾಮೆರಾ ಕಣ್ಣನ್ನು ಆಕರ್ಷಿಸುತ್ತವೆ. ನೆಚ್ಚಿನ ಸೆಲೆಬ್ರಿಟಿ ಯಾವ ಡ್ರೆಸ್ ಜೊತೆಗೆ ಯಾವ ಬಗೆಯ ಕ್ಲಚ್ ಅನ್ನು ಮ್ಯಾಚ್ ಮಾಡಿದ್ದಾರೆ ಅಂತ ಕುತೂಹಲದಿಂದ ಗಮನಿಸುವ ಹುಡುಗಿಯರಿಗೂ ಕಡಿಮೆಯಿಲ್ಲ. ಇತ್ತೀಚೆಗೆ, ಹಳದಿ ಬಣ್ಣದ ಸ್ಲಿàವ್‌ಲೆಸ್ ಡ್ರೆಸ್ ಜೊತೆಗೆ ಕಪ್ಪು ಬಣ್ಣದ ಸಾದಾ ಕ್ಲಚ್ ಹಿಡಿದು ಮಾಧ್ಯಮದವರಿಗೆ ಪೋಸು ಕೊಟ್ಟ ಶ್ರದ್ಧಾ ಕಪೂರ್ ಫೋಟೊವನ್ನು ನೀವೂ ನೋಡಿರಬಹುದು. ಕ್ಲಚ್ ವರೈಟೀಸ್
1. ಜ್ಯುವೆಲ್ ಬಾಕ್ಸ್ ಕ್ಲಚ್ ಬಾಕ್ಸ್- ಅದ್ಧೂರಿಯಾದ ಸೀರೆ, ಲೆಹೆಂಗಾದಂಥ ಉಡುಪುಗಳ ಜೊತೆಗೆ ಈ ಕ್ಲಚ್.
2. ಎನ್‌ವಲಪ್ ಕೇಸ್ ಕ್ಲಚ್ ಬ್ಯಾಗ್- ಆಫೀಸ್‌ನ ಫಾರ್ಮಲ್ ಮೀಟಿಂಗ್‌ಗಳಿಗೆ ಹೋಗುವಾಗ ಇದನ್ನು ಜೊತೆಗೆ ಒಯ್ಯಬಹುದು.
3. ಮಿನಿ ಬ್ಲಾಕ್ ಲೆದರ್ ಕ್ಲಚ್ ಬ್ಯಾಗ್- ಬಹುತೇಕ ಎಲ್ಲ ದಿರಿಸಿಗೂ, ಸಂದರ್ಭಕ್ಕೂ ಹೊಂದುವ ಕ್ಲಚ್ ಇದು.
4. ಗ್ಲಿಟರಿಂಗ್ ಕ್ಲಚ್ ಬ್ಯಾಗ್- ನೈಟ್ ಪಾರ್ಟಿಗಳಿಗೆ ಹೋಗುವಾಗ ಕೊಂಡೊಯ್ಯಲು ಹೆಚ್ಚು ಸೂಕ್ತ.
5. ಪೊಟ್ಲಿಸ್ ಕ್ಲಚ್ ಬ್ಯಾಗ್- ಎಲೆ-ಅಡಿಕೆ ಸಂಚಿಯನ್ನು ಹೋಲುವ ಈ ಕ್ಲಚ್‌ಗಳ ಮೇಲೆ ಜರಿಯ ಕಸೂತಿ ಇರುತ್ತದೆ.
6. ಸ್ಟ್ರೈಪ್ಡ್ ಕ್ಲಚ್- ಯಾವುದೇ ಚಿತ್ತಾರವಿಲ್ಲದ ಪ್ಲೇನ್ ದಿರಿಸಿನ ಜೊತೆಗೆ ಈ ಕ್ಲಚ್ ಮ್ಯಾಚ್ ಮಾಡಬಹುದು. ಅದಿತಿಮಾನಸ. ಟಿ. ಎಸ್.