ವಿದ್ಯಾನಗರ: ಕ್ಲಬ್‌ಗಳು ವಿದ್ಯಾರ್ಥಿಗಳ ಬೌದ್ಧಿಕ ಕ್ರಿಯಾತ್ಮಕ ಚಟುವಟಿಕೆಗಳಿಗೆ ಸಹಾಯಕ. ಪ್ರತಿ ಯೊಂದು ಕ್ಲಬ್‌ಗಳು ವ್ಯತ್ಯಸ್ತವಾದ ರೀತಿಯಲ್ಲಿ ಮಕ್ಕಳ ಜಾಣ್ಮೆ ಮತ್ತು ಚಿಂತನಾಶೀಲತೆಯನ್ನು ಹೊರ ತರುವ ಪ್ರಯತ್ನ ಮಾಡುತ್ತದೆ ಎಂದು ರಾಜ್ಯಪ್ರಶಸ್ತಿ ವಿಜೇತ ಅಧ್ಯಾಪಕ ಬಿಜು ಕಾವಿಲ್ ಹೇಳಿದರು.
ಕಾಸರಗೋಡು ಹಿರಿಯ ಪ್ರಾಥ ಮಿಕ ಶಾಲೆ ಕಾಸರಗೋಡಲ್ಲಿ ವಿವಿಧ ಕ್ಲಬ್‌ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೂರಕವಾದ ಪ್ರವಾಸಗಳು, ಗೋಷ್ಠಿಗಳು, ಹೊಸ ಹೊಸ ವಿಚಾ ರಗಳ ಬಗ್ಗೆ ಚರ್ಚೆ ಹಾಗೂ ಇನ್ನಿತರ ಸಂದರ್ಭೋಚಿತ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಎಂದು ಅವರು ಹೇಳಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಲೀಲಾ ಟೀಚರ್ ಅವರ ಅಧ್ಯಕ್ಷ ತೆಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಜಯ ದೇವನ್ ಮಾಸ್ತರ್ ಸುರೇಖಾ ಟೀಚರ್ ಅವರು ಶುಭ ಹಾರೈಸಿದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ನಂದ ಕುಮಾರ್ ಸ್ವಾಗತಿಸಿ ಪ್ರಸಾದ್ ಮಾಸ್ಟರ್ ಅವರು ವಂದಿಸಿದರು.