ಬೆಂಗಳೂರು: ಮೋಡಬಿತ್ತನೆಗಾಗಿಯೇ ಬಳಸ ಲಾಗುವ ವಿಶೇಷ ವಿಮಾನಗಳ ತಯಾರಿಕೆಗೆ ಪ್ರತಿಷ್ಠಿತ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ., (ಎಚ್‌ಎಎಲ್) ಆಸಕ್ತಿ ಹೊಂದಿದ್ದು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಹಾಗೊಂದು ವೇಳೆ ಇದು ಸಾಧ್ಯವಾದರೆ, ಮುಂದಿನ ದಿನಗಳಲ್ಲಿ ಮೋಡಬಿತ್ತನೆ ಮತ್ತಷ್ಟು ಅಗ್ಗವಾಗಲಿದೆ.
“ರಾಜ್ಯದಲ್ಲಿ ಮೋಡಬಿತ್ತನೆಗಾಗಿ ಅಮೆರಿಕದಿಂದ ವಿಮಾನಗಳನ್ನು ಪೂರೈಕೆ ಮಾಡಿಕೊಳ್ಳಲಾಗುತ್ತಿದೆ. ಈ ವಿಮಾನಗಳನ್ನು ಎಚ್‌ಎಎಲ್ ಕೂಡ ನಿರ್ಮಿಸಬಹುದು’ ಎಂದು ಈಚೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಪತ್ರ ಬರೆದಿದೆ. ದೇಶದ ಪ್ರತಿಷ್ಠಿತ ಸಂಸ್ಥೆಯು ಈ ನಿಟ್ಟಿನಲ್ಲಿ ಆಸಕ್ತಿ ತೋರಿಸಿರುವುದು ಸ್ವಾಗತಾರ್ಹ.
ಇದು ಸಾಕಾರಗೊಂಡಲ್ಲಿ ಸಾಕಷ್ಟು ಅನುಕೂಲ ಆಗಲಿದೆ. ಪತ್ರ ಬರೆದಿರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಇಲಾಖೆಯ ಮುಖ್ಯ ಎಂಜಿನಿಯರ್ ಡಾ.ಎಚ್.ಎಸ್. ಪ್ರಕಾಶ್ ಕುಮಾರ್ ತಿಳಿಸಿದರು.
ನಗರದ ಹೋಟೆಲ್ ಲಿ. ಮೆರಿಡಿಯನ್‌ನಲ್ಲಿ ಗುರುವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಂಯುಕ್ತ ವಾಗಿ ಹಮ್ಮಿಕೊಂಡಿದ್ದ ಮೋಡಬಿತ್ತನೆ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿ ರಣದಲ್ಲಿ ಭಾಗವಹಿಸಿ ನಂತರ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಇಸ್ರೇಲ್, ಚೀನಾ ಸೇರಿ ಜಗತ್ತಿನಾದ್ಯಂತ ಮೋಡಬಿತ್ತನೆ ಮಾಮೂಲಿ ಆಗಿದೆ. ಇದಕ್ಕೆ ಬಳಸಲಾಗುವ ವಿಮಾನಗಳನ್ನು ರೂಪಿಸುತ್ತಿರುವ ಏಕೈಕ ಕಂಪೆನಿ ಡಬುಎಂಐ (ವೆದರ್ ಮಾಡಿ ಫಿಕೇಷನ್ ಇಂಕ್). ಇದು ರೂಪಿಸಿರುವ ನಾಲ್ಕೂ ವಿಮಾನಗಳು ಭಾರತದಲ್ಲೇ ಇವೆಎಂದು ಅವರು ಹೇಳಿದರು.