Advertisement
ಬೊಕ್ಕಪಟ್ಟಣ: ಒಂದು ಕಾಲದಲ್ಲಿ ಮಂಗಳೂರಿನ “ಟ್ರೇಡ್ ಮಾರ್ಕ್’ ಎನಿಸಿದ್ದ ವಿವಿಧ ಕಾರ್ಖಾ ನೆಗಳ “ಮಂಗಳೂರು ಹೆಂಚು’ ಇಂದು ಇತಿಹಾಸದ ಪುಟ ಸೇರುತ್ತಿದ್ದು, ನಗರದ ಒಂದೊಂದೇ ಹೆಂಚಿನ ಕಾರ್ಖಾನೆಗಳು ಸದ್ದಿಲ್ಲದೆ ಬಾಗಿಲು ಎಳೆದು ಕೊಳ್ಳುತ್ತಿವೆ!
Related Articles
Advertisement
ಅದರಲ್ಲಿಯೂ ಸ್ವಾತಂತ್ರ್ಯ ಪೂರ್ವದಲ್ಲಿ ಅವಿಭಜಿತ ದ.ಕ. ಜಿಲ್ಲೆಯು ಹೆಂಚು ಉದ್ಯಮಕ್ಕೆ ಹೆಸರುವಾಸಿಯಾಗಿತ್ತು. ದೇಶಾದ್ಯಂತ ಮಾತ್ರವಲ್ಲದೆ ಯುರೋಪ್, ಆಫ್ರಿಕಾ ಖಂಡಗಳಿಗೆ ಇಲ್ಲಿಂದಲೇ ಹೆಂಚುಗಳು ರಫ್ತಾಗುತ್ತಿದ್ದವು. ಸಾವಿರಾರು ಕುಟುಂಬಗಳು ಈ ಉದ್ಯಮವನ್ನು ಆಶ್ರಯಿ ಸಿದ್ದವು. ಆದರೆ ಬರಬರುತ್ತಾ ಹೆಂಚಿನ ಮನೆ, ಅಂಗಡಿಗಳು ಕಾಂಕ್ರೀಟ್‌ಮಯವಾಗ ತೊಡಗಿತು.ಫೈಬರ್, ಸಿಮೆಂಟ್ ಶೀಟು ಗಳೂಹೆಂಚಿನ ಸ್ಥಳವನ್ನು ಆಕ್ರಮಿಸಿದೆ! ಆವೆ ಮಣ್ಣು ಸಹಿತ ಕಚ್ಚಾವಸ್ತುಗಳ ಕೊರತೆ, ಇತರ ವಸ್ತುಗಳ ಬೆಲೆ ಏರಿಕೆ ಏಟಿನಿಂದ ಕಾರ್ಖಾನೆಗಳಿಗೆ ಹೊಡೆತ ಬೀಳಲು ಶುರುವಾಗಿತ್ತು. ಹೆಂಚಿನಿಂದ
ಮನೆ ತಂಪು!
ಹೆಂಚಿನ ಛಾವಣಿ ಹಾಕಿರುವ ಮನೆಗಳು ತಂಪಾಗಿರುತ್ತವೆ. ಈಗಲೂ ಮಂಗಳೂರು ನಗರ ಸೇರಿದಂತೆ ಗ್ರಾಮಾಂತರ ಭಾಗದ ಹಲವು ಕಡೆಗಳಲ್ಲಿ ಹೆಂಚಿನ ಮನೆಗಳನ್ನೇ ಕಾಣಬಹುದು. ಇದು ಪರಿಸರ ಸ್ನೇಹಿಯೂ ಹೌದು. ಒಂದು ಹೆಂಚಿಗೆ ಹಾನಿಯಾದರೆ ಸುಲಭವಾಗಿ ಬದಲಾಯಿಸಬಹುದು. ಕಾಂಕ್ರೀಟ್ ಕಟ್ಟಡಗಳಿಗೆ ಹೋಲಿಸಿದರೆ ತಂಪು ಮಾತ್ರವಲ್ಲದೆ ಆರೋಗ್ಯದ ಹಿತದೃಷ್ಟಿಯಿಂದಲೂ ಬಹು ಉಪಯೋಗಿ. ಜತೆಗೆ ವಿವಿಧ ವಿನ್ಯಾಸದ ಕಲಾತ್ಮಕ ಹೆಂಚುಗಳು ಲಭ್ಯವಿದೆ. ಕಾಲ ಬದಲಾದಂತೆ ಹೆಂಚು ಉದ್ಯಮಕ್ಕೆ ಸಮಸ್ಯೆ
ಮಂಗಳೂರು ಹೆಂಚು ಜಗತøಸಿದ್ಧವಾಗಿತ್ತು. ಸಾವಿರಾರು ಮಂದಿ ಇದೇ ಉದ್ಯಮವನ್ನೇ ನಂಬಿಕೊಂಡಿದ್ದರು. ಆದರೆ ಕಾಲ ಬದಲಾದಂತೆ ಹೆಂಚು ಉದ್ಯಮಕ್ಕೆ ಸಮಸ್ಯೆ ಎದುರಾಯಿತು. ಪರಿಣಾಮವಾಗಿ ಒಂದೊಂದೇ ಕಾರ್ಖಾನೆಗಳು ಬಾಗಿಲು ಹಾಕಿಕೊಂಡಿತು. ಸದ್ಯ ಮಂಗಳೂರಿನಲ್ಲಿ ಎಲ್ಲ ಹೆಂಚು ಕಾರ್ಖಾನೆಗಳು ಬಾಗಿಲು ಹಾಕಿದಂತಾಗಿದೆ. ಬೆರಳೆಣಿಕೆ ಕಾರ್ಖಾನೆಗಳು ಸದ್ಯ ಗುರುಪುರ ಕುಂದಾಪುರ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವುದಷ್ಟೇ ಆಶಾದಾಯಕ ಸಂಗತಿ..
– ವಸಂತ ಕುಕ್ಯಾನ್,
ಕಾರ್ಮಿಕ ಮುಖಂಡರು, ಹೆಂಚು ಉದ್ಯಮ ವಲಯ - ದಿನೇಶ್ ಇರಾ