Advertisement

ಜಿಗೀಷದ್‌ ಯಾಗದಿಂದ ಸರ್ವರ ಹಿತ, ಸುಖ : ನಿತ್ಯಾನಂದ ಸ್ವಾಮೀಜಿ

12:03 PM Apr 19, 2018 | |

ಪಾವಂಜೆ: ವಿಶ್ವ ಜಿಗೀಷದ್‌ ಯಾಗದಿಂದ ಸರ್ವರ ಹಿತ ಮತ್ತು ಸುಖವನ್ನು ಬಯಸಿ, ಒಗ್ಗಟ್ಟಿನಿಂದ ರಾಷ್ಟ್ರದ ಗೌರವವನ್ನು ರಕ್ಷಿಸುವುದು ನಮ್ಮೆಲ್ಲರ ಉದ್ದೇಶವಾಗಬೇಕು. ಈ ಮೂಲಕ ಭಾರತವು ವಿಶ್ವ ಗುರುವಾಗಲಿ. ಕಲುಷಿತಗೊಂಡಿರುವ ಸಮಾಜವನ್ನು ಆಧ್ಯಾತ್ಮಿಕ ಚಿಂತನೆಯಿಂದ ಪರಿವರ್ತನೆ ಮಾಡಬಹುದಾಗಿದೆ ಎಂದು ಚಿಕ್ಕಮಗಳೂರಿನ ವೇದ ಕೃಷಿಕ ಕೆ.ಎಸ್‌. ನಿತ್ಯಾನಂದ ಸ್ವಾಮೀಜಿ ಹೇಳಿದರು.

Advertisement

ಇಲ್ಲಿನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ನಡೆದ ವಿಶ್ವ ಜಿಗೀಷದ್‌ ಯಾಗದ ಸಮಾರೋಪದಲ್ಲಿ ಯಾಗ ವಿದ್ವತ್‌ ಪರಿಷತ್‌ನಿಂದ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.ನಮ್ಮೊಳಗಿರುವ ವಿಷಮತೆ ಹಾಗೂ ಐಹಿಕ ಸುಖಗಳನ್ನು ಆಧ್ಯಾತ್ಮದ ಔಷಧದಿಂದ ಗುಣಪಡಿಸಬಹುದೇ ಯಾಗದ ಉದ್ದೇಶವಾಗಿದೆ. ಯಾಗವು ಉದಾತ್ತ ಮನೋಭಾವದಿಂದ ಯಶಸ್ವಿಯಾಗಿದ್ದು, ಶಿಕ್ಷಣದಿಂದ ಸ್ವಾರ್ಥ ರಹಿತ ಜೀವನ ನಡೆಸುವ ಉದ್ದೇಶ ನಮ್ಮದಾಗಲಿ ಎಂದರು.

ಈ ಸಂದರ್ಭದಲ್ಲಿ ಕೆ.ಎಸ್‌. ನಿತ್ಯಾನಂದ ಸ್ವಾಮೀಜಿಯವರನ್ನು ಯಾಗ ಸಮಿತಿಯ ಪರವಾಗಿ ದೇಗುಲದ ಪ್ರಮುಖರು ವಿಶೇಷವಾಗಿ ಸಮ್ಮಾನಿಸಿದರು. ದೇಗುಲದ ಧರ್ಮದರ್ಶಿ ಡಾ| ಯಾಜಿ ನಿರಂಜನ್‌ ಭಟ್‌, ಮೊಕ್ತೇಸರ ಎಂ. ಶಶೀಂದ್ರಕುಮಾರ್‌, ಟ್ರಸ್ಟಿ ನಕ್ರೆ ಬಾಲಕೃಷ್ಣ ಭಟ್‌, ಡಾ| ಎನ್‌.ಎನ್‌ .ಪಡಿಯಾರ್‌, ಡಾ| ಶಾರದಾ ಪ್ರಸಾದ್‌, ಸರೋಜಾ ಮಹೇಶ್‌ ತಿಮರೋಡಿ ಬೀಡು, ವಿಜಯ್‌ಕುಮಾರ್‌ ಆರ್‌. ಎಸ್‌., ಚಂದ್ರಿಕಾ ಪ್ರವೀಣ್‌ ಕೋಟ್ಯಾನ್‌ ಉಪಸ್ಥಿತರಿದ್ದರು.ಯಾಗದ ವಕ್ತಾರ ಡಾ| ಸೋಂದಾ ಭಾಸ್ಕರ ಭಟ್‌ ಸ್ವಾಗತಿಸಿ, ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next