Advertisement

9300ರ ಗಡಿ ದಾಟಿ ಇತಿಹಾಸ ಬರೆದ ನಿಫ್ಟಿ

09:53 AM Apr 26, 2017 | |

ಮುಂಬಯಿ: ಷೇರುಪೇಟೆಗೆ ಮಂಗಳವಾರ “ಮಂಗಳ’ ತಂದಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಿಫ್ಟಿ 9,300ರ ಗಡಿ ದಾಟಿ ದಾಖಲೆ ಬರೆದಿದೆ. ಸೆನ್ಸೆಕ್ಸ್‌ 30 ಸಾವಿರದ ಅಂಚಿಗೆ ತಲುಪಿದೆ.

Advertisement

ರಿಲಯನ್ಸ್‌ ಸೇರಿದಂತೆ ಪ್ರಮುಖ ಕಂಪೆನಿಗಳ ತ್ತೈಮಾಸಿಕ ಆದಾಯದಲ್ಲಾಗಿರುವ ಹೆಚ್ಚಳ, ರೂಪಾಯಿ ಮೌಲ್ಯದ ಏರಿಕೆ ಹಾಗೂ ಜಾಗತಿಕ ಮಟ್ಟದಲ್ಲಾಗುತ್ತಿರುವ ವಿದ್ಯಮಾನ ಗಳು ಷೇರುಪೇಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ. 

ಹೂಡಿಕೆದಾರರು ಷೇರು ಖರೀದಿಯಲ್ಲಿ ಭಾರೀ ಆಸಕ್ತಿ ತೋರಿದ ಪರಿಣಾಮ, ಮಂಗಳವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 287 ಅಂಕಗಳ ಏರಿಕೆ ಕಂಡು, ದಿನದ ಅಂತ್ಯಕ್ಕೆ 29,943ರಲ್ಲಿ ವಹಿವಾಟು ಅಂತ್ಯಗೊಳಿಸಿತು. ಇದು ಕಳೆದ 3 ವಾರಗಳಲ್ಲೇ ಸೆನ್ಸೆಕ್ಸ್‌ನ ಅತ್ಯಧಿಕ ಏರಿಕೆಯಾಗಿದೆ. ಅಚ್ಚರಿಯ ಸಂಗತಿಯೆಂದರೆ, ನಿಫ್ಟಿ 88 ಅಂಕಗಳ‌ಷ್ಟು ಏರಿಕೆಯಾಗಿ, ಇದೇ ಮೊದಲ ಬಾರಿ 9,306ರಲ್ಲಿ ವಹಿವಾಟು ಅಂತ್ಯಗೊಳಿಸಿ ದಾಖಲೆ ಸೃಷ್ಟಿಸಿದೆ. ಈ ಮೂಲಕ, ಎಪ್ರಿಲ್‌ 5ರಂದು 9,265ರಲ್ಲಿ ವಹಿವಾಟು ಕೊನೆಗೊಳಿಸಿ ತಾನೇ ಸೃಷ್ಟಿಸಿದ್ದ ದಾಖಲೆಯನ್ನು ನಿಫ್ಟಿ  ಮುರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next