Advertisement

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಏರಿಳಿಕೆಯೊಂದಿಗೆ ವಹಿವಾಟು ಅಂತ್ಯ

05:10 PM Aug 11, 2021 | Team Udayavani |

ಮುಂಬಯಿ: ಮುಂಬಯಿ ಷೇರುಪೇಟೆಯ ವಹಿವಾಟು ಬುಧವಾರ (ಆಗಸ್ಟ್ 11) ಏರಿಳಿತದಲ್ಲಿ ಅಂತ್ಯಗೊಂಡಿದೆ. ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 28.73 ಅಂಕ ಇಳಿಕೆ ಕಂಡಿದ್ದು, ನಿಫ್ಟಿ ಕೇವಲ 2.20ರಷ್ಟು ಏರಿಕೆ ಕಂಡಿದೆ.

Advertisement

ಇದನ್ನೂ ಓದಿ:ಉಗ್ರರ ವಿರುದ್ಧ ಹೋರಾಡಲು ಹೊಸಪಡೆ ರಚನೆ: ತಾಲಿಬಾನ್ ಗೆ ಸಡ್ಡು ಹೊಡೆದ ಗವರ್ನರ್ ಸಲೀಮಾ!

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 28.73 ಅಂಕ ಇಳಿಕೆಯೊಂದಿಗೆ 54,525.93 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿದೆ. ಇದೇ ರೀತಿ ಎನ್ ಎಸ್ ಇ ನಿಫ್ಟಿ ಕೇವಲ 2.20 ಅಂಕ ಏರಿಕೆಯಾಗಿದ್ದು, 16,282.30 ಮಟ್ಟದಲ್ಲಿ ವಹಿವಾಟು ಅಂತ್ಯಗೊಂಡಿದೆ.

ಸೆನ್ಸೆಕ್ಸ್ ಏರಿಕೆಯಿಂದ ಟಾಟಾ ಸ್ಟೀಲ್, ಪವರ್ ಗ್ರಿಡ್, ರಿಲಯನ್ಸ್ ಇಂಡಸ್ಟ್ರೀಸ್, ಜೆಎಸ್ ಡಬ್ಲ್ಯು ಸ್ಟೀಲ್, ಐಒಸಿ, ಎನ್ ಟಿಪಿಸಿ ಮತ್ತು ಹಿಂಡಲ್ಕೋ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಶ್ರೀ ಸಿಮೆಂಟ್ಸ್, ಸನ್ ಫಾರ್ಮಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಬಜಾಜ್ ಆಟೋ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next