ಮಾಸ್ತಿ: ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದ ಮಧ್ಯ ಭಾಗದಲ್ಲಿ ಹಾದುಹೋಗಿರುವ ರಸ್ತೆಯಿಂದ ವಿದ್ಯಾರ್ಥಿನಿಯರಿಗೆ ಕಿರಿಕಿರಿ ಆಗುತ್ತಿದ್ದು, ಮುಚ್ಚುವಂತೆ ವಿದ್ಯಾರ್ಥಿನಿಯರು, ಪೋಷಕರು ಆಗ್ರಹಿಸುತ್ತಿದ್ದಾರೆ.
ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಒಳಗೊಂಡಿದ್ದ ಪದವಿ ಪೂರ್ವ ಕಾಲೇಜನ್ನು ಕಳೆದ ವರ್ಷ ಕರ್ನಾಟಕ ಪಬಿಕ್ ಶಾಲೆ ಆಗಿ ಉನ್ನತೀಕರಿಸಲಾಗಿದೆ. ಶಾಲೆಯಲ್ಲಿ 1570 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಹಾದು ಹೋಗಿರುವ ರಸ್ತೆಯು ಶಾಲೆಗೆ ಸೇರಿದ್ದರೂ ಹಿಂದಿನಿಂದಲೂ ಜನರ ಓಡಾಟ ಇದ್ದ ಕಾರಣ, ಹಾಗೆ ಬಿಡಲಾಗಿದೆ.
ಇತ್ತೀಚೆಗೆ ರಸ್ತೆಯಲ್ಲಿ ಓಡಾಡುವ ಪುಂಡ ಪೋಕರಿಗಳು, ವಿದ್ಯಾರ್ಥಿನಿಯರನ್ನು ಚುಡಾಯಿಸುವುದು, ಬೈಕ್‌ನಲ್ಲಿ ಬಂದು ಕರ್ಕಶ ಶಬ್ದ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮಾಡುತ್ತಿದ್ದಾರೆ. ಇದರಿಂದ ಶಾಲಾ ವಿದ್ಯಾರ್ಥಿ ಗಳಿಗೆ ತೀವ್ರ ತೊಂದರೆ ಆಗುತ್ತಿದೆ.
ಚರಂಡಿ ದುರ್ನಾತ: ಶಾಲೆ ಮುಗಿದ ನಂತರ, ರಾತ್ರಿ ವೇಳೆ ಕೆಲ ಕುಡುಕರು ಶಾಲೆಯ ಆವರಣದಲ್ಲೇ ಮದ್ಯದ ಬಾಟಲಿಗಳನ್ನು ಎಸೆದು ಹೋಗುತ್ತಾರೆ. ಕೆಲವರು ರಸ್ತೆ ಬದಿಯಲ್ಲೇ ಮಲಮೂತ್ರ ವಿಸರ್ಜನೆ ಕೂಡ ಮಾಡುವುದರಿಂದ ರಸ್ತೆಯಲ್ಲಿ ತರಗತಿ ನಡೆ ಸಲು, ಓಡಾಡಲು ಆಗದಂತೆ ದುರ್ನಾತ ಬೀರುತ್ತದೆ. ರಸ್ತೆ ಚರಂಡಿಯಲ್ಲಿ ತ್ಯಾಜ್ಯವಸ್ತುಗಳು ಸಂಗ್ರಹವಾಗಿ ಕೊಳಚೆ ನೀರು ಮಡು ಗಟ್ಟಿದೆ. ಕೆಲವು ದಾರಿ ಹೋಕರು ಆ ಚರಂಡಿಯಲ್ಲೇ ಮಲ, ಮೂತ್ರ ವಿಸರ್ಜನೆ ಮಾಡುತ್ತಾರೆ.
ಸಮಸ್ಯೆ ಆದ್ರೂ ಮುಚ್ಚಿಲ್ಲ: ಕೊಳಚೆ ನೀರು ಚರಂಡಿಯಲ್ಲಿ ಮಡುಗಟ್ಟಿರುವ ಕಾರಣ ಸೊಳ್ಳೆಗಳ ಕಾಟವು ವಿಪರೀತವಾಗಿದೆ. ಇದರಿಂದ ವಿದ್ಯಾರ್ಥಿ ಗಳ ಪಾಠ ಪ್ರವಚನಕ್ಕೆ ತೊಂದರೆಯಾ ಗುತ್ತಿದೆ. ಶಾಲಾ ಆವರಣದ ಮಧ್ಯ ಭಾಗದ ರಸ್ತೆಯಿಂದ ಇಷ್ಟೆಲ್ಲಾ ಸಮಸ್ಯೆ ಇದ್ದರೂ ಸಂಬಂಧಪಟ್ಟವರು ರಸ್ತೆ ಮುಚ್ಚು ಕೆಲಸ ಮಾಡಿಲ್ಲ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಆದಷ್ಟು ಬೇಗನೆ ಶಿಕ್ಷಣ ಇಲಾಖೆ ಇತ್ತಕಡೆ ಗಮನ ಹರಿಸುವುದರ ಜೊತೆಗೆ, ಕಾಳಜಿ ವಹಿಸಿ ಶಾಲಾ ಮಧ್ಯ ಭಾಗದ ರಸ್ತೆಯನ್ನು ಮುಚ್ಚಿ, ಈ ರಸ್ತೆಯಲ್ಲಿ ನಡೆಯುವಂತಹ ಅನೈತಿಕ ಚಟುವಟಿಕೆ ಗಳನ್ನು ತಡೆಯಬೇಕೆಂದು ವಿದ್ಯಾರ್ಥಿಗಳು, ಪೋಷಕರು ಆಗ್ರಹಿಸಿದ್ದಾರೆ.
ಶಾಲಾ ಆವರಣದ ಮಧ್ಯದಲ್ಲೇ ಹಾದು ಹೋಗಿರುವ ರಸ್ತೆಯಲ್ಲಿ ನಿಂತು ಕೆಲ ಪುಂಡಪೋಕರಿ ಗಳು ವಿದ್ಯಾರ್ಥಿನಿ ಯರನ್ನು ಚುಡಾಯಿಸುವುದು, ದ್ವಿಚಕ್ರ ವಾಹನಗಳಲ್ಲಿ ಬಂದು ಕರ್ಕಶ ಬದ್ಧ ಮಾಡು ವುದು, ಅವಾಚ್ಯ ಶಬ್ಧಗಳಿಂದ ನಿಂದಿಸುವುದು ಮಾಡುತ್ತಾರೆ. ಇದರಿಂದ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ. ಕೆಲವೊಮ್ಮೆ ರಸ್ತೆ ಪಕ್ಕದಲ್ಲೇ ಮಲ ಮೂತ್ರ ವಿಸರ್ಜನೆ ಮಾಡಲಾಗುತ್ತಿದೆ. ಇದರಿಂದ ದುರ್ನಾತ ಬೀರುತ್ತಿದೆ. ಪಾಠ ಪ್ರವಚನಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆಶಾಲೆಯ ಪ್ರಾಂಶುಪಾಲರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಈ ರಸ್ತೆ ಮುಚ್ಚಿಸಿ, ಮುಕ್ತವಾಗಿ ಓಡಾಡಲು ಅನುವು ಮಾಡಿಕೊಡಬೇಕಿದೆ.
–ಹೆಸರು ಹೇಳದೆ ಇಚ್ಚಿಸುವ ವಿದ್ಯಾರ್ಥಿನಿಯರು, ಕರ್ನಾಟಕ ಪಬಿಕ್ ಶಾಲೆ, ಮಾಸ್ತಿ.
-ಎಂ.ಮೂರ್ತಿ