ಚನ್ನಗಿರಿ: ಶಿಕ್ಷಣ ಇಲಾಖೆಯಲ್ಲಿ ಸಿಆರ್‌ಪಿಗಳು ಸರಿಯಾಗಿ ಯಾವುದೇ ಶಾಖೆಗಳಿಗೆ ಭೇಟಿ ನೀಡುತ್ತಿಲ್ಲ. ಇಲಾಖೆಗಳ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ತಾಪಂ ಉಪಾಧ್ಯಕ್ಷ ಹಾಲೇಶ್ ನಾಯ್ಕ ಅರೋಪಿಸಿದರು. ಗುರುವಾರ ತಾಪಂ ರಾಜೀವ್ ಗಾಂಧಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ತಾಲೂಕಿನ ನಲ್ಕುದುರೆ ಗೋಮಾಳದಲ್ಲಿರುವ ಮಹಾರುದ್ರಸ್ವಾಮಿ ಸಂಸ್ಥೆಯ ವಸತಿ ಗೃಹಗಳು ಮೂಲ ಸೌಕರ್ಯ ಕೊರತೆ ಇದ್ದು, ತಕ್ಷಣವೇ ಆ ಸಂಸ್ಥೆ ಮುಚ್ಚಬೇಕೆಂದು ತಾಪಂ ಅಧ್ಯಕ್ಷೆ ಪುಷ್ಪಲತಾ ಹಾಗೂ ಉಪಾಧ್ಯಕ್ಷ ಹಾಲೇಶನಾಯ್ಕ ಒತ್ತಾಯಿಸಿದರು. ಸಮಾಜ ಕಲ್ಯಾಣ ಇಲಾಖೆಯಿಂದ ಈ ಸಂಸ್ಥೆಗೆ ಆಹಾರ ಸರಬರಾಜು ಬಿಲ್ ಪಾವತಿ ಆಗುತ್ತದೆ.
150 ಜನ ವಿದ್ಯಾರ್ಥಿಗಳು ಇರಬೇಕಾದ ಸಂಸ್ಥೆಯಲ್ಲಿ 120 ಮಂದಿ ಗೈರು ಆಗಿರುತ್ತಾರೆ. ಉಳಿದವರು ಎಲ್ಲಿ ಇರುತ್ತಾರೆ ಎಂಬುದೇ ತಿಳಿಯುವುದಿಲ್ಲ. 120 ಜನ ವಿದ್ಯಾರ್ಥಿಗಳ ಆಹಾರದ 1.95 ಲಕ್ಷ ಸಂಪೂರ್ಣ ಬೊಗಸ್ ಆಗಿದ್ದು, ಮೇಲ್ನೋಟಕ್ಕೆ ಕಂಡು ಬಂದಿದೆ. ಸಮಾಜಕಲ್ಯಾಣ ಇಲಾಖೆ ಅಧಿಧಿಕಾರಿಗಳು ಅವರ ಕಡತಗಳಿಗೆ ಸಹಿ ಹಾಕಿದ್ದಾರೆ.
ಸರಿಯಾಗಿ ಸಂಸ್ಥೆ ನಡೆಸದವರು ಬಾಗಿಲು ಮುಚ್ಚಿಕೊಂಡು ಹೋಗಬೇಕು. ಈಗಾಗಲೇ ಈ ವಿಚಾರ ಜಿಲ್ಲಾಧಿಧಿಕಾರಿ ಗಮನಕ್ಕೆ ತಂದಿದ್ದೇವೆ ಎಂದರು. ಅಧ್ಯಕ್ಷೆ ಪುಷ್ಪವತಿ ಮಾತನಾಡಿ, ಶಿಶು ಮತ್ತು ಮಹಿಳಾ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗಿನಿ ಯೋಜನೆ ಅಡಿ ಮಹಿಳೆಯರಿಗೆ ಸರ್ಕಾರ ಅನುದಾನ ನೀಡಿದ್ದು, ಬ್ಯಾಂಕ್ ಅಧಿಕಾರಿಗಳು ಜನರನ್ನು ಅಲೆದಾಡಿಸುತ್ತಿದ್ದಾರೆ. ದೇವರು ವರಕೊಟ್ಟರು ಪೂಜಾರಿ ವರ ನೀಡಲ್ಲ.
ಎನ್ನುವ ಪರಿಸ್ಥಿತಿ ಉದ್ಯೋಗಿನಿ ಯೋಜನೆ ಆಗಿದೆ. ಜನರ ಪ್ರಗತಿಗೋಸ್ಕರ ಮಾಡುವ ಕೆಲಸಗಳು ಜನರಿಗೆ ತಿಳಿದಿರಬೇಕು ಆಗ ಸರ್ಕಾರದ ಹಲವು ಯೋಜನೆಗಳಿಗೆ ಮಹತ್ವ ಬರುತ್ತದೆ ಎಂದರು. ಉಪಾಧ್ಯಕ್ಷ ಹಾಲೇಶನಾಯ್ಕ ಮಾತನಾಡಿದರು. ಸ್ಥಾಯಿಸಮಿತಿ ಅಧ್ಯಕ್ಷ ಸೋಮಶೇಖರ್ ಪ್ರಭಾರೆ ಒಒ ಕುಮಾರ್ ಇದ್ದರು.