Advertisement
ಶಿಬಿರದಲ್ಲಿ ಎಷ್ಟು ಮಕ್ಕಳಿದ್ದಾರೆ ಎಂಬ ಸಂಖ್ಯೆ ಮುಖ್ಯವಲ್ಲ. ಎಷ್ಟು ಮಕ್ಕಳು ಶಿಬಿರದಲ್ಲಿ ಅರಿವು ಪಡೆದುಕೊಂಡಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಹಿಂದೆ ಸೀಮಿತ ಶಿಬಿರಗಳಿದ್ದವು. ಆದರೆ ಇಂದು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಹಲವಾರು ಶಿಬಿರಗಳು ನಡೆಯುತ್ತಿವೆ. ಇದರಿಂದ ಮಕ್ಕಳಿಗೆ ಸಾಕಷ್ಟು ಅವಕಾಶಗಳಿವೆ. ಇದನ್ನು ಬಳಸಿಕೊಳ್ಳುವ ವಿವೇಚನೆ ಮುಖ್ಯವಾಗಿ ಮಕ್ಕಳ ಪೋಷಕರಲ್ಲಿ ಇರಬೇಕು ಎಂದರು.
ಮುಖ್ಯ ಅತಿಥಿ ಪತ್ರಕರ್ತ ಮೌನೇಶ್ ವಿಶ್ವಕರ್ಮ ಮಾತನಾಡಿ, ಬಾಲವನದಲ್ಲಿ ಶಿಬಿರ ನಡೆಸುವುದು ಎಂದರೆ ಡಾ| ಶಿವರಾಮ ಕಾರಂತರಿಗೆ ನಾವು ಕೊಡುವ ಅಪೂರ್ವ ಗೌರವ. ಇಲ್ಲಿ ಯಾವ ಕಾರ್ಯಕ್ರಮಗಳಿದ್ದರೂ, ಹಿಂದೆ ಮುಂದೆ ನೋಡದೆ ಬರುತ್ತೇವೆ. ಈ ಪರಿಸರವೇ ಮಕ್ಕಳನ್ನು ಕ್ರೀಯಾಶೀಲರನ್ನಾಗಿ ಮಾಡುವ ಒಂದು ವಿಶಿಷ್ಟ ಕಲಾತಾಣ. ಈ ಶಿಬಿರ ಮಕ್ಕಳಲ್ಲಿ ಭವಿಷ್ಯವನ್ನು ರೂಪಿಸಲು ಸಹಕಾರಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
Related Articles
Advertisement
ಪುಣ್ಯ ಮಣ್ಣು ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ| ಶಿವರಾಮ ಕಾರಂತ ಬಾಲವನ ಸಮಿತಿಯ ಸದಸ್ಯೆ ಗೌರಿ ಬನ್ನೂರು, ಡಾ| ಶಿವರಾಮ ಕಾರಂತರ ಈ ಪುಣ್ಯ ಮಣ್ಣಿನಲ್ಲಿ ಮಕ್ಕಳು ಕಲಾವಿದರಾಗಿ ರೂಪುಗೊಳ್ಳುವುದು ಉತ್ತಮ ಬೆಳವಣಿಗೆ. ಈ ಕಾರಣದಿಂದ ಇಂತಹ ಶಿಬಿರಗಳು ಸಾರ್ಥಕತೆ ಪಡೆಯುತ್ತವೆ. ಇಲ್ಲಿ ಕಲಿತ ಕಲೆಯನ್ನು ನೀವು ಅರಳಿಸುವ ಪ್ರಯತ್ನ ಮಾಡಿದರೆ ಮುಂದೆ ನೀವು ಕೂಡಾ ಸಂಪನ್ಮೂಲ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದು ಮಕ್ಕಳಿಗೆ ತಿಳಿಸಿದರು.