Advertisement
ಪೌಷ್ಠಿಕಾಂಶ ಹೊಂದಿದ ಆಹಾರ ಸೇವನೆಯಿಂದಷ್ಟೇ ಆರೋಗ್ಯ ಭಾಗ್ಯ. ಆಹಾರದಲ್ಲಿ ಪೌಷ್ಠಿಕಾಂಶಗಳ ಕೊರತೆ, ನೀರಿನ ವ್ಯತ್ಯಾಸ ಹಾಗೂ ದೇಹಕ್ಕೆ ಹೊಂದಿಕೆಯಾಗದಂಥ ಹವಾಗುಣದ ಕಾರಣದಿಂದ ಅನಾರೋಗ್ಯ ಉಂಟಾಗುತ್ತದೆ. ಅದೇ ನೆಪದಲ್ಲಿ ಹೆಸರೇ ಗೊತ್ತಿಲ್ಲದ ಕಾಯಿಲೆ ಅಂಟಿಕೊಳ್ಳುತ್ತದೆ. ಕೆಲವೊಮ್ಮೆ ಸೋಂಕು ಮತ್ತು ವಂಶವಾಹಿ ಕಾರಣದಿಂದಲೂ ರೋಗ ಕಾಣಿಸಿಕೊಳ್ಳುವುದುಂಟು. ಇಂಥ ಸಂದರ್ಭದಲ್ಲಿ ತಕ್ಷಣವೇ ವೈದ್ಯರ ಸಲಹೆ ಪಡೆದು ಸೂಕ್ತ ಔಷಧೋಪಚಾರಕ್ಕೆ ಮುಂದಾಗಬೇಕು.
ಔಷಧಿಗಳ ಅನುಕೂಲ ಮತ್ತು ಪ್ರತಿಕೂಲ ಪರಿಣಾಮಗಳನ್ನು ಗ್ರಹಿಸಿ, ಸುರಕ್ಷತೆ ಮತ್ತು ಅಡ್ಡಪರಿಣಾಮಗಳನ್ನು ತಡೆಯಲು ಸಲಹೆ ಸೂಚನೆ ನೀಡುವವರು ಇವರೇ.
Related Articles
Advertisement
ವಿದ್ಯಾಭ್ಯಾಸ ಹೀಗಿರಲಿಪಿಯುಸಿ ಬಳಿಕ ಎಂ.ಬಿ.ಬಿ.ಎಸ್/ಬಿ.ಡಿ.ಎಸ್/ ಬಯೋಟೆಕ್/ ಲ್ಯಾಬ್‌ಟೆಕ್ ಪದವಿ ಪೂರೈಸಿ. ಆನಂತರ ಐಸಿಆರ್‌ಐ ಪ್ರವೇಶ ಪರೀಕ್ಷೆ ಬರೆದು, ಒಂದು ವರ್ಷದ ಕ್ಲಿನಿಕಲ್ ರಿಸರ್ಚ್ ಕೋರ್ಸ್ ಮಾಡಿದರೆ ಕ್ಲಿನಿಕಲ್ ರಿಸರ್ಚರ್ ಆಗಬಹುದು. ಮತ್ತೂಂದು ವಿಧದಲ್ಲಿ ಬಿ.ಫಾರ್ಮಾ, ಎಂ.ಪಾರ್ಮ ಮಾಡಿ ಕ್ಲಿನಿಕಲ್ ರಿಸರ್ಚ್ ಮಾಡಿಯೂ ಕ್ಲಿನಿಕಲ್ ಸಂಶೋಧಕರಾಗಬಹುದು. ಇನ್ನೊಂದು ಮಾರ್ಗದಲ್ಲಿ ಐಸಿಆರ್‌ಐ ಪ್ರವೇಶ ಪರೀಕ್ಷೆ ಪೂರೈಸಿ ಕ್ಲಿನಿಕಲ್ ರಿಸರ್ಚ್‌ನಲ್ಲಿ ಪಿ.ಎಚ್.ಡಿ ಮಾಡಿಯೂ ಕ್ಲಿನಿಕಲ್ ರಿಸರ್ಚರ್ ಆಗಬಹುದು. ಕೌಶಲ್ಯಗಳೂ ಬೇಕು
ವಿವಿಧ ರೋಗಗಳ ಬಗ್ಗೆ ಅರಿವು, ಜ್ಞಾನ
ಔಷಧಿಗಳು ಮತ್ತು ಪರಿಣಾಮ ಅವುಗಳ ಬಳಕೆ ಬಗೆಗೆ ಅರಿವು
ರೋಗಿಗೆ ನೀಡಿದ ಔಷಧಿಗಳ ಚರಿತ್ರೆ ಅರಿಯುವ ಗುಣ
ವೈಜ್ಞಾನಿಕ ಪ್ರಾವೀಣ್ಯತೆ- ವಿಶ್ಲೇಷಣಾತ್ಮಕ ಜ್ಞಾನ
ಕೇಸ್ ಹಿಸ್ಟರಿಗಳ ದತ್ತಾಂಶ ಸಂಗ್ರಹಣೆ ಮತ್ತು ಸಂಶೋಧನಾ ಕೌಶಲ್ಯ
ಗಣಕ ಸಂಬಂಧಿತ ಜ್ಞಾನ, ಏಕಾಗ್ರತೆ ಅವಕಾಶಗಳು
ಔಷಧೀಯ ಸಂಸ್ಥೆಗಳು
ಜೈವಿಕ ಔಷಧೀಯ ಸಂಸ್ಥೆಗಳು
ಡ್ರಗ್ ಡೆವಲಪ್‌ಮೆಂಟ್ ಅಂಡ್ ಕ್ಲಿನಿಕಲ್ ಟ್ರಯಲ್ ಅಂಡ್ ರಿಸರ್ಚ್ ಸಂಸ್ಥೆಗಳು
ವೈದ್ಯಕೀಯ ಸಂಶೋಧನಾ ಸಂಸ್ಥೆಗಳು
ವೈದ್ಯಕೀಯ ಶೈಕ್ಷಣಿಕ ವಿಭಾಗ
ಸರ್ಕಾರಿ ಮತ್ತು ಖಾಸಗಿ ಕ್ಲಿನಿಕಲ್ ಪ್ರಯೋಗಾಲಯಗಳು
ಮೆಡಿಕಲ್ ಉಪಕರಣಗಳ ವಿನ್ಯಾಸ ಮತ್ತು ಉತ್ಪಾದನಾ ವಲಯ
ಸೌಂದರ್ಯ ವರ್ಧಕ ತಯಾರಿಕಾ ಘಟಕಗಳು ಕಾಲೇಜುಗಳು
ಇನ್ಸ್‌ಟಿಟ್ಯೂಟ್ ಆಫ್ ಕ್ಲಿನಿಕಲ್ ರಿಸರ್ಚ್ ಇಂಡಿಯಾ, ಇಂದಿರಾನಗರ, ಬೆಂಗಳೂರು
ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜ್ ಆಫ್ ವುಮೆನ್, ಮಲ್ಲೇಶ್ವರ, ಬೆಂಗಳೂರು
ಕ್ಲಿನಿಕಲ್ ರಿಸರ್ಚ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್, ಮಲ್ಲೇಶ್ವರ, ಬೆಂಗಳೂರು
ಕ್ಲಿನಿಕಲ್ ರಿಸರ್ಚ್ ಎಜುಕೇಷನ್ ಅಂಡ್ ಮ್ಯಾನೇಜ್‌ಮೆಂಟ್ ಅಕಾಡೆಮಿ, ಜಯನಗರ, ಬೆಂಗಳೂರು
ಅಕಾಡೆಮಿ ಫಾರ್ ಕ್ಲಿನಿಕಲ್ ಎಕ್ಸಲೆನ್ಸ್, ಸಾಂತಾಕ್ರೂಝ್ ಈಸ್ಟ್, ಮುಂಬೈ ಎನ್. ಅನಂತ್ ನಾಗ್