Advertisement

ಅಟಲ್ ಸೇತುವೆಯ ಕಂಬ ಏರಿದ ವ್ಯಕ್ತಿ ; ಕೆಳಗೆ ಇಳಿಯಲು ಹರಸಾಹಸ

10:25 PM Oct 07, 2022 | Team Udayavani |

ಪಣಜಿ: ಪಣಜಿಯ ಮೆರ್ಶಿ ಸರ್ಕಲ್ ಬಳಿ ಶುಕ್ರವಾರ  ಬೆಳಗ್ಗೆ ಅಟಲ್ ಸೇತುವೆಯ ಕಂಬವನ್ನು ವ್ಯಕ್ತಿಯೊಬ್ಬರು ಹತ್ತಿದ್ದನ್ನು ನಾಗರಿಕರು ಗಮನಿಸಿದ್ದಾರೆ. ಸ್ವಲ್ಪ ಸಮಯದ ನಂತರ, ಈ ವ್ಯಕ್ತಿಯು ಕೆಳಗೆ ಇಳಿಯಲು ಹರಸಾಹಸ ಪಡಬೇಕಾಯಿತು, ಕೊನೆಗೆ ಕ್ರೇನ್ ಸಹಾಯದಿಂದ ಆತನನ್ನು ಕೆಳಕ್ಕಿಳಿಸಲಾಯಿತು.

Advertisement

ಮೆರ್ಶಿಯಲ್ಲಿ ವ್ಯಕ್ತಿಯೊಬ್ಬ ಅಟಲ್ ಸೇತುವೆಯ ಕಂಬವನ್ನು  ಹತ್ತಿರುವುದನ್ನು  ನಾಗರಿಕರು ಗಮನಿಸಿದ್ದಾರೆ. ಇದನ್ನು ಕಂಡ  ನಾಗರಿಕರು ಗಾಬರಿಗೊಂಡರು. ಸ್ವಲ್ಪ ಸಮಯದ ನಂತರ, ಕ್ರೇನ್ ಸಹಾಯದಿಂದ ವ್ಯಕ್ತಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಯಿತು. ಈ ವ್ಯಕ್ತಿಯ ಹೆಸರು ಇನ್ನೂ ತಿಳಿದುಬಂದಿಲ್ಲ.  ಅಲ್ಲದೆ, ಅವರು ಇಂತಹ ಕೃತ್ಯ ಎಸಗಿರುವ ನಿಖರ ಉದ್ದೇಶವೇನು? ಇದೂ ಸ್ಪಷ್ಟವಾಗಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಳೆದ ಕೆಲ ದಿನಗಳ ಹಿಂದೆ ಇಂದಹದ್ದೇ ಘಟನೆ ನಡೆದಿತ್ತು.ಏತನ್ಮಧ್ಯೆ, ಸೆಪ್ಟೆಂಬರ್ 13 ರಂದು ಮಹಿಳೆ ಸ್ನೇಹಾ ನಾಯಕ್ ದಾಬೋಲಿಯಲ್ಲಿ ಗ್ರೇಡ್ ಸಪರೇಟರ್ ಕಂಬವನ್ನು ಏರಿದ್ದರು. ದಾಬೋಲಿ ಮೇಲ್ಸೇತುವೆ ಬಳಿಯ ಗ್ರೇಡ್ ಸಪರೇಟರ್ ಕಂಬದಲ್ಲಿ ಮಹಿಳೆಯನ್ನು ಕೆಲವು ಟ್ಯಾಕ್ಸಿ ಚಾಲಕರು ಗಮನಿಸಿ ಕೂಡಲೇ ವಾಸ್ಕೋ ಪೊಲೀಸರಿಗೆ ಮಾಹಿತಿ ನೀಡಿದ್ದರು.  ಸ್ವಲ್ಪ ಹೊತ್ತಿನಲ್ಲಿ ಕಂಬದ ಮೇಲೆ ಕುಳಿತಿದ್ದ ಮಹಿಳೆಯನ್ನು ಏಣಿ ಇಟ್ಟು ಕೆಳಗೆ ಇಳಿಸಲಾಗಿತ್ತು.   ಕೆಳಗಿಳಿದ ಬಳಿಕ ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಕೆಲಸ ಕೊಡಿಸುವುದಾಗಿ ಹೇಳಿ ಯಾರೋ ಅಲ್ಲಿಗೆ ಕರೆತಂದಿದ್ದರು. ಈಕೆ ಕಾರವಾರ ಮೂಲದವಳಾಗಿದ್ದು, ಅಪರಿಚಿತ ವ್ಯಕ್ತಿಯೊಬ್ಬರು ಬಿಟ್ಟು ಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next