ಉದ್ಘಾಟನೆಗೊಂಡು ತಿಂಗಳಾಗುತ್ತಾ ಬಂದರೂ ಕಾರ್ಯಾರಂಭ ಮಾಡದಿರುವ ಕುರಿತು ಉದಯವಾಣಿ ಎ.10ರಂದು ವರದಿ ಪ್ರಕಟಿಸಿತ್ತು.
Advertisement
“ಮಂಗಳವಾರ ಸಂಜೆ ವೇಳೆ ಕಾರ್ಯಾರಂಭ ಮಾಡಿದೆ. ಆದರೆ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡಲು ಇನ್ನೂ ಎರಡು ಮೂರು ದಿನಗಳು ಬೇಕಾಗಬಹುದು. ಈಗ ಕ್ಯಾಲಿಬರೇಷನ್ ನಡೆಯುತ್ತಿದೆ. ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ನಡೆಸಿದ ಅನಂತರ ವಾಯು ಗುಣಮಟ್ಟ, ಮಾಲಿನ್ಯ ಪ್ರಮಾಣ, ಗಾಳಿಯ ವೇಗ, ವಾತಾವರಣ ತೇವಾಂಶ, ಉಷ್ಣತೆ ಮೊದಲಾದವುಗಳ ನಿಖರ ಮಾಹಿತಿ ಸಾರ್ವಜನಿಕರಿಗೂ ಲಭ್ಯ ವಾಗಲಿದೆ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.