ಹೊಸದಿಲ್ಲಿ: ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಇದು ಭಾರತದ ಮೇಲೆ ತೀವ್ರ ಪರಿಣಮ ಬೀರಲಿದೆ. ಅದರಲ್ಲಿಯೂ ಕರಾವಳಿ ಭಾಗದಲ್ಲಿ ಗರಿಷ್ಠ ತಾಪಮಾನ 4 ಡಿಗ್ರಿ ಹೆಚ್ಚಳವಾದರೆ ಸಮುದ್ರದ ಮಟ್ಟ ಏರಿಕೆಯಾಗಿ 5 ಕೋಟಿಗೂ ಅಧಿಕ ಜನರು ನೆಲೆ ಕಳೆದುಕೊಳ್ಳಬೇಕಾಗುತ್ತದೆ!
ಹೆಚ್ಚುತ್ತಿರುವ ತಾಪಮಾನವು ಕೃಷಿ ಕ್ಷೇತ್ರದ ಮೇಲೆಯೂ ದುಷ್ಪರಿಣಾಮ ಬೀರಲಿದ್ದು, ಇದು ಜಲ ಆಹಾರ ಬಿಕ್ಕಟ್ಟಿಗೂ ಕಾರಣವಾಗಲಿದೆ ಎಂಬ ಆತಂಕಕಾರಿ ಅಂಶ ಫ್ಯೂಚರ್ ಅರ್ತ್ ಸಂಸ್ಥೆಯ ವರದಿಯಲ್ಲಿ ಬಹಿರಂಗವಾಗಿದೆ.
ಫ್ಯೂಚರ್ ಅರ್ತ್ ಸಂಸ್ಥೆಯ ನೇತೃತ್ವದಲ್ಲಿ 52 ದೇಶಗಳ 222 ವಿಜ್ಞಾನಿಗಳು ಸಿದ್ಧಪಡಿಸಿದ್ದ “ಭೂಮಿಯ ಮೇಲೆ ನಮ್ಮ ಭವಿಷ್ಯ’ ಎಂಬ ಸಂಶೋಧನ ವರದಿಯನ್ನು ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಬಿಡುಗಡೆ ಗೊಂಡಿದ್ದು, ಈ ವರದಿಯಲ್ಲಿ ದೃಢಪಟ್ಟಿದೆ.
ಜಗತ್ತಿನಲ್ಲಿ ಪ್ರತಿ ವರ್ಷ 30 ಕೋಟಿ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅಷ್ಟೇ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರ ಸೇರುತ್ತಿದೆ. ಶೇ. 20ರಷ್ಟು ಮಾತ್ರ ಪ್ಲಾಸ್ಟಿಕ್ ಮರು ಬಳಕೆ ಆಗುತ್ತಿದೆ ಎಂಬ ಅಂಶಗಳನ್ನು ವರದಿಯಲ್ಲಿ ಉಲ್ಲೇಖೀಸಿದೆ.
ಮಾಹಿತಿ ಸಂವಹನ ತಂತ್ರಜ್ಞಾನವು 2015ರಲ್ಲಿ ಶೇ.3.6ರಷ್ಟು ವಿದ್ಯುತ್ ಬಳಕೆ ಮಾಡುತ್ತಿತ್ತು. 2030ರ ವೇಳೆಗೆ ಶೇ.20ರಷ್ಟು ವಿದ್ಯುತ್ ಬೇಕಾಗಲಿದೆ. ಆದ್ದರಿಂದ ನವೀಕರಿ ಸಬೇಕಾದ ಇಂಧನ ಬಳಕೆಗೆ ಒತ್ತು ನೀಡಬೇಕು. ಜೈವಿಕ ವಿಜ್ಞಾನದ ಜತೆಗೆ ಸಾಮಾಜಿಕ ಪ್ರಗತಿಗೆ ಆದ್ಯತೆ ನೀಡಬೇಕು ನೀರಿನ ಸಮರ್ಪಕ ನಿರ್ವ ಹಣೆ, ಸಮುದ್ರಕ್ಕೆ ಪ್ಲಾಸ್ಟಿಕ್ ತ್ಯಾಜ್ಯ ಸೇರುವುದನ್ನು ತಡೆಯಬೇಕು ಎಂದು ಸಲಹೆ ನೀಡಲಾಗಿದೆ.