Advertisement
ಮೀನುಗಾರಿಕೆಯ ರಜೆಯ ಅವಧಿ ಮುಗಿದು ಋತು ಆರಂಭವಾದಗಿನಿಂದಲೂ ಚಂಡಮಾರುತ, ಮೀನಿನ ಅಲಭ್ಯತೆ ಯಿಂದಾಗಿ ಕರಾವಳಿಯ ಮೀನುಗಾರಿಕೆಗೆ ತೊಂದರೆಯಾಗುತ್ತಿದ್ದು, ಪರ್ಸಿನ್, ಯಾಂತ್ರೀಕೃತ ಬೋಟುಗಳು ನಷ್ಟವನ್ನು ಅನುಭವಿಸುತ್ತಿದೆ. ಇದೀಗ ಚಂಡಮಾರುತದಿ ಂದಾಗಿ ರೆಡ್ ಅಲರ್ಟ್ ಘೋಷಿಸಿರುವುದು ಮೀನುಗಾರಿಕೆಗೆ ಮತ್ತಷ್ಟು ಹೊಡೆತ ನೀಡಿದೆ.
Related Articles
ಈ ವರ್ಷಾರಂಭದಿಂದಲೇ ಮೀನುಗಾರಿಕೆಗೆ ಹಲವು ಸಮಸ್ಯೆಗಳು ಎದುರಾಗಿರುವುದರಿಂದ ಮೀನುಗಾರರಿಗೆ ನಿರೀಕ್ಷಿತ ಲಾಭ ದೊರೆತ್ತಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಮೀನು ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
Advertisement
ಕಾರ್ಗಿಲ್ ಮೀನಿನ ಕಾಟಮೀನುಗಾರಿಕೆಗೆ ವೇಳೆ ಬಾಕಿ ಮೀನುಗಿಂತಲೂ ಹೆಚ್ಚಾಗಿ ನಿರುಪಯುಕ್ತ ಕಾರ್ಗಿಲ್ ಮೀನುಗಳು ಟನ್‌ಗಟ್ಟಲೇ ಸಿಗುತ್ತಿದ್ದು, ಮೀನುಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಕಾರ್ಗಿಲ್ ಮೀನು ಇತರ ಮೀನುಗಳನ್ನು ತಿನ್ನುವುದರಿಂದ ಅವುಗಳಿರುವಲ್ಲಿ ಮನುಷ್ಯರಿಗೆ ತಿನ್ನಲು ಯೋಗ್ಯವಾದ ಮೀನುಗಳು ಇರುವುದಿಲ್ಲ. ಕಾರ್ಗಿಲ್ ಮೀನುಗಳನ್ನು ಫಿಶ್‌ಮಿಲ್‌ನವರು ಕೆ.ಜಿ.ಗೆ 12 ರೂ. ನಂತೆ ಖರೀದಿ ಮಾಡುತ್ತಿದ್ದಾರೆ. 15ರಿಂದ 20 ನಾಟಿಕಲ್ ದೂರದಲ್ಲೇ ಈ ಮೀನುಗಳು ಸಿಗುತ್ತಿವೆ. ಆಳಸಮುದ್ರ ಮೀನುಗಾರಿಕೆ ಹೋಗಿ ಬರಲು 5 ಲಕ್ಷ ರೂ. ಡಿಸೇಲ್ ಬೇಕಾಗುತ್ತಿದ್ದು, ಕಾರ್ಗಿಲ್ ಮೀನು ಸಿಗುತ್ತಿರುವುದರಿಂದ ಸಾಕಷ್ಟು ನಷ್ಟವಾಗುತ್ತಿದೆ ಎಂದು ಮೀನುಗಾರರು ಹೇಳುತ್ತಾರೆ. ಮೀನುಗಾರರಿಗೆ ಸಂಕಷ್ಟ
ಹವಾಮಾನ ಏರಿಳಿತದಿಂದಾಗಿ ಸಮುದ್ರದಲ್ಲಾಗುತ್ತಿರುವ ಬದಲಾವಣೆಯಿಂದ ಈ ಬಾರಿ ನಿರೀಕ್ಷಿತ ಮೀನುಗಾರಿಕೆಯಾಗಿಲ್ಲ. ಬಹುತೇಕ ಬೋಟುಗಳು ನಷ್ಟದಲ್ಲಿದೆ. ಕೆಲಸದವರು ವಾಪಾಸ್ ಊರಿಗೆ ತೆರಳಿದ್ದಾರೆ.
- ನಿತಿನ್ ಕುಮಾರ್,
ಮಂಗಳೂರು ಟ್ರಾಲ್‌ಬೋಟು ಮೀನುಗಾರರ ಸಂಘದ ಅಧ್ಯಕ್ಷ