ಲಂಡನ್: ಚಳಿಗಾಲ ಸರಿದು ಇನ್ನು ಬೇಸಗೆ ಹೆಚ್ಚಾಗಲಿದ್ದು,
ಕೋವಿಡ್-19 ಸೋಂಕು ಕಡಿಮೆಯಾಗುವ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ತಾಪಮಾನವು 20 ಸೆ ತಲುಪುವ ಮುನ್ಸೂಚನೆ ಇದೆ. ಬೆಚ್ಚನೆಯ ಹವಾಮಾನವು ಬ್ರಿಟನ್‌ಗೆ ಒಳ್ಳೆಯ ಸಮಯವಾಗಿದೆ ಎನ್ನಲಾಗುತ್ತಿದೆ. ಲಾಕ್ ಡೌನ್ ಬಳಿಕ ಇಂಗ್ಲೆಂಡಿಗೆ ಒಳ್ಳೆಯ ವಿರಾಮ ನೀಡಲಿದೆ. ಆದರೆ ಜನರನ್ನು ನಿಯಂತ್ರಿಸುವುದು ಮಾತ್ರ ಕಷ್ಟವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಚಳಿಗಾಲವು ಮುಗಿಯುತ್ತಿದ್ದಂತೆ ಜ್ವರ ಸಾಂಕ್ರಾಮಿಕ ರೋಗಗಳು ಸಾಯುತ್ತವೆ. ಸೂರ್ಯನ ಬೆಳಕು ಕೋವಿಡ್-19 ವೈರಸ್ ಮತ್ತು ಅದರ ಹರಡುವಿಕೆಯ ಮೇಲೆ ಪರಿಣಾಮ ಬೀರಬಹುದೇ ಎಂಬ ಚರ್ಚೆಗಳು ನಡೆಯುತ್ತಿವೆ. ಕೋವಿಡ್-19 ವೈರಸ್ ಕುರಿತಾದ ಆರಂಭಿಕ ಅಧ್ಯಯನಗಳ ಪ್ರಕಾರ ಶೀತಗಳಲ್ಲಿ ಇವುಗಳು ಹರಡುವ ಸಾಧ್ಯತೆ ಹೆಚ್ಚು ಎಂದು ಹೇಳಿದೆ.
ಹಲವು ವರ್ಷಗಳ ಹಿಂದೆ ಸಂಗ್ರಹಿಸಿದ ಮಾದರಿಗಳನ್ನು ವಿಶ್ಲೇಷಿಸಲಾಗುತ್ತಿದ್ದು, ಫೆಬ್ರವರಿಯಲ್ಲಿ ಹೆಚ್ಚಿನ ಪ್ರಮಾಣದ ಸೋಂಕು ಹರಡಿತ್ತು. ಆದರೆ ಬೇಸಗೆಯಲ್ಲಿ ತುಂಬಾ ಕಡಿಮೆ ಎನ್ನಲಾಗಿದೆ. ಆದರೆ ಕೆಲವರ ಪ್ರಕಾರ ಕೊರೊನಾ ಮುಂದಿನ ದಿನಗಳಲ್ಲಿಯೂ ಇರಲಿದೆ. ಇದರ ತೀವ್ರತೆಯಲ್ಲಿ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
ಋತುಮಾನದ ವ್ಯತ್ಯಾಸಗಳು ವೈರಸ್‌ನ ಹರಡುವಿಕೆಯ ತೀವ್ರತೆಯಲ್ಲಿ ಕೊಂಚ ಪಾತ್ರ ವಹಿಸುತ್ತವೆ ಎಂದು ನನಗೆ ಖಾತ್ರಿಯಿದೆ ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜಿನ ವೈರಾಲಜಿಸ್ಟ್ ಮೈಕೆಲ್ ಸ್ಕಿನ್ನರ್‌ಹೇಳಿದರು. ಆದರೆ ಸಾಮಾಜಿಕ ಅಂತರದಿಂದ ನಾವು ಹೊಂದಿರುವ ಪರಿಣಾಮದೊಂದಿಗೆ ಹೋಲಿಸಿದರೆ, ಅದು ಬಹಳ ಕಡಿಮೆ. ಆದರೆ ಇವು ಸ್ವಯಂ-ಪ್ರತ್ಯೇಕತೆಗೆ ಪರ್ಯಾಯವಲ್ಲ. ಆ ಮೂಲಕ ಸಾಮಾಜಿಕ ಅಂತರ ನಿಯಮ ಪಾಲನೆಯೇ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.