Advertisement

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

03:54 AM Dec 23, 2024 | Team Udayavani |

ಹೊಸದಿಲ್ಲಿ: ಜನರ ಹಾದಿ ತಪ್ಪಿಸುವ ಶೀರ್ಷಿಕೆಗಳು ಮತ್ತು ಸಾರಾಂಶವನ್ನು ಹೊಂದಿರುವ ವೀಡಿಯೋ (ಕ್ಲಿಕ್‌ ಬೈಟ್‌)ಗಳಿಗೆ ಕಡಿವಾಣ ಹಾಕಲು ಯೂಟ್ಯೂಬ್‌ ಮುಂದಾಗಿದೆ. ತಮ್ಮ ವೀಡಿಯೋಗಳನ್ನು ಹೆಚ್ಚು ಜನರು ನೋಡಲಿ, ಹೆಚ್ಚು ಲೈಕ್‌ಗಳು, ಹಿಟ್‌ಗಳು ಬರಲಿ ಎಂಬ ಕಾರಣಕ್ಕೆ ದಾರಿ ತಪ್ಪಿಸುವ ಶೀರ್ಷಿಕೆಗಳನ್ನು ನೀಡಿದರೆ, ಅಂಥ ವೀಡಿಯೋಗಳನ್ನೇ ತೆಗೆದುಹಾಕಲಾಗುವುದು ಎಂದು ಕಂಟೆಂಟ್‌ ಕ್ರಿಯೇಟರ್‌ಗಳಿಗೆ ಯೂಟ್ಯೂಬ್‌ ಒಡೆತನ ಹೊಂದಿರುವ ಗೂಗಲ್‌ ಎಚ್ಚರಿಸಿದೆ.

Advertisement

ಹಾದಿ ತಪ್ಪಿಸುವಂಥ ಶೀರ್ಷಿಕೆಗಳು ವೀಕ್ಷಕ ರನ್ನು ಮೋಸಗೊಳಿಸಬಹುದು ಹಾಗೂ ನಿರಾಸೆಗೊಳಿಸಬಹುದು. ಕುತೂಹಲಕಾರಿ ಶೀರ್ಷಿಕೆ ನೀಡಿ, ಒಳಗೆ ಅದಕ್ಕೆ ಸಂಬಂಧಿಸಿದ ವಿಷಯವೇ ಇಲ್ಲದಿದ್ದರೆ ಜನರ ಸಮಯವೂ ವ್ಯರ್ಥ, ಜತೆಗೆ ಅವರನ್ನು ವಂಚಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ನಿಯಮ

ಗಳನ್ನು ಬಿಗಿಗೊಳಿಸಲು ಸಂಸ್ಥೆ ನಿರ್ಧರಿಸಿದ್ದು, ನಿಯಮ ಪಾಲನೆ ಮಾಡದ ಕಂಟೆಂಟ್‌ಗಳನ್ನು ಯಾವುದೇ ಸೂಚನೆ ಅಥವಾ ಸ್ಟ್ರೈಕ್‌ ತೋರಿಸದೆ ತೆಗೆದುಹಾಕಲಾಗುವುದು. ಈ ಮೂಲಕ ಕಂಟೆಂಟ್‌ ಕ್ರಿಯೇಟರ್‌ಗಳಿಗೆ ಹೊಸ ನಿಯಮಗಳಿಗೆ ಹೊಂದಿಕೊಳ್ಳುವ ಅವಕಾಶ ಕಲ್ಪಿಸಲಾಗುತ್ತದೆ. ಆರಂಭದಲ್ಲಿ ಹಾದಿ ತಪ್ಪಿಸುವ ಹಾಗೂ ನಿಯಮಗಳನ್ನು ಪಾಲಿಸದ ಥಂಬ್‌ನೈಲ್‌ಗಳಿರುವ ವೀಡಿಯೋಗಳನ್ನುಅಳಿಸಲಾಗುವುದು. ಸದ್ಯ  ಹೊಸ ವೀಡಿಯೋ ಅಪ್‌ಲೋಡ್‌ಗಳ ಮೇಲೆ ಕ್ರಮ ಕೈಗೊಳ್ಳಲು ಆರಂಭಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next