2024ನೇ ವರ್ಷ ಮುಗಿಯುತ್ತಾ ಬಂದಿದ್ದು, ಈ ಸಮಯದಲ್ಲಿ ಗೂಗಲ್ ತನ್ನ ವಾರ್ಷಿಕ ವರದಿ ಬಿಡುಗಡೆ ಮಾಡಿದೆ. ಅದರಂತೆ ವಿಶ್ವಾದ್ಯಂತ ಹೆಚ್ಚು ಹುಡುಕಲಾದ ವಿಷಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪ್ರಮುಖ ಕ್ರೀಡಾ ಘಟನೆಗಳು, ರಾಜಕೀಯ ಚುನಾವಣೆಗಳಿಂದ ಹಿಡಿದು ಪಾಪ್ ಸಂಸ್ಕೃತಿಯ ಕ್ಷಣಗಳು ಮತ್ತು ಪ್ರಯಾಣದ ಸ್ಥಳಗಳವರೆಗೆ.. ಈ ವರ್ಷ ಜಾಗತಿಕವಾಗಿ ಗಮನ ಸೆಳೆದಿರುವ ವಿಷಯಗಳನ್ನು ವರದಿ ಮಾಡಿದೆ.
ಗೂಗಲ್‌ನ 2024ರ ವರದಿ ವಿಶ್ವದಾದ್ಯಂತ ಹೆಚ್ಚು ಹುಡುಕಲಾದ ವಿಷಯಗಳನ್ನು ಬಹಿರಂಗಪಡಿಸಿದೆ. ಇದು ಪ್ರಮುಖ ಜಾಗತಿಕ ಘಟನೆಗಳು ಮತ್ತು ಸಾಂಸ್ಕೃತಿಕ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತದೆ.
ಕೋಪಾ ಅಮೇರಿಕಾ, UEFA ಯುರೋಪಿಯನ್ ಚಾಂಪಿಯನ್‌ಶಿಪ್ ಮತ್ತು ಕ್ರಿಕೆಟ್‌ನ ICC ಪುರುಷರ T20 ವಿಶ್ವಕಪ್‌ಗಳು ಸೇರಿದಂತೆ ಕ್ರೀಡೆಗಳ ಬಗೆಗಿನ ಹುಡುಕಾಟ ಹೆಚ್ಚಿವೆ ಎಂದು ಗುರುತಿಸಲಾಗಿದೆ.
ಯುಎಸ್ ಚುನಾವಣೆಯಂತಹ ರಾಜಕೀಯ ಘಟನೆಗಳು, ಮಿಲ್ಟನ್ ಚಂಡಮಾರುತದಂತಹ ಹವಾಮಾನ ಘಟನೆಗಳು ಮತ್ತು ಒಲಿಂಪಿಕ್ಸ್ ಕೂಡ ಗಮನ ಸೆಳೆದವು.
ಮನರಂಜನೆಯಲ್ಲಿ, ಇನ್‌ಸೈಡ್ ಔಟ್ 2 ಮತ್ತು ಡೆಡ್‌ಪೂಲ್ ಮತ್ತು ವೊಲ್ವೆರಿನ್ ಟಾಪ್ ಚಲನಚಿತ್ರಗಳಾಗಿವೆ. ಡೊನಾಲ್ಡ್ ಟ್ರಂಪ್, ಕಮಲಾ ಹ್ಯಾರಿಸ್ ಮತ್ತು ಕ್ಯಾಥರೀನ್, ಪ್ರಿನ್ಸೆಸ್ ಆಫ್ ವೇಲ್ಸ್ ಮುಂತಾದ ಜನಪ್ರಿಯ ವ್ಯಕ್ತಿಗಳ ಬಗ್ಗೆ ಪ್ರಮುಖವಾಗಿ ಗೂಗಲ್ ಹುಡುಕಾಟಗಳಾಗಿವೆ.
ಪ್ರವಾಸಿ ತಾಣಗಳ ಬಗ್ಗೆ ಸೆಂಟ್ರಲ್ ಪಾರ್ಕ್, ಬ್ರಿಟಿಷ್ ಮ್ಯೂಸಿಯಂ ಮತ್ತು ಅರೆನಾ ಡಿ ವೆರೋನಾಗಳಂತಹ ಸಾಂಪ್ರದಾಯಿಕ ತಾಣಗಳು ಜಾಗತಿಕವಾಗಿ ಹೆಚ್ಚಿನ ಗೂಗಲ್ ಸರ್ಚ್ ಆಗಿವೆ.
ಕ್ರೀಡೆಗಳ ಕುರಿತಾದ ಗೂಗಲ್ ಹುಡುಕಾಟ:
2024 ರಲ್ಲಿ ಜಾಗತಿಕ ಹುಡುಕಾಟಗಳಲ್ಲಿ ಕ್ರೀಡಾ ಘಟನೆಗಳು ಹೆಚ್ಚಿನ ಪ್ರಾಬಲ್ಯ ಸಾಧಿಸಿದವು. ಕೋಪಾ ಅಮೇರಿಕಾ ಮತ್ತು UEFA ಯುರೋಪಿಯನ್ ಚಾಂಪಿಯನ್‌ಶಿಪ್ ಗೂಗಲ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕ್ರಿಕೆಟ್ ನಲ್ಲಿ ಆಸಕ್ತಿ ಹೊಂದಿರುವವರು ICC ಪುರುಷರ T20 ವಿಶ್ವಕಪ್‌ಗಾಗಿ ಹುಡುಕಿದ್ದಾರೆ. ಅದರಲ್ಲೂ ಭಾರತ- ಇಂಗ್ಲೆಂಡ್ ಕ್ರಿಕೆಟ್ ಪಂದ್ಯ ಪ್ರಮುಖವಾಗಿದೆ.
ಪ್ರಪಂಚದಾದ್ಯಂತ ಆಸಕ್ತಿ ಹುಟ್ಟುಹಾಕಿದ ಪ್ರಮುಖ ಸುದ್ದಿ ಘಟನೆಗಳು
ರಾಜಕೀಯ ಬದಲಾವಣೆಗಳು ಮತ್ತು ಹವಾಮಾನ ಸುದ್ದಿಗಳು ಗೂಗಲ್ ಹುಡುಕಾಟದಲ್ಲಿ ಪ್ರಮುಖವಾಗಿವೆ. ಯು.ಎಸ್. ಚುನಾವಣೆಯ ಕುರಿತು ಹೆಚ್ಚು ಹುಡುಕಲ್ಪಟ್ಟ ವಿಷಯಗಳಾಗಿವೆ. ಅದರೊಂದಿಗೆ ಅತಿಯಾದ ಶಾಖ ಮತ್ತು ಹ್ಯುರಿಕನ್ ಮಿಲ್ಟನ್ ಚಂಡಮಾರುತದ ಕುರಿತು ಗೂಗಲ್ ನಲ್ಲಿ ಹೆಚ್ಚು ಹುಡುಕಾಟಗಳಾಗಿವೆ. ಒಲಿಂಪಿಕ್ಸ್ ಬಗೆಗೆ ಹೆಚ್ಚಿನವರು ಹುಡುಕಾಡಿದ್ದಾರೆ.
ಜನಪ್ರಿಯ ವ್ಯಕ್ತಿಗಳು ಮತ್ತು ಮನರಂಜನೆ
ಡೊನಾಲ್ಡ್ ಟ್ರಂಪ್, ಕಮಲಾ ಹ್ಯಾರಿಸ್ ಮತ್ತು ಕ್ಯಾಥರೀನ್, ಪ್ರಿನ್ಸೆಸ್ ಆಫ್ ವೇಲ್ಸ್ ನಂತಹ ಸಾರ್ವಜನಿಕ ವ್ಯಕ್ತಿಗಳ ಬಗ್ಗೆ ಹೆಚ್ಚು ಹುಡುಕಲಾಗಿದೆ. ಹಾಲಿವುಡ್ ಟ್ರೆಂಡ್‌ಗಳು, ಗೂಗಲ್ ಹುಡುಕಾಟಗಳಲ್ಲಿ ನಟರಾದ ಕ್ಯಾಟ್ ವಿಲಿಯಮ್ಸ್, ಪವನ್ ಕಲ್ಯಾಣ್, ಆಡಮ್ ಬ್ರಾಡಿ, ಎಲಾ ಪರ್ನೆಲ್ ಮತ್ತು ಹಿನಾ ಖಾನ್ ಅವರು ಈ ವರ್ಷದ ಮನರಂಜನಾ ಸಂಭಾಷಣೆಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ.
ಜಾಗತಿಕವಾಗಿ ಚಲನಚಿತ್ರ ಹುಡುಕಾಟಗಳಲ್ಲಿ ಇನ್‌ಸೈಡ್ ಔಟ್ 2 ಚಲನಚಿತ್ರ ಗೂಗಲ್ ನಲ್ಲಿ ಹೆಚ್ಚಾಗಿ ಹುಡುಕಲಾಗಿದೆ. ನಂತರ ಡೆಡ್‌ಪೂಲ್ ಮತ್ತು ವೊಲ್ವೆರಿನ್, ಸಾಲ್ಟ್‌ಬರ್ನ್ ಮತ್ತು ಬೀಟಲ್‌ಜ್ಯೂಸ್‌ನಂತಹ ಹಿಟ್‌ಗಳನ್ನು ಹುಡುಕಾಲಾಗಿದೆ. ಜಾಗತಿಕ ಸಂಗೀತ ಹುಡುಕಾಟಗಳಲ್ಲಿ ಡಿಡ್ಡಿ, ಆಶರ್, ಲಿಂಕಿನ್ ಪಾರ್ಕ್, ಸಬ್ರಿನಾ ಕಾರ್ಪೆಂಟರ್ ಮತ್ತು ಜಸ್ಟಿನ್ ಟಿಂಬರ್ಲೇಕ್ ಅಗ್ರಸ್ಥಾನದಲ್ಲಿವೆ.
ಜನಪ್ರಿಯ ಹಾಡುಗಳು ಮತ್ತು ವೈರಲ್ ಆದ ಹಾಡುಗಳು
ಕೆಂಡ್ರಿಕ್ ಲಾಮರ್ ಅವರ ʼನಾಟ್ ಲೈಕ್ ಅಸ್ʼ
ರೋಸ್ ಮತ್ತು ಬ್ರೂನೋ ಮಾರ್ಸ್ ಅವರ ʼಎಪಿಟಿʼ
ಕ್ರೀಪಿ ನಟ್ಸ್ ಅವರ ಬ್ಲಿಂಗ್-ಬ್ಯಾಂಗ್-ಬ್ಯಾಂಗ್-ಬಾರ್ನ್
ಕೆ.ಎಸ್.ಐ. ಅವರ ʼತಿಕ್ ಆಫ್ ಇಟ್ʼ
ಸಬ್ರಿನಾ ಕಾರ್ಪೆಂಟರ್ ಅವರ ʼಎಸ್ಪ್ರೆಸೊʼ
ಇವಿಷ್ಟು ಸಂಗೀತದ ಮೂಲಕ ವರ್ಷದ ಪಾಪ್ ಸಂಸ್ಕೃತಿಯ ಹಾಡುಗಳು ವ್ಯಾಪಕವಾಗಿ ಪ್ರತಿಬಿಂಬಿಸುತ್ತದೆ.
ಕ್ರೀಡಾ ಜನಪ್ರಿಯ ವ್ಯಕ್ತಿಗಳು ಮತ್ತು ಕ್ರೀಡಾ ತಂಡಗಳು
ಕ್ರೀಡಾಪಟುಗಳಾದ ಇಮಾನೆ ಖೇಲಿಫ್, ಮೈಕ್ ಟೈಸನ್, ಲ್ಯಾಮಿನ್ ಯಮಲ್, ಸಿಮೋನ್ ಬೈಲ್ಸ್ ಮತ್ತು ಜೇಕ್ ಪಾಲ್ ಹಾಗೂ ಕ್ರೀಡೆಗೆ ಸಂಬಂಧಿತ ಹುಡುಕಾಟಗಳು ನಡೆದಿವೆ.
ಕ್ರೀಡಾ ತಂಡಗಳಾದ ನ್ಯೂಯಾರ್ಕ್ ಯಾಂಕೀಸ್, ಲಾಸ್ ಏಂಜಲೀಸ್ ಡಾಡ್ಜರ್ಸ್, ಇಂಟರ್ ಮಿಯಾಮಿ ಸಿಎಫ್, ಬೇಯರ್ 04 ಲೆವರ್‌ಕುಸೆನ್ ಮತ್ತು ಬೋಸ್ಟನ್ ಸೆಲ್ಟಿಕ್ಸ್ ಈ ವರ್ಷ ಅಂತರರಾಷ್ಟ್ರೀಯ ಗಮನ ಸೆಳೆದವು.
ಗೂಗಲ್ ಮ್ಯಾಪ್ ಹುಡುಕಾಟಗಳಲ್ಲಿ ಪ್ರಮುಖ ಪ್ರವಾಸಿ ತಾಣಗಳು
ಗೂಗಲ್ ಜಾಗತಿಕ ಹುಡುಕಾಟದ ವರದಿಯಲ್ಲಿ ಜನಪ್ರಿಯ ಉದ್ಯಾನವನಗಳು, ವಸ್ತುಸಂಗ್ರಹಾಲಯಗಳು ಮತ್ತು ಕ್ರೀಡಾಂಗಣಗಳ ಬಗ್ಗೆ ಪ್ರಮುಖವಾಗಿ ಹುಡುಕಾಟ ಮಾಡಲಾಗಿದೆ.
ಜಾಗತಿಕ ಪ್ರಮುಖ ಪಾರ್ಕ್‌ಗಳು:
ಯು.ಎಸ್.ಎ. ನ ಸೆಂಟ್ರಲ್ ಪಾರ್ಕ್, ನ್ಯೂಯಾರ್ಕ್
ಫಿಲಿಪೈನ್ಸ್ ನ ರಿಜಾಲ್ ಪಾರ್ಕ್, ಮನಿಲಾ
ಜಪಾನ್ ನ ಓಹೋರಿ ಪಾರ್ಕ್, ಫುಕುವೋಕಾ
ಸ್ಪೇನ್ ನ ಪಾರ್ಕ್ ಗುಯೆಲ್, ಬಾರ್ಸಿಲೋನಾ
ಜಪಾನ್ ನ ಓಡೋರಿ ಪಾರ್ಕ್, ಹೊಕ್ಕೈಡೋ
ಜಾಗತಿಕ ಪ್ರಮುಖ ಮ್ಯೂಸಿಯಂಗಳು:
ಯುಕೆ ಲಂಡನ್ ನ ಬ್ರಿಟಿಷ್ ಮ್ಯೂಸಿಯಂ
ಬ್ರೆಜಿಲ್ ನ ಮ್ಯೂಸಿಯಂ ಆಫ್ ಆರ್ಟ್ ಆಫ್ ಸಾವೊ ಪಾಲೊ ಅಸಿಸ್ ಚಟೌಬ್ರಿಯಾಂಡ್, ಸಾವೊ ಪಾಲೊ
ಯು.ಎಸ್.ಓ. ನ ಸೈನ್ಸ್ ಅಂಡ್ ಇಂಡಸ್ಟ್ರಿ ಮ್ಯೂಸಿಯಂ, ಚಿಕಾಗೋ
ಮೆಕ್ಸಿಕೊ ದ ಮ್ಯೂಸಿಯೊ ನ್ಯಾಶನಲ್ ಡಿ ಆಂಟ್ರೊಪೊಲೊಜಿಯಾ, ಮೆಕ್ಸಿಕೊ ಸಿಟಿ
ಸ್ಪೇನ್ ನ ಮ್ಯೂಸಿಯೊ ನ್ಯಾಶನಲ್ ಡೆಲ್ ಪ್ರಾಡೊ, ಮ್ಯಾಡ್ರಿಡ್
ಜಾಗತಿಕ ಪ್ರಮುಖ ಸ್ಟೇಡಿಯಂಗಳು:
ಇಟಲಿಯ ಅರೆನಾ ಡಿ ವೆರೋನಾ, ವೆರೋನಾ
ಸ್ಪೇನ್ ನ ಸ್ಯಾಂಟಿಯಾಗೊ ಬರ್ನಾಬ್ಯೂ ಸ್ಟೇಡಿಯಂ, ಮ್ಯಾಡ್ರಿಡ್
ಇಂಗ್ಲೆಂಡ್ ನ ವೆಂಬ್ಲಿ ಸ್ಟೇಡಿಯಂ
ಜಪಾನ್ ನ ಟೋಕಿಯೋ ಡೋಮ್, ಬಂಕ್ಯೊ
ಸ್ಪೇನ್ ನ ಸ್ಪಾಟಿಫೈ ಕ್ಯಾಂಪ್ ನೌ, ಬಾರ್ಸಿಲೋನಾ
ಈ ತಾಣಗಳು, ಕ್ರೀಡಾ ಸ್ಥಳಗಳು ಮತ್ತು ನೈಸರ್ಗಿಕ ಉದ್ಯಾನವನಗಳು ಪ್ರವಾಸಿಗರ ವೈವಿಧ್ಯಮಯ ಆಸಕ್ತಿಗಳನ್ನು ಬಹಿರಂಗಪಡಿಸಿದೆ.