ಮಂಗಳೂರು: ಮಂಗಳೂರು ಜಂಕ್ಷನ್- ಸುರತ್ಕಲ್ ರೈಲು ಮಾರ್ಗದ ಕುಲಶೇಖರದಲ್ಲಿ ಭೂಕುಸಿತದಿಂದ ಹಳಿ ಮೇಲೆ ಬಿದ್ದಿರುವ ಮಣ್ಣು ತೆರವು ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿ ಸೋಮವಾರವೂ ಮುಂದುವರಿದಿದೆ. ಮಂಗಳವಾರವೂ ಈ ಮಾರ್ಗದಲ್ಲಿ ರೈಲು ಸಂಚಾರ ರದ್ದುಪಡಿಸಲಾಗಿದೆ.
ಸೋಮವಾರ ಕೊಚ್ಚುವೇಲಿ-ಪೋರ್‌ಬಂದರ್ ರೈಲು, ಎರ್ನಾಕುಳಂ-ಅಜೆ¾àರ್ ರೈಲುಗಳು ಈ ಮಾರ್ಗ ದಲ್ಲಿ ಸಂಚರಿಸುವುದಾಗಿ ರವಿವಾರ ಪ್ರಕಟಿಸ
ಲಾಗಿತ್ತು. ಆದರೆ ಸೋಮವಾರ ಇಲ್ಲಿ ಮತ್ತೆ ಮಣ್ಣುಕುಸಿದ ಹಿನ್ನೆಲೆಯಲ್ಲಿ ಈ ರೈಲುಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಿವೆ. ಆ. 26ರ ರೈಲು ನಂ.16334 ತಿರುನಂತಪುರ-ವೇರಾವಲ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಶೋರ್ನೂರು, ಜೋಲಾರ್‌ಪೇಟೆ, ರಾಣಿಗುಂಟ, ಜಲಗಾಂವ್ ಮೂಲಕ ಸಂಚರಿಸಲಿದೆ.
ಮಡಗಾಂವ್‌ನಿಂದ ಮಂಗಳೂರು ಮತ್ತು ಮಂಗಳೂರಿನಿಂದ ಮಡಗಾಂವ್‌ಗೆ ಸಂಚರಿಸುವ ಇಂಟರ್‌ಸಿಟಿ ಮತ್ತು ಪ್ಯಾಸೆಂಜರ್‌ಗಳ ಸಂಚಾರ ಮಂಗಳವಾರವೂ ರದ್ದುಗೊಂಡಿದೆ. ಮಡಗಾಂವ್‌ನಿಂದ ಮಂಗಳೂರಿಗೆ ಆಗಮಿಸುವ ಡೆಮು ಪ್ಯಾಸೆಂಜರ್ ಸುರತ್ಕಲ್‌ಗೆ ಆಗಮಿಸಿ ಅಲ್ಲಿಂದ ಮರಳಲಿದೆ.
ಮಂಗಳೂರು ಸೆಂಟ್ರಲ್-ಕುರ್ಲಾ ಮತ್ಸ್ಯಗಂಧ ಎಕ್ಸ್‌ಪ್ರೆಸ್ ಮತ್ತು ಮಂಗಳೂರು ಜಂಕ್ಷನ್-ಸಿಎಸ್‌ಎಂಟಿ ಎಕ್ಸ್‌ಪ್ರೆಸ್ ಕೂಡ ಸುರತ್ಕಲ್‌ನಿಂದಲೇ ಹಿಂದಿರುಗಲಿವೆ ಎಂದು ಪ್ರಕಟನೆ ತಿಳಿಸಿದೆ.