Advertisement
ತಾಲೂಕು ಎಲ್ಲೋಡು ಗ್ರಾಪಂಗೆ ಸೇರಿದ ಗುಂಡ್ಲಹಳ್ಳಿ ಗ್ರಾಮದ ಸರ್ವೆ ನಂಬರ್ 203ರಲ್ಲಿನ 1 ಎಕರೆ ಜಮೀನು ತೆರವು ಮಾಡಿ ಸ್ವಾಧೀನ ದಾರರಿಗೆ ನೀಡಬೇಕು ಎಂದು ಹೈಕೋರ್ಟ್ ಎಸಿಗೆ ಸೂಚಿಸಿತ್ತು. ಅದರಂತೆ ವಸತಿ ಮನೆಗಳು ನಿರ್ಮಾಣ ಮಾಡಿಕೊಂಡಿದ್ದ ನಾಲ್ವರಿಗೆ ಮತ್ತು ಉಳಿಕೆ ಜಮೀನಿನ ಹಾಲಿ ಸ್ವಾಧೀನದಾರರಿಗೆ ನೋಟಿಸ್ ನೀಡಲಾಗಿತ್ತು. ಆದರೂ, ತೆರವು ಮಾಡಿರಲಿಲ್ಲ. ಹೀಗಾಗಿ ತಹಶೀಲ್ದಾರ್ ಸಿಗ್ಬತುಲ್ಲಾ, ಸಿಪಿಐ ಲಿಂಗರಾಜು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮನೆ ತೆರವುಗೊಳಿಸುವಂತೆ 4 ದಿನ ಕಾಲಾವಕಾಶ ಕೊಟ್ಟಿದ್ದರು. ಆದರೂ, ತೆರವು ಗೊಳಿಸದ ಕಾರಣ ಮಂಗಳವಾರ ಚಿಕ್ಕಬಳ್ಳಾಪುರ ಎಸಿ ರಘುನಂದನ್ ನೇತೃತ್ವದಲ್ಲಿ, ಪೊಲೀಸ್ ರಕ್ಷಣೆಯಲ್ಲಿ ವಾಸವಿದ್ದ ನಾಲ್ಕು ಮನೆ ಹೊರತು ಪಡಿಸಿ 0-34 ಗುಂಟೆ ಜಮೀನು ಸ್ವತ್ತಿನ ಸ್ವಾಧೀನ ತೆರವುಗೊಳಿಸಿದರು.
ಮಾತನಾಡಿದ ಎಸಿ, ಹೈಕೋರ್ಟ್ ಆದೇಶದಂತೆ ಮನೆ ನಿರ್ಮಾಣ ಮಾಡಿಕೊಂಡಿ ರುವ ನಾಲ್ವರಿಗೆ ಮತ್ತು ಜಮೀನು ಸ್ವಾ ಧೀನದಾರರಿಗೆ ನೋಟಿಸ್ ನೀಡಲಾಗಿದ್ದರೂ, ಅವರು ತೆರವು ಗೊಳಿಸಿದ ಕಾರಣ, ಖುದ್ದು ತೆರವು ಮಾಡಲಾಗಿದೆ. ಹಾಲಿ ವಾಸ ಇರುವ ಮನೆಯವರು ತೆರವು ಮಾಡಲು ಕಾಲಾವಕಾಶ ಕೋರಿದ್ದರಿಂದ ಮಾನವೀಯ ದೃಷ್ಟಿಯಿಂದ ಅಂಗೀಕರಿಸಿ, ಈ ಮನವಿಗಳನ್ನು ಹೈಕೋರ್ಟ್‌ಗೆ ಮುಂದಿನ ಕ್ರಮಕ್ಕೆ ಸಲ್ಲಿಸಲಾಗಿದೆ.
Related Articles
Advertisement