Advertisement

ನಗರಸಭೆಯಿಂದ ಅನಧಿಕೃತ ಹೂವಿನ ಅಂಗಡಿಗಳ ತೆರವು

01:03 PM Feb 20, 2021 | Team Udayavani |

ಕೋಲಾರ: ಅನಧಿಕೃತವಾಗಿ ನಗರಸಭೆ ಸ್ಥಳವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಹೂವಿನ ಟೆಂಟ್‌ಗಳನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೂ ವ್ಯಾಪಾರಿಗಳು ತಳ್ಳುವ ಗಾಡಿಗಳಲ್ಲಿ ಹೂ ವ್ಯಾಪಾರ ಮಾಡುವ ಅವಕಾಶ ನಗರಸಭೆ ವತಿಯಿಂದಕಲ್ಪಿಸುವುದಾಗಿ ನಗರಸಭೆ ಅಧ್ಯಕ್ಷೆ ಶ್ವೇತಾ ಆರ್‌. ಶಬರೀಶ್‌ ಭರವಸೆ ನೀಡಿದರು.

Advertisement

ನಗರದ ಹಳೇ ಬಸ್‌ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ದಿಢೀರ್‌ ಭೇಟಿ ನೀಡಿದ ಅಧ್ಯಕ್ಷರು ಅನಧಿಕೃತವಾಗಿ ನಗರಸಭೆ ಸ್ಥಳವನ್ನು ಒತ್ತುವರಿ ಮಾಡಿಕೊಂಡು ಹೂವಿನ ವ್ಯಾಪಾರ ನಡೆಸುತ್ತಿದ್ದ ಟೆಂಟ್‌ಗಳನ್ನು ಜೆಸಿಬಿ ಮುಖಾಂತರ ತೆರವುಗೊಳಿಸಿ ಮಾತನಾ ಡಿದರು. ಜನರ ವಿಶ್ರಾಂತಿಗಾಗಿ ನಿರ್ಮಿಸಿದ ತಂಗುದಾಣ ಒತ್ತುವರಿ ಮಾಡಿ ಕೊಂಡು ಸಿಮೆಂಟ್‌ ಹಾಗೂ ಕಬ್ಬಿಣದಿಂದ ನಿರ್ಮಿಸಿ ಕೊಂಡಿದ್ದ ಪೆಟ್ಟಿಗೆಗಳನ್ನು ತೆರವುಗೊಳಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ತಂಗುದಾಣ ಸುಸಜ್ಜಿತಗೊಳಿಸುವುದಾಗಿ ತಿಳಿಸಿದರು.

ತೆರವು ಕಾರ್ಯಚರಣೆ ಸಂದರ್ಭದಲ್ಲಿ ಟೆಂಟ್‌ ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದ ಹೂ ವ್ಯಾಪಾರಿಗಳು ತಮ್ಮ ಟೆಂಟ್‌ಗಳನ್ನು ತಾವೇ ತೆರವುಗೊಳಿಸುತ್ತೇವೆ. ನಮಗೆ ಕಾಲಾವಕಾಶನೀಡುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು. ಸಂಜೆವರೆಗೂ ಕಾಲಾವಕಾಶ ನೀಡಿ ತೆರವುಗೊಳಿಸದಿದ್ದಲ್ಲಿ ನಾಳೆ ಮತ್ತೆ ತೆರವುಕಾರ್ಯಚರಣೆ ಪ್ರಾರಂಭಿಸುದಾಗಿ ತಿಳಿಸಿದರು.

ಹೂ ವ್ಯಾಪಾರಿಗಳು ತಳ್ಳುವ ಗಾಡಿಗಳಲ್ಲಿ ಹೂ ವ್ಯಾಪಾರ ಮಾಡುವ ಅವಕಾಶ ನಗರಸಭೆ ವತಿಯಿಂದ ಕಲ್ಪಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಎನ್‌. ಎಸ್‌.ಪ್ರವೀಣ್‌ಗೌಡ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಮಂಜುನಾಥ್‌, ನಗರಸಭೆ ಪೌರಾಯುಕ್ತಶ್ರೀಕಾಂತ್‌, ಸದಸ್ಯರಾದ ನಾರಾಯಣಮ್ಮ, ಮಂಜುನಾಥ್‌, ಸುರೇಶ್‌ ಮುಖಂಡರಾದ ಶಬರೀಶ್‌ ಯಾದವ್‌, ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next