Advertisement

ಬಳ್ಳಾರಿ: ನಗರದಲ್ಲಿನ ಅನಧಿಕೃತ ಜಾಹೀರಾತು ಫಲಕ ತೆರವು; ಪಾಲಿಕೆ ಸ್ಥಾಯಿ ಸಮಿತಿಯಿಂದ ತೆರವು ಕಾರ್ಯಾಚರಣೆ

01:48 PM Dec 14, 2022 | Team Udayavani |

ಬಳ್ಳಾರಿ: ಇಲ್ಲಿನ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ವೃತ್ತಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಜಾಹೀರಾತು ಬೋರ್ಡ್ ಗಳನ್ನು ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿಯು ಬುಧವಾರ (ಡಿ.14) ತೆರವುಗೊಳಿಸಿತು.

Advertisement

ನಗರದ ಸಂಗಮ್ ವೃತ್ತದಲ್ಲಿ ಜೆಸಿಬಿ ಯಂತ್ರದೊಂದಿಗೆ ತೆರವು ಕಾರ್ಯಾಚರಣೆಗಿಳಿದ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಾಂಜಿನಿ, ಸದಸ್ಯ ಮುಂಡ್ಲೂರು ಪ್ರಭಂಜನ್, ಸದಸ್ಯ ಮುಲ್ಲಂಗಿ ನಂದೀಶ್, ಪಾಲಿಕೆ ಅಧಿಕಾರಿಗಳಾದ ಕಿರಣ್, ಶ್ರೀನಿವಾಸ್, ಹರ್ಷವರ್ಧನ್ ಇತರರು, ವೃತ್ತದಲ್ಲಿ ನಾಲ್ಕು ಅನಧಿಕೃತ ಬೋರ್ಡ್ ಗಳನ್ನು ತೆರವುಗೊಳಿಸುವ ಮೂಲಕ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದರು.

ಪಾಲಿಕೆ ವ್ಯಾಪ್ತಿಯ ವಿವಿಧ ವೃತ್ತಗಳಲ್ಲಿ ಅಳವಡಿಸಿರುವ ಅಧಿಕೃತ, ಅನಧಿಕೃತ ಬೋರ್ಡ್ ಗಳನ್ನು ಸಮೀಕ್ಷೆ ನಡೆಸಲಾಗಿದೆ. ಸುಮಾರು 700-750 ಬೋರ್ಡ್ ಇರುವುದು ದೃಢಪಟ್ಟಿದೆ. ಇದರಲ್ಲಿ ಸುಮಾರು 300-400 ಬೋರ್ಡ್ ಗಳು ಅಧಿಕೃತವಾಗಿದ್ದು, ಸುಮಾರು 300ಕ್ಕೂ ಹೆಚ್ಚು ಬೋರ್ಡ್ ಗಳು ಅನಧಿಕೃತವಾಗಿವೆ.

ಈ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆರಂಭದಲ್ಲಿ ಸಂಗಮ್ ವೃತ್ತದಲ್ಲಿ ನಾಲ್ಕು ಬೋರ್ಡ್ ಗಳನ್ನು ತೆರವು ಗೊಳಿಸುವ ಮೂಲಕ ಚಾಲನೆ ನೀಡಲಾಯಿತು ಎಂದು ಸಮಿತಿ ಸದಸ್ಯರು, ಪಾಲಿಕೆ ಸದಸ್ಯ ಮುಂಡ್ಲೂರು ಪ್ರಭಂಜನ್ ತಿಳಸಿದ್ದಾರೆ.

Advertisement

ಸಂಗಮ್ ವೃತ್ತದ ಬಳಿಕ ಮೋತಿ ವೃತ್ತದಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು. ತೆರವಿಗೂ ಮುನ್ನ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗುವುದು. ಅವರು ಪಾಲಿಕೆಗೆ ಹಣ ಸಂದಾಯ ಮಾಡಿದ್ದಾರಾ ಇಲ್ಲವೆ ಎಂಬುದನ್ನು ಖಚಿತ ಪಡಿಸಲಾಗುವುದು. ಇಲ್ಲದಿದ್ದಾಗ ನೋಟೀಸ್ ನೀಡಿ, ಪಾವತಿಸುವಂತೆ ಗಡುವು ನೀಡಲಾಗುವುದು. ಈಗಾಗಲೇ ನೋಟೀಸ್ ನೀಡಿದವರಲ್ಲಿ ನಿರ್ಲಕ್ಷ್ಯ ವಹಿಸಿದಲ್ಲಿ ಅಂತಹವರ ಅನಧಿಕೃತ ಬೋರ್ಡ್ ಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದವರು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next