Advertisement

ಶಾಲೆಗೆ ತೊಡಕಾಗಿದ್ದ ಹಳೇ ಮರಗಳ ತೆರವು

02:39 PM Oct 31, 2021 | Team Udayavani |

ಆಲೂರು: ಶಾಲೆಯ ಆವರಣದಲ್ಲಿ ಇದ್ದ ನೀಲಗಿರಿ ಹಾಗೂ ಅಕೆಶಿಯಾ ಮರಗಳನ್ನು ತೆರವುಗೊಳಿಸಿ ಮಕ್ಕಳು ಹಾಗೂ ಪೋಷಕರಲ್ಲಿದ್ದ ಅತಂಕವನ್ನು ದೂರ ಮಾಡಿದರು. ಆಲೂರು ತಾಲೂಕಿನ ಬೈರಾಪುರ ಗ್ರಾಪಂ ವ್ಯಾಪ್ತಿಯ ಹೇಮಾವತಿ ಪುನರ್‌ ವಸತಿ ಗ್ರಾಮ(ಧರ್ಮಪುರಿ)ದ ಶಾಲೆಯಲ್ಲಿ ಸುಮಾರು 15 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಶಾಲೆಯ ಆವರಣದಲ್ಲಿ 30 ಕ್ಕೂ ಹೆಚ್ಚು ವರ್ಷದ ಹಳೆಯ ಶಿಥಿಲವಾದ ಮರಗಳಿದ್ದು ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕೆಲವು ಮರದ ಕೊಂಬೆಗಳು ಕಟ್ಟಡ ಹಾಗೂ ಆವರಣದಲ್ಲಿ ಬೀಳುವ ಅತಂಕದಲ್ಲಿದ್ದವು.

Advertisement

ಇದನ್ನೂ ಓದಿ:- ಲಿಂಗತ್ವ ಅಲ್ಪಸಂಖ್ಯಾತರಿಗೆ ಸೌಲಭ್ಯ ಕಲ್ಪಿಸಿ 

ಇನ್ನೂ ಕೆಲವು ಮರದ ಕೊಂಬೆಗಳ ಮದ್ಯ ವಿದ್ಯುತ್‌ ತಂತಿಗಳು ಹಾದು ಹೋಗಿದ್ದು ಹಾಗೂ ವಿದ್ಯುತ್‌ ತಂತಿಯ ಮೇಲೆ ಮರದ ಕೊಂಬೆಗಳು ತಾಗಿಕೊಂಡಿರುವುದರಿಂದ ಯಾವ ಕ್ಷಣದಲ್ಲದರೂ ಅಪಾಯ ಎದುರಾಗಬಹುದು ಎಂದು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದರು. ಈ ಬಗ್ಗೆ ಉದಯವಾಣಿ ಪತ್ರಿಕೆ ಹಳೆಯ ಮರಗಳನ್ನು ತೆರವು ಮಾಡಿ ಶಾಲಾ ಮಕ್ಕಳ ಜೀವ ಉಳಿಸಿ ಸವಿಸ್ತಾರವಾದ ವರದಿ ಪ್ರಕಟಿಸುವ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳ ಗಮನ ಸೆಳೆದಿತ್ತು.

ಗ್ರಾಮಸ್ಥರು ಮರಗಳನ್ನು ತೆರವುಗೊಳಿಸುವಂತೆ ಉದಯವಾಣಿ ಪತ್ರಿಕೆ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಶಾಲೆಯ ಆವರಣದಲ್ಲಿದ್ದ ಬೃಹತ್‌ ಮರಗಳನ್ನು ತೆರವುಗೊಳಿಸಿ ಪೋಷಕರಲ್ಲಿದ್ದ ಅತಂಕವನ್ನು ದೂರ ಮಾಡಿದ್ದಾರೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಶಾಲಾ ಕಾಂಪೌಂಡ್‌ ನಿರ್ಮಾಣ ಮಾಡಲಾಗುವುದು ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಶುದ್ಧ ನೀರಿನ ಘಟಕ ಸ್ಥಾಪಿಸುವಂತೆ ಶಾಸಕರಲ್ಲಿ ಮನವಿ ಮಾಡಲಾಗುವುದು ಎಂದು ಬೈರಾಪುರ ಗ್ರಾಪಂ ಸದಸ್ಯ ಗಣೇಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next