ಶ್ರೀರಂಗಪಟ್ಟಣ: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಪುರಸಭಾ ವ್ಯಾಪ್ತಿಯ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಯಿತು.
4 ತುಕಡಿಯ 60 ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ತಹಶೀಲ್ದಾರ್ ಎಂ.ವಿ. ರೂಪಾ ನೇತೃತ್ವದಲ್ಲಿ ಪುರಸಭೆ ಮುಖ್ಯಾ ಧಿಕಾರಿ ಕೃಷ್ಣ,ಭಾರತೀಯ ಪುರಾತತ್ವ ಸರ್ವೇ ಕ್ಷಣ ಇಲಾಖೆಯಸಹಾಯಕ ಸಂರಕ್ಷಣಾಧಿಕಾರಿ ಸುನಿಲ್ ಕುಮಾರ್,ಸಹಾಯಕ ಅಧೀಕ್ಷಕ ಪುರಾತತ್ವ ಶ್ರೀಗುರು ಭಾಗಿಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಜಂಟಿಕಾರ್ಯಾಚರಣೆ ನಡೆಸಿ, ಅಕ್ರಮ ಕಟ್ಟಡಗಳನ್ನುಎರಡು ಜೆಸಿಬಿ ಯಂತ್ರಗಳನ್ನು ಬಳಸಿ ನೆಲಸಮ ಗೊಳಿಸಲು ಮುಂದಾದರು.
ಗಂಜಾಂನ ಟಿಪ್ಪು ಬೇಸಿಗೆ ಅರಮನೆ ಮುಂ ಭಾಗದ ಅಕ್ರಮ ಕಟ್ಟಡ ಹಾಗೂ ವಾಣಿಜ್ಯಮಳಿಗೆಗಳನ್ನು ಅಧಿಕಾರಿಗಳು ಜೆಸಿಬಿ ಯಂತ್ರದಮೂಲಕ ತೆರವಿಗೆ ಮುಂದಾ ದ ವೇಳೆ ಕಟ್ಟಡ ಮಾಲೀಕರು ಸ್ವತಃ ಅವರೇ ತೆರವು ಮಾಡಿಕೊಡುವುದಾಗಿ ತಿಳಿಸಿ, ವಾಣಿಜ್ಯ ಮಳಿಗೆಯ ಬೆಲೆ ಬಾಳುವ ವಸ್ತುಗಳನ್ನು ತೆರವು ಮಾಡಿ, ನಂತರಕಟ್ಟಡ ತೆರವಿಗೆ ಕಾಲವಕಾಶ ಕೇಳಿ ದರು. ಅಧಿಕಾರಿಗಳು ಸ್ಥಳದಲ್ಲೇ ಇದ್ದು, ಮಳಿಗೆಯ ವಸ್ತುಗಳನ್ನು ತೆರವುಗೊಳಿಸಿದರು. ಪಟ್ಟಣ ವ್ಯಾಪ್ತಿಯ ಕಾವೇರಿ ಸಂಗಮ, ಗೋಸಾಯಿಘಾಟ್ ಬಳಿಯ ಕಾವೇರಿ ನದಿ ತೀರದಲ್ಲಿ ಅನಧಿಕೃತ ಶೆಡ್ಡು, ಮಳಿಗೆ ಹಾಗೂ ಕಟ್ಟಡ ತೆರವುಗೊಳಿಸಿದರು.
ಅಕ್ರಮ ಕಟ್ಟಡ ತೆರವು ಸ್ವಾಗತರ್ಹ: ಅಕ್ರಮ ಕಟ್ಟಡ ತೆರವಿಗೆ ಹೈಕೋರ್ಟ್ ಕಳೆದ 5 ತಿಂಗಳ ಹಿಂದೆಯೇ ಆದೇಶ ನೀಡಿತ್ತು. ಆದರೂ, ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಕ್ರಮ ಕಟ್ಟಡ ತೆರವಿಗೆ ಮುಂದಾಗಿರಲಿಲ್ಲ. ಈ ಸಂಬಂಧ ಪುರಸಭೆ ವಿಶೇಷ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದು, ಕ್ರಮಕ್ಕೆಪುರಸಭೆ ಮುಖ್ಯಾಧಿಕಾರಿ ಕೃಷ್ಣ ಸಮಯವಕಾಶ ಕೇಳಿದರು. ಹೈಕೋರ್ಟ್ ಆದೇಶದಂತೆ ಅಕ್ರಮಕಟ್ಟಡ ನೆಲಸಮಗೊಳಿಸಿರುವುದು ಸ್ವಾಗತರ್ಹ ಎಂದು ಪುರಸಭೆ ಸದಸ್ಯ ಎಂ.ನಂದೀಶ್ ಸಮರ್ಥಿಸಿಕೊಂಡರು.
ಅನಧಿಕೃತ ಕಟ್ಟಡ ತೆರವು: ಕಾವೇರಿ ನದಿ ತೀರದಗೋಸಾಯಿಘಾಟ್, ಕಾವೇರಿ ಸಂಗಮದಲ್ಲಿಅನಧಿಕೃತ ಕಟ್ಟಡ ತೆರವುಗೊಳಿಸಿ, ಜೊತೆಗೆ ಗಂಜಾಂರಸ್ತೆಯಲ್ಲಿರುವ ಅನಧಿಕೃತ ವಾಣಿಜ್ಯ ಮಳಿಗೆಯನ್ನುತೆರವುಗೊಳಿಸಲು ಮುಂದಾಗಿದ್ದೇವೆ. ಆದರೆ, ಮಾಲೀಕ ಒಂದು ದಿನದ ಸಮಯ ಕೇಳಿದ್ದು, ಬೆಲೆಬಾಳುವ ವಸ್ತುಗಳನ್ನು ಮಳಿಗೆಯಿಂದ ಹೊರ ತೆಗೆದನಂತರ ಆ ಕಟ್ಟಡ ತೆರವುಗೊಳಿಸಲಾಗುವುದು ಎಂದು ತಹಶೀಲ್ದಾರ್ ಎಂ.ವಿ.ರೂಪ ತಿಳಿಸಿದ್ದಾರೆ.