Advertisement

ಸರ್ಕಾರಿ ಭೂಮಿ ಒತ್ತುವರಿ ತೆರವು

03:09 PM Nov 06, 2019 | Suhan S |

ಬೇತಮಂಗಲ: ಕಮ್ಮಸಂದ್ರ ಗ್ರಾಪಂನ ಕೆ.ಜಿ.ಕೋಟೆ ಗ್ರಾಮದಲ್ಲಿ ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಕೃಷಿಗಾಗಿ ಗ್ರಾಮದ ವೆಂಕಟೇಶಪ್ಪ ಅವರಿಂದ 4 ಎಕರೆ ಲೀಸ್‌ಗೆ ಪಡೆದುಕೊಂಡು, ಸರ್ಕಾರದ ಭೂಮಿ ಒತ್ತುವರಿ ಮಾಡಿಕೊಂಡಿದ್ದರು. ಅಲ್ಲದೆ, ಸುತ್ತಮುತ್ತಲಿನ ರೈತರಿಗೆ ತೊಂದರೆ ನೀಡುತ್ತಿದ್ದರು. ಈ ಬಗ್ಗೆ ಬಂದ ದೂರಿನ್ವಯ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತೆರವುಗೊಳಿಸಿದರು.

Advertisement

ಬೆಂಗಳೂರು ಮೂಲದ ರೈತರೊಬ್ಬರು ತಾವು ಲೀಸ್‌ಗೆ ಪಡೆದ 4 ಎಕರೆ ಜಮೀನಿನ ಜೊತೆಗೆ ಸುತ್ತಮುತ್ತಲಿನ ಸರ್ಕಾರಿ ಗೋಮಾಳ, ರಸ್ತೆ ಇತರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು, ಸುತ್ತಮುತ್ತಲಿನ ರೈತರು ತಮ್ಮ ಜಮೀನಿಗೆ ಹೋಗಲು ಸಹ ರಸ್ತೆ ಬಿಟ್ಟು ಕೊಡದೆ ತೊಂದರೆ ಮಾಡುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ಸುತ್ತಮುತ್ತಿನ ರೈತರು ಜಿಲ್ಲಾಧಿಕಾರಿಗೆ ಮತ್ತು ಕಂದಾಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ನಂತರ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾದ ತಹಶೀಲ್ದಾರ್‌ ಕೆ.ರಮೇಶ್‌, ಬೇತಮಂಗಲ ಉಪತಹಶೀಲ್ದಾರ್‌ ಧಮೇಂದ್ರ ಪ್ರಸಾದ್‌, ಕಂದಾಯ ಅಧಿಕಾರಿ ಮಂಜುನಾಥ್‌, ಗ್ರಾಮ ಲೆಕ್ಕಿಗ ದಿನೇಶ್‌, ಮಹೇಶ್‌ ಇತರೆ ಸಿಬ್ಬಂದಿ ಕಾರ್ಯಚರಣೆ ನಡೆಸಿ ಜೆಸಿಬಿ ಯಂತ್ರದೊಂದಿಗೆ ಒತ್ತುವರಿಯಾಗಿದ್ದ ರಸ್ತೆಯನ್ನು ತೆರವುಗೊಳಿಸಿ, ರೈತರ ಭೂಮಿ ಎಷ್ಟಿದಿಯೋ ಅಷ್ಟರಲ್ಲೇ ಕೃಷಿ ನಡೆಸಿಕೊಳ್ಳಲು ಸೂಚನೆ ನೀಡಲಾಯಿತು. ಮತ್ತೆ ಒತ್ತುವರಿಯಾದರೆ, ಇತರೆ ರೈತರಿಗೆ ತೊಂದರೆ ಕೊಟ್ಟರೆ ಕಠಿಣ ಕ್ರಮಕೈಗೊಳ್ಳುವುದಾಗಿ, ಅಕ್ರಮ ಪ್ರವೇಶ ಮಾಡಿದ್ದ ರೈತನಿಗೆ ಎಚ್ಚರಿಕೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next