Advertisement

ದೇವಸ್ಥಾನದ ಬಳಿ ಮಾಂಸದಂಗಡಿ ತೆರವುಗೊಳಿಸಿ

02:48 PM Jan 10, 2020 | Suhan S |

ನಾಗಮಂಗಲ: ಪ್ರಸಿದ್ಧ ದೇವಸ್ಥಾನದ ಬಳಿ ಕೋಳಿ ಮಾಂಸದ ಅಂಗಡಿ ತೆರವಿಗಾಗಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಬಿಂಡಿಗನವಿಲೆಯಲ್ಲಿ ನಡೆದಿದೆ.

Advertisement

ಬಿಂಡಿಗನವಿಲೆ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಚನ್ನಕೇಶವ ಮತ್ತು ಗರುಡ ದೇವಸ್ಥಾನವಿದೆ. ಪ್ರತಿನಿತ್ಯ ಪ್ರವಾಸಿಗರು, ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ. ದೇವಸ್ಥಾನ ಸುತ್ತಮುತ್ತ ಕೋಳಿ ಮಾಂಸದ ರೆಕ್ಕೆಪುಕ್ಕ, ಕೊಳಚೆ ಬಿದ್ದು ದುರ್ನಾತ ಬೀರುತ್ತಿದೆ. ‌ ಭಕ್ತರು ಮೂಗು ಮುಚ್ಚಿಕೊಂಡು ದೇವರ ದರ್ಶನ ಮಾಡಬೇಕಾಗಿದೆ.

ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು ನಡೆದ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವೂ ಆಗಿತ್ತು. ಗ್ರಾಮದ ಸ್ವತ್ಛತೆ ಮತ್ತು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದಗ್ರಾಮದ ಹೊರವಲಯದ ಕೋಡಿ ಹಳ್ಳದ ಸಮೀಪ ಸ್ಥಳ ನಿಗದಿಪಡಿಸಿತ್ತು. ಆದರೆ ಮಾಂಸದಂಗಡಿ ವ್ಯಾಪಾರಿಗಳು ಅಲ್ಲಿ ವ್ಯಾಪಾರ ಮಾಡದೆ ದೇವಸ್ಥಾನದ ಬಳಿಯೇ ಮತ್ತೆ ಮಾಂಸ ಮಾರಾಟ ಮಾಡುತ್ತಿದ್ದಾರೆ.

ಅಶುದ್ಧ ವಾತಾವರಣದಿಂದ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕಿರಿಕಿರಿ ಉಂಟಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮಾಂಸದಂಗಡಿ ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಪ್ರತಭಟನೆಯಲ್ಲಿ ಬಿಂಡಿಗನವಿಲೆ ಸರಸ್ವತಿ, ದೊರೆಸ್ವಾಮಿ, ನಾಗಮ್ಮ, ಶ್ರೀನಾಥ್‌, ಮೆಡಿಕಲ್‌ ಸುರೇಶ್‌, ಮಂಗರವಳ್ಳಿ ಮಂಜೇಗೌಡ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next