Advertisement

ಮುಲಾಜಿಲ್ಲದೆ ಭೂ ಒತ್ತುವರಿ ತೆರವು ಮಾಡಿ

02:17 PM Dec 13, 2019 | Suhan S |

ಮುಳಬಾಗಿಲು: ಸರ್ಕಾರಿ ಜಮೀನು ಯಾರೇ ಒತ್ತುವರಿ ಮಾಡಿದ್ದರೂ ಮುಲಾಜಿಗೆ ಒಳಗಾಗದೇ ತೆರವುಗೊಳಿಸಿ, ಜನವರಿ ತಿಂಗಳಿನಿಂದ ಗ್ರಾಪಂ ಮಟ್ಟದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ಹಮ್ಮಿಕೊಳ್ಳಲಾಗುವುದು ಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ಹೇಳಿದರು.

Advertisement

ತಾಲೂಕು ಆಡಳಿತದಿಂದ ಬೈರಕೂರು ಗ್ರಾಮದ ನೆಹರು ಕೆನಡಿ ಪ್ರೌಢಶಾಲೆ ಆವರಣದಲ್ಲಿ ಅಬಕಾರಿ ಸಚಿವ ಎಚ್‌.ನಾಗೇಶ್‌ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಬೈರ ಕೂರು ಹೋಬಳಿ ಮಟ್ಟದ ಬೈರಕೂರು, ಮುಷ್ಟೂರು, ರಾಜೇಂದ್ರಹಳ್ಳಿ, ನಂಗಲಿ, ಮುದಿಗೆರೆ ಮ.ಗಡೂರು, ಗುಡಿಪಲ್ಲಿ, ಹೆಬ್ಬಣಿ ಗ್ರಾಪಂ ವ್ಯಾಪ್ತಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಅಹವಾಲು ಸ್ವೀಕರಿಸಿ ಮಾತನಾಡಿದರು. ತಾವು ರಾಜ್ಯಕ್ಕೆ ಸಚಿವನಾದರೂ ನಿಮ್ಮಿಂದ ಶಾಸಕನಾಗಿದ್ದು, ಮುಳಬಾಗಿಲಿಗೆ ನನ್ನ ಮೊದಲ ಆದ್ಯತೆ. ಜನಸಾಮಾನ್ಯರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರಿ ಅಧಿಕಾರಿಗಳೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾರೆಂದರು.

ಅರ್ಜಿ ವಿಲೇವಾರಿ: ಈಗಾಗಲೇ ದುಗ್ಗಸಂದ್ರದ ಕುರುಡು ಮಲೆ, ಆವಣಿ, ಕಸಬಾ ಹೋಬಳಿಗಳಲ್ಲಿ ಸಭೆ ಗಳನ್ನು ಏರ್ಪಡಿಸಲಾಗಿದೆ. ಜನರಿಂದ ಪಡೆದು ಕೊಳ್ಳುವ ಅರ್ಜಿಗಳಲ್ಲಿ ಕೆಲವೊಂದನ್ನು ಸ್ಥಳದಲ್ಲಿಯೇ ಬಗೆ ಹರಿಸಿದರೆ ಉಳಿದ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ಅಧಿಕಾರಿಗಳು ಬಗೆಹರಿಸುವರು ಎಂದು ಹೇಳಿದರು.

ಪಟ್ಟಿ ಮಾಡಿಕೊಡಿ: ಇನ್ನು ತಾಯಲೂರು ಹೋಬಳಿಯಲ್ಲಿ ಮುಂದಿನ ಹತ್ತು ದಿನಗಳಲ್ಲಿ ಸಭೆ ನಡೆಸಿದ ನಂತರ ಜನವರಿ ತಿಂಗಳಿನಿಂದ ಪ್ರತಿ ಗ್ರಾಪಂ ಮಟ್ಟದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ಹಮ್ಮಿಕೊಂಡು, ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಜನರು ಸಮಸ್ಯೆಗಳು ಮತ್ತು ಅಗತ್ಯ ಸೌಲಭ್ಯ ತಾವುಗಳೇ ಪಟ್ಟಿ ಮಾಡಿಕೊಟ್ಟರೆ ಇತ್ಯರ್ಥಪಡಿಸಲಾಗುದು. ಈಗಾಗಲೇ ನಾವು ತಾಲೂಕಾ ದ್ಯಂತ ಕೈಗೊಳ್ಳುತ್ತಿರುವ ಮೂಲ ಸೌಕರ್ಯಗಳೊಂದಿಗೆ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಸದಾ ಸಿದ್ಧವಿರುವುದಾಗಿ ತಿಳಿಸಿದರು.

ನೇರವಾಗಿ ಭೇಟಿ ಮಾಡಿ: ಜಿಪಂ ಅಧ್ಯಕ್ಷ ವೆಂಕಟೇಶ್‌ ಮಾತನಾಡಿ, ತನ್ನ ಆಯ್ಕೆಯಲ್ಲಿ ಸಚಿವ ನಾಗೇಶ್‌ ಅವರ ಸಹಕಾರವೂ ಸಾಕಷ್ಟಿದೆ. ವಿಶೇಷವಾಗಿ ಈ ಕ್ಷೇತ್ರದ ಅಭಿವೃದ್ಧಿಗೆ ತಾನೂ ಹೆಚ್ಚಿನ ಸಹಕಾರ ನೀಡುತ್ತನೆ. ಅಲ್ಲದೇ, ತಮ್ಮ ಕಡೆಯಿಂದ ಯಾವುದೇ ಕೆಲಸವಾಗಬೇಕಾದರೂ ನೇರವಾಗಿ ಭೇಟಿ ಮಾಡಿದ್ರೆ ಶೀಘ್ರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

Advertisement

ಗ್ರಾಪಂ ಮಟ್ಟದಲ್ಲಿ ಸಭೆ: ತಾಪಂ ಅಧ್ಯಕ್ಷ ಎ.ವಿ. ಶ್ರೀನಿವಾಸ್‌ ಮಾತನಾಡಿ, ಕುಂದುಕೊರತೆಗಳ ಸಭೆಗಳಲ್ಲಿ ಸಚಿವರೊಂದಿಗೆ ಪಾಲ್ಗೊಂಡು ಶೀಘ್ರ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗುತ್ತಿದೆ. ಗ್ರಾ.ಪಂ. ಮಟ್ಟದಲ್ಲಿ ಸಭೆಗಳನ್ನು ಕೈಗೊಂಡು ಹಳ್ಳಿಗಳಲ್ಲಿನ ಪೂರ್ಣ ಸಮಸ್ಯೆಗಳನ್ನು ಅರಿತು ಬಗೆಹರಿಸಲಾಗುವುದು ಎಂದು ಹೇಳಿದರು.

ತಹಶೀಲ್ದಾರ್‌ ರಾಜಶೇಖರ್‌, ಇಒ ಎಂ.ಬಾಬು, ಟಿಎಪಿಸಿಎಂಎಸ್‌ ಅಧ್ಯಕ್ಷ ಆಲಂಗೂರು ಶಿವಣ್ಣ, ರಾಜ್ಯ ಬಿಜೆಪಿ ಮುಖಂಡ ಸುರೇಂದ್ರಗೌಡ, ಜಿಪಂ ಸದಸ್ಯರಾದ ಪ್ರಕಾಶ್‌ ರಾಮಚಂದ್ರ, ಅರವಿಂದ್‌, ನಾಗಮಣಿ

ಸುಬ್ರಮಣಿರೆಡ್ಡಿ, ಜೆಡಿಯು ಮುಖಂಡ ಎಂ. ಗೋಪಾಲ್‌, ತಾಪಂ ಸದಸ್ಯರಾದ ಮಾರಪ್ಪ, ಶ್ರೀನಾಥ್‌, ಬೈರಕೂರು ಹೋಬಳಿ ರಾಜಸ್ವ ನಿರೀಕ್ಷಕ ವೆಂಕಟೇಶ್‌, ತಾಲೂಕು ಬಿಜೆಪಿ ಅಧ್ಯಕ್ಷ ಪುಣ್ಯಹಳ್ಳಿ ನಾಗಾರ್ಜುನ, ರಾಜೇಂದ್ರಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಪಿಡಿಒಗಳಾದ ಚಂದ್ರಶೇಖರ್‌, ಎನ್‌

.ನರಸಿಂಹಮೂರ್ತಿ, ಗೇಮ್‌ ಚೌಹಾಣ್‌, ವಿಜಯಮ್ಮ, ಈರಪ್ಪ, ಶ್ರೀನಿವಾಸ್‌, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next