Advertisement
ಎಸ್ಸೆಸ್ಸೆಲ್ಸಿ ಕೇಂದ್ರ ಬದಲಿಸಿದ್ದೇಕೆ?: ವಿಶ್ವನಾಥಪುರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರವನ್ನು ಯಾವ ರೀತಿ ಅಧಿಕಾರಿಗಳು ಬದಲಾಯಿಸಿದ್ದಾರೆ. ಅದಕ್ಕೆ ಕಾರಣಗಳೇನು ಎಂಬುದು ಸರಿಯಾದ ಮಾಹಿತಿಯನ್ನು ಅಧಿಕಾರಿಗಳು ಮೊದಲು ನೀಡಬೇಕು. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರೌಢಶಾಲೆ ಮತ್ತು ಕಾಲೇಜನ್ನು ಮಂಜೂರು ಮಾಡಿಕೊಡಲಾಗಿತ್ತು. ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಆ ಕೇಂದ್ರದಲ್ಲಿದೆ. ಉಪನಿರ್ದೇಶಕರ ಕಚೇರಿ ಅಲ್ಲಿಗೆ ಸ್ಥಳಾಂತರಗೊಂಡರೆ ಅಲ್ಲಿ ಪರೀಕ್ಷಾ ಕೇಂದ್ರ ಇರಬಾರದೆಂಬ ನಿಯಮವೇನೂ ಇಲ್ಲ. ಖಾಸಗಿ ಶಾಲೆಗೆ ನೀಡಿರುವುದು ತಪ್ಪಾಗಿದೆ.
Related Articles
Advertisement
ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಅಧಿಕಾರಿಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರದೆ, ಕುಡಿಯುವ ನೀರಿನ ಸಮಸ್ಯೆ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜನರ ಕಲ್ಯಾಣಕ್ಕೆ ನೆರವಾಗುವ ಕೇಂದ್ರ ಸರ್ಕಾರದ ಬಹಳಷ್ಟು ಪ್ರಾಯೋಜಿತ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕಾದರೆ, ಅಧಿಕಾರಿಗಳ ಸಹಕಾರ ಹಾಗೂ ಮುಂದಾಳತ್ವ ಬಹಳ ಅಗತ್ಯ ಎಂದು ತಿಳಿಸಿದರು.
ಅನುದಾನ ಖಾಲಿ ಮಾಡಿ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಪ್ರತಿ ತಾಲೂಕಿಗೆ 2 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ ಎಂದು ಇಲಾಖೆ ಅಧಿಕಾರಿ ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಸದರು, ಕೇಂದ್ರ ಸರ್ಕಾರದ ಯಾವುದೇ ಅನುದಾನ ವೆಚ್ಚವಾಗದೆ ಹಿಂದಿರುಗಬಾರದು. ಮಾರ್ಚ್ ಅಂತ್ಯದೊಳಗೆ ಅನುದಾನವನ್ನು ಸಮಪರ್ಕವಾಗಿ ಬಳಕೆ ಮಾಡಿಕೊಳ್ಳಬೇಕೆಂದು ಸೂಚಿಸಿದರು.
ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ಮಾತನಾಡಿ, ಜಾಲಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ವಹಿಸಬೇಕೆಂದು ಆದೇಶಿಸಲಾಗಿದೆ. ತ್ಯಾಜ್ಯ ವಿಲೇವಾರಿ ಘಟಕಕ್ಕೆ 72 ಗ್ರಾಮಗಳಿಗೆ ಜಿಪಂ ಜಾಗ ಕೇಳಿದ್ದು, ಈಗಾಗಲೇ ತಹಶೀಲ್ದಾರ್‌ರಿಗೆ ಜಾಗ ಗುರುತಿಸುವಂತೆ ಆದೇಶ ಮಾಡಲಾಗಿದೆ. ಬೂದಿಗೆರೆ ಗ್ರಾಮದಲ್ಲಿ ತಾಪಂ ಅಧ್ಯಕ್ಷರು ಜಾಗ ಗುರುತಿಸಿಕೊಡುವಂತೆ ಸಭೆಯ ಗಮನಕ್ಕೆ ತಂದಿರುವುದರಿಂದ ಆದ್ಯತೆ ಮೆರೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಪಂ ಅಧ್ಯಕ್ಷೆ ಭಾರತಿ ಮಾತನಾಡಿ, ಬೂದಿಗೆರೆ ಗ್ರಾಮಕ್ಕೆ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ನೀಡುವಂತೆ ಹಲವಾರು ಬಾರಿ ಮನವಿ ಮಾಡಿದರೂ ಗುರುತಿಸಿಕೊಟ್ಟಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕೆಂದರು. ಜಾಗೃತಿ ಸಮಿತಿ ಸದಸ್ಯ ಕಾರಹಳ್ಳಿ ಜಯರಾಮ್ ಮಾತನಾಡಿದರು. ಈ ವೇಳೆ ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ, ಜಿಪಂ ಸಿಇಒ ಆರ್.ಲತಾ, ಉಪ ಕಾರ್ಯದರ್ಶಿ ಕರಿಯಪ್ಪ, ಮುಖ್ಯ ಲೆಕ್ಕಾಧಿಕಾರಿ ಶೋಭಾ, ಯೋಜನಾಧಿಕಾರಿ ವಿನುತಾರಾಣಿ ಮತ್ತಿತರರು ಹಾಜರಿದ್ದರು.