ಪಿರಿಯಾಪಟ್ಟಣ: ಸರ್ಕಾರಿ ಸ್ವತ್ತನ್ನು ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಶಾಸಕ ಕೆ.ಮಹದೇವ್ ಅಧಿಕಾರಿಗಳಿಗೆ ತಾಕೀತು ಮಾಡಿದರು. ತಾಲೂಕಿನ ಹಾರನಹಳ್ಳಿ ಮತ್ತು ಅಂಬಾರೆಲ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ, ರಸ್ತೆ ಅಭಿವೃದಿಟಛಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನಲ್ಲಿ ಕೆಲವರು ಜನನಾಯಕರ ಸೋಗು ಹಾಕಿಕೊಂಡು ಭೂಗಳ್ಳತನವನ್ನೇ ಬಂಡವಾಳವನ್ನಾಗಿ ಮಾಡಿ ಕೊಂಡು ಯಾವುದೇ ಅಳುಕಿಲ್ಲದೇ ಸರ್ಕಾರಿ ಜಾಗಗಳನ್ನು ಲಪಟಾಯಿಸುತ್ತಿದ್ದಾರೆ. ಅವರನ್ನು ರಕ್ಷಣೆ ಮಾಡಲು ಅಧಿಕಾರಿಗಳ ದೊಡ್ಡ ಪಡೆಯೇ ನಿಂತಿದೆ ಎಂದು ಆರೋಪಿಸಿದರು.
ತಾಲೂಕು ಶೇ.25ರಷ್ಟು ಮಾತ್ರ ನೀರಾವರಿ ಪ್ರದೇಶ, ಶೇ.75ರಷ್ಟು ಮಳೆಯಾಶ್ರಿತ ಪ್ರದೇಶ. ಆದರೆ, ಪ್ರಭಾವಿಗಳು ಕೆರೆಕಟ್ಟೆ, ಸರ್ಕಾರಿ ಗೋಮಾಳ ಮತ್ತಿತರೆ ಸ್ಥಳಗಳನ್ನು ಕಬಳಿಸಿದ್ದಾರೆ. ಕಳೆದ 30 ವರ್ಷ ತಾಲೂಕಿ ನಲ್ಲಿ ಶಾಸಕರಾಗಿದ್ದವರು ಕೇವಲ ಕುಡಿಯುವ ನೀರಿನ ಘಟಕಗಳನ್ನು ಬಿಟ್ಟರೆ ಮತಾöವ ಅಭಿವೃದಿಯೂ ಮಾಡದೆ ಬೆಂಗಳೂರಿಗೆ ಹೋಗಿ ನೆಲೆಸಿದ್ದರು. ಆದರೆ ಪ್ರತಿ ದಿನ ನಾನು ಜನರ ಮಧ್ಯೆಯೇ ಉಳಿದಿರುವ ಕಾರಣ ಅಭಿವೃದಿಟಛಿಗಾಗಿ ಜನ ದುಂಬಾಲು ಬೀಳುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ತಹಶೀಲ್ದಾರ್ ಶ್ವೇತಾ, ಜಿಪಂ ಸದಸ್ಯೆ ರುದ್ರಮ್ಮ, ತಾಪಂ ಸದಸ್ಯೆ ಸುಮಿತ್ರ, ಮುಖಂಡರಾದ ರಘುನಾಥ್, ಶಂಕರೇಗೌಡ, ಕರೀಗೌಡ, ಪುಟ್ಟಸ್ವಾಮಿ, ವಿದ್ಯಾಶಂಕರ್, ಮೈಲಾರಪ್ಪ, ರವೀಂದ್ರ, ಲೋಕೋಪ ಯೋಗಿ ಎಇಇ ನಾಗರಾಜು, ಗ್ರಾಮೀಣಾಭಿವೃದಿ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಪ್ರಭು, ಬಿಸಿಎಂ ವಿಸ್ತರಣಾಧಿಕಾರಿ ಮೋಹನ್ ಕುಮಾರ್, ಸಮಾಜ ಕಲ್ಯಾಣಾಧಿಕಾರಿ ಸಿದ್ದೇಗೌಡ, ಬೋರೇಗೌಡ ಇತರರಿದ್ದರು.