ರಾಮನಗರ: ಶಿಥಿಲವಾಗಿರುವ ಓವರ್ ಹೆಡ್ ಟ್ಯಾಂಕುಗಳು, ಸರ್ಕಾರಿ ಕಟ್ಟಡಗಳನ್ನು ತೆರವು ಗೊಳಿಸುತ್ತಿಲ್ಲ ವೇಕೆ? ಎಂದು ಮಾಗಡಿ ಶಾಸಕ ಎ.ಮಂಜು ಜಿಪಂ ಅಧಿಕಾರಿಗಳನ್ನು ಪ್ರಶ್ನಿಸಿದರು. ನಗರದ ಜಿಪಂಭವನದಲ್ಲಿ ಶುಕ್ರವಾರ ನಡೆದ 17ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಬೈರಮಂಗಲದಲ್ಲಿ ಸರ್ಕಾರಿ ಶಾಲೆ ಹೊಸ ಕಟ್ಟಡ ನಿರ್ಮಿಸಲಾಗಿದೆ.
ಶಿಥಿಲವಾಗಿರುವ ಹಳೇ ಕಟ್ಟಡವನ್ನು ಕೆಡವಿಲ್ಲ. ಶ್ರೀಗಿರಿಪುರದಲ್ಲಿ ಶಿಥಿಲವಾಗಿರುವ ಓವರ್ ಹೆಡ್ ಟ್ಯಾಂಕ್ ತೆರವುಗೊಳಿ ಸಿಲ್ಲ ಎಂದು ಜಿಪಂ ಸಿಇಒ ಅವರನ್ನು ಪ್ರಶ್ನಿಸಿದರು. ಮೊದಲು ಶಿಥಿಲವಾಗಿರುವ ಕಟ್ಟಡಗಳನ್ನು ತೆರವುಗೊಳಿಸಿ ಎಂದು ಸಿಇಒ ಅವರಿಗೆ ಸೂಚನೆ ಕೊಟ್ಟರು. ಜಿಲ್ಲೆಯಲ್ಲಿ ಸುವರ್ಣ ಗ್ರಾಮ ಯೋಜನೆ ಕಾಮಗಾರಿಗಳು ಬಾಕಿಯಿವೆ. ಈ ಯೋಜನೆ ಮುಗಿದು ವರ್ಷಗಳು ಉರುಳಿ ಹೊಸ ಯೋಜನೆಗಳು ಬಂದಿವೆ.
ಆದರೂ ಹಳೇ ಯೋಜನೆ ಕಾಮಗಾರಿ ಗಳು ಪೂರ್ಣಗೊಂಡಿಲ್ಲ. ಗ್ರಾಮ ವಿಕಾಸ ಯೋಜನೆ ಎಲ್ಲಿಗೆ ಬಂತು? ಹಣ ಬಿಡುಗಡೆ ಯಾಗಿದೆ, ಹೊಣೆ ಯಾರದ್ದು? ಎಂದು ಪ್ರಶ್ನಿಸಿದರು. ಅದಕ್ಕೆ ತಮಗೆ ವರದಿಬೇಕು ಎಂದು ಜಿಪಂ ಅಧಿಕಾರಿಗಳನ್ನು ಆಗ್ರಹಿಸಿ ದರು. ಗ್ರಾಪಂಗಳಲ್ಲಿ ಚುನಾಯಿತ ಪ್ರತಿನಿ ಧಿಗಳ ಅವಧಿ ಮುಕ್ತಾಯವಾಗಿದ್ದು, ಆಡಳಿ ತಗಾರರನ್ನು ನೇಮಿಸಲಾಗಿದೆ ಎಂದರು.
ಅನುಪಾಲನೆ ವರದಿ ಬಗ್ಗೆ ಅಸಮಾಧಾನ: ಸದಸ್ಯ ಗಂಗಾಧರ್ ಅನುಪಾಲನೆ ವರದಿ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಮಾರ್ಚ್‌ನಲ್ಲಿ ನಡೆದ ಸಭೆಯಲ್ಲಿ ವ್ಯಕ್ತ ವಾದ ವಿಷಯವೊಂದಕ್ಕೆ ಜೂನ್ 4ರಂದು ಕ್ರಮವಹಿಸಲು ಸೂಚಿಸಲಾಗಿದೆ. ಇನ್ನು ಮುಂದೆ ಸಭೆ ನಡೆದ 30 ದಿನಗಳಲ್ಲಿ ಉತ್ತರಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ ಸಿಇಒ ಇಕ್ರಂ, 30 ದಿನಗಳಲ್ಲಿ ಸದರಿ ಸದಸ್ಯರಿಗೆ ಮಾಹಿತಿ ನೀಡುವುದಾಗಿ, ನಂತರ ನಡೆಯುವ ಸಭೆಗಳಲ್ಲಿ ಮತ್ತೆ ಚರ್ಚೆಗೆ ಅವಕಾಶವಿರಲಿದೆ ಎಂದರು. ಉಪಾಧ್ಯಕ್ಷೆ ಉಷಾ ರವಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಂಕರ್, ಪ್ರಸನ್ನ ಕುಮಾರ, ಜಿಪಂ ಉಪಕಾರ್ಯದರ್ಶಿ ಉಮೇಶ್ ಮತ್ತಿತರರು ಹಾಜರಿದ್ದರು.