ಚಿಕ್ಕಬಳ್ಳಾಪುರ: ನಗರಸಭೆ ವ್ಯಾಪ್ತಿಯಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬ, ಪರಿವರ್ತಕಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಲು ನಗರಸಭೆ ಅಧ್ಯಕ್ಷಡಿ.ಎಸ್.ಆನಂದರೆಡ್ಡಿ ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಹಲವು ವಾರ್ಡ್‌ಗಳಿಗೆ ಭಾನುವಾರ ಭೇಟಿ ನೀಡಿ, ಅಪಾಯಕಾರಿ ಸ್ಥಿತಿಯಲ್ಲಿರುವವಿದ್ಯುತ್ ಕಂಬಗಳು, ಟಿ.ಸಿ. (ವಿದ್ಯುತ್ ಪರಿವರ್ತಕ)ಗಳಿರುವ ಸ್ಥಳವನ್ನು ಪರಿಶೀಲನೆ ನಡೆಸಿ ಮಾತನಾಡಿದರು.
ಈಗಾಗಲೇ ನಗರ ವ್ಯಾಪ್ತಿಯಲ್ಲಿನ ಅಪಾಯಕಾರಿವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ,ನಗರಸಭೆಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ನಗರದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ, ಅಪಾಯಕಾರಿ ವಿದ್ಯುತ್ ಕಂಬಗಳು,ಪರಿವರ್ತಕಗಳಿರುವ ಸ್ಥಳ ಪರಿಶೀಲನೆ ನಡೆಸಲಾಗಿದೆ.ನಗರ ನಿವಾಸಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತೆರವುಗೊಳಿಸಲು ಸೂಚನೆ: ನಗರದಲ್ಲಿರುವ 31 ವಾರ್ಡ್‌ಗಳಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ,ರಸ್ತೆ ಮಧ್ಯೆಯಲ್ಲಿ ಅಳವಡಿಸಿರುವ ವಿದ್ಯುತ್‌ಕಂಬಗಳು, ಹಳೆ, ಕಬ್ಬಿಣ, ವಾಲಿರುವ ಕಂಬಗಳು,ಮನೆಗಳಿಗೆ ತಾಗುವಂತಿರುವ ವಿದ್ಯುತ್ ತಂತಿ ಸೇರಿದಂತೆ ಅಪಾಯಕಾರಿ ಜಾಗದಲ್ಲಿ ಅಳವಡಿಸಿರುವವಿದ್ಯುತ್ ಪರಿವರ್ತಕಗಳನ್ನು ತ್ವರಿತಗತಿಯಲ್ಲಿತೆರವುಗೊಳಿಸಬೇಕು. ಅವುಗಳ ಜಾಗದಲ್ಲಿವೈಜ್ಞಾನಿಕವಾಗಿ ವಿದ್ಯುತ್ ಕಂಬ ಅಳವಡಿಸಬೇಕು.ಅಪಾಯಕಾರಿ ವಿದ್ಯುತ್ ಪರಿವರ್ತಕಗಳನ್ನುಸ್ಥಳಾಂತರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ತುರ್ತಾಗಿ ಕಬ್ಬಿಣದ ಕಂಬ ತೆರವುಗಳಿಸಿ: ನಗರದ ವ್ಯಾಪ್ತಿಯ ಗಂಗನಮಿದ್ದೆ, ವಾಪಸಂದ್ರ, ಎಚ್.ಎಸ್. ಗಾರ್ಡನ್, ಕಂದವಾರದ ಹಲವು ಕಡೆ ಕಬ್ಬಿಣದ ವಿದ್ಯುತ್ ಕಂಬಗಳಿಗೆ ಸಾರ್ವಜನಿಕರುಜಾನುವಾರುಗಳನ್ನು ಕಟ್ಟುತ್ತಿರುವುದು ಕಂಡುಬಂದಿದೆ.
ಪ್ರಸ್ತುತ ಮಳೆಗಾಲ ಅರಂಭಗೊಂಡಿರುವ ಹಿನ್ನೆಲೆಯಲ್ಲಿ ಕಬ್ಬಿಣದ ವಿದ್ಯುತ್ ಕಂಬಗಳಿಂದ ಮುಂದಾಗುವ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ತುರ್ತಾಗಿ ಕಬ್ಬಿಣದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ತೆರವಾದ ಸ್ಥಳದಲ್ಲಿ ಸಿಮೆಂಟ್ ಕಂಬಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ನಗರದ ವಿವಿಧ ವಾರ್ಡ್‌ಗಳ ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಬೆಸ್ಕಾಂ ಅಧಿಕಾರಿ ಅಜಿತ್, ನಗರಸಭೆ ಸದಸ್ಯರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿ, ಸ್ಥಳೀಯರು ಉಪಸ್ಥಿತರಿದ್ದರು.