Advertisement

ಸ್ವಚ್ಛತಾ ಆಂದೋಲನ, ಪರಿಸರ ಜಾಗೃತಿ

12:56 PM Jan 20, 2018 | |

ಕೆಂಚನಕೆರೆ: ವಿದ್ಯಾರ್ಥಿಗಳು ಶಾಲಾ ದಿನಗಳಲ್ಲಿ ಸ್ವಚ್ಛತೆ ಹಾಗೂ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕಿಲ್ಪಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಶ್ರೀಕಾಂತ್‌ ರಾವ್‌ ಹೇಳಿದರು.

Advertisement

ಅವರು ಜ. 19 ರಂದು ಕಾರ್ನಾಡು ಸಿ.ಎಸ್‌.ಐ. ಪ್ರೌಢಶಾಲೆ, ಕಿಲ್ಪಾಡಿ ಗ್ರಾಮ ಪಂಚಾಯತ್‌, ರಾಮಕೃಷ್ಣ ಮಿಷನ್‌ ಮಂಗಳೂರು ಇದರ ಆಶ್ರಯದಲ್ಲಿ ಸ್ವಚ್ಛತಾ ದಿವಸ್‌ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೆಂಚನಕೆರೆಯ ಅಂಗರಗುಡ್ಡೆಯ ಬಳಿಯಲ್ಲಿ ಕಸದ ತೊಟ್ಟಿ ನಿರ್ಮಿಸುವ ಬಗ್ಗೆ ಪ್ರಸ್ತಾವ ಇದ್ದು, ಗ್ರಾಮ ಪಂಚಾಯತ್‌
ವ್ಯಾಪ್ತಿಯಲ್ಲಿ ಕಸ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಬಗ್ಗೆ ಜಾಗದ ವ್ಯವಸ್ಥೆ ದೊರಕದೆ ಹಿನ್ನಡೆಯಾಗಿದೆ ಎಂದರು. ಪಿಡಿಒ ಹರಿಶ್ಚಂದ್ರ, ಕಿನ್ನಿಗೋಳಿ ಗ್ರಾಮ ಪಂಚಾಯತ್‌ ಸದಸ್ಯ ರವೀಂದ್ರ ದೇವಾಡಿಗ, ನಿವೃತ್ತ ಬ್ಯಾಂಕ್‌ ಅಧಿಕಾರಿ ಮಾಧವ್‌ ರಾವ್‌, ಗಣೇಶ್‌ ಶೆಟ್ಟಿ, ಶಿಕ್ಷಕರಾದ ಹರಿಶ್ಚಂದ್ರ ಯು., ಪುಷ್ಪಲತಾ, ಜಯಶ್ರೀ ನಾರಾಯಣ ಕಾಮತ್‌ ಕೆಂಚನಕೆರೆ ಮತ್ತಿತರರಿದ್ದರು. ಶಾಲಾ ವತಿಯಿಂದ ಅಂಗರಗುಡ್ಡೆ ಹಾಗೂ ಪುನರೂರು ಕುಕ್ಕುದ ಕಟ್ಟೆಯ ಬಳಿಯಲ್ಲಿ ಕಸದ ತೊಟ್ಟಿ ರಚಿಸುವ ಬಗ್ಗೆ ಉಭಯ ಪಂಚಾಯತ್‌ಗಳಿಗೆ ಮನವಿ ನೀಡಲಾಯಿತು. 100ಕ್ಕೂ ಅಧಿಕ ಮಕ್ಕಳು ರಸ್ತೆಯ ಇಕ್ಕಲಗಳಲ್ಲಿ ಬಿದ್ದ ಪ್ಲಾಸ್ಟಿಕ್‌ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿದರು. ಸುರೇಶ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next