Advertisement

ಸ್ವಚ್ಛತೆ ನಮ್ಮೆಲ್ಲರ ಆದ್ಯ ಕರ್ತವ್ಯ: ಡಾ|ಶಿವಾನಂದ ಮೂರ್ತಿ

12:03 AM Apr 09, 2019 | Sriram |

ಮಹಾನಗರ: ನಗರದ ಎಕ್ಕೂರಿನ ಮೀನುಗಾರಿಕಾ ಕಾಲೇಜಿನ ಎನ್ನೆಸ್ಸೆಸ್‌ ಘಟಕ ಮತ್ತು ಸ್ಟಾಫ್‌ ಕ್ಲಬ್‌ಗಳ ಸಹಯೋಗದಲ್ಲಿ ಕ್ಯಾಂಪಸ್‌ ಸ್ವಚ್ಛತೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

Advertisement

ಶ್ರಮದಾನದಲ್ಲಿ ಕಾಲೇಜಿನ ಡೀನ್‌ ಮತ್ತು ಜಲಕೃಷಿ, ಜಲಪರಿಸರ ನಿರ್ವ ಹಣೆ, ಮತ್ಸ್ಯ ಸಂಪನ್ಮೂಲ ನಿರ್ವಹಣೆ, ಜಲಚರ ಪ್ರಾಣಿಗಳ ಆರೋಗ್ಯ ನಿರ್ವಹಣೆ, ಮೀನು ಸಂಸ್ಕರಣ ತಾಂತ್ರಿ ಕತೆ, ಮೀನುಗಾರಿಕಾ ತಾಂತ್ರಿಕತೆ ಎಂಜಿ ನಿಯರ್‌, ದೈಹಿಕ ಶಿಕ್ಷಣ, ಆಸ್ತಿ ಶಾಖೆ, ಆಡಳಿತ, ಗ್ರಂಥಾಲಯ ವಿಭಾಗಗಳು, ವಿದ್ಯಾರ್ಥಿ- ವಿದ್ಯಾರ್ಥಿನಿಯರ ನಿಲಯ, ಬೋಧಕ-ಬೋಧಕೇತರ ಸಿಬಂದಿ, ಸಂಶೋಧನಾ ವರ್ಗ ಮತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಕಾಲೇಜಿನ ಡೀನ್‌ ಡಾ| ಎಚ್‌. ಶಿವಾನಂದ ಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ, ಸ್ವಚ್ಛತೆ ಎಂಬುದು ನಮ್ಮೆಲ್ಲರ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿ. ನಾವು ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟರೆ ಮಾತ್ರ ನಮಗೆ ಸ್ವಚ್ಛ ಗಾಳಿ, ನೀರು, ಪರಿಸರ ಇತ್ಯಾದಿಗಳನ್ನು ದೊರಕಿಸಿಕೊಳ್ಳಲು ಸಾಧ್ಯ ಹಾಗೂ ಸ್ವಚ್ಛ ವಾತಾವರಣ ಕಾಪಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬ ನಾಗರಿಕನು ಭೇದ- ಭಾವವಿಲ್ಲದೇ ಸ್ವ- ಇಚ್ಛೆಯಿಂದ ತಾನು ವಾಸಿಸುವ ಪರಿಸರವನ್ನು ಶುದ್ಧವಾಗಿ ಇರಿಸುವ ಜವಾಬ್ದಾರಿಯನ್ನು ನಿರ್ವಹಿ ಸಬೇಕು. ಬೇರೆಯವರಿಗೆ ದಾರಿದೀಪ ಆಗಬೇಕಾಗಿದೆ ಎಂದು ಹೇಳಿದರು. ಜಾಗತಿಕ ತಾಪಮಾನದಲ್ಲಿ ವ್ಯತ್ಯಾಸ ಕಂಡು ಬರುತ್ತಿರುವ ಇಂದಿನ ಯುಗದಲ್ಲಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಮತ್ತು ಆದ್ಯ ಕರ್ತವ್ಯ ಎಂದರು.

ಎನ್ನೆಸ್ಸೆಸ್‌ ಕಾರ್ಯಕ್ರಮ ಅಧಿಕಾರಿ ಡಾ| ಎ.ಟಿ. ರಾಮಚಂದ್ರ ನಾಯ್ಕ ಸ್ವಾಗತಿಸಿ, ಪ್ರಸ್ತಾವನೆಗೈದು ಶ್ರಮದಾನದ ಉದ್ದೇಶ ವಿವರಿಸಿದರು. ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್‌)ಯು ದೇಶದಲ್ಲಿ ಪ್ರಾರಂಭಗೊಂಡು 50 ವರ್ಷಗಳು ಕಳೆದಿವೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ 1969 ಸೆಪ್ಟಂಬರ್‌ 24ರಂದು ಇದನ್ನು ಕಾರ್ಯರೂಪಕ್ಕೆ ತರಲಾಗಿತ್ತು. ಈ ವರ್ಷ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ ಎಂದು ಹೇಳಿದರು.

Advertisement

ಕಾಲೇಜಿನ ಎನ್‌.ಎಸ್‌.ಎಸ್‌. ಘಟಕವು ಪ್ರತಿ ತಿಂಗಳು ಒಂದಲ್ಲ ಒಂದು ಕ್ಯಾಂಪಸ್‌ ಸ್ವ‌ತ್ಛತಾ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ ಎಂದು ವಿವರಿಸಿದರು.

ವಿವಿಧೆಡೆ ದುರಸ್ತಿ
ಶಿಬಿರಾರ್ಥಿಗ‌ಳು ವಿವಿಧ ಗುಂಪುಗಳಾಗಿ ಶ್ರಮದಾನದಲ್ಲಿ ಪಾಲ್ಗೊಂಡರು. ಪ್ಲಾಸ್ಟಿಕ್‌, ಒಣಗಿದ ಎಲೆ, ಹಳೆ ಬಟ್ಟೆ- ಸಾಮಾನುಗಳ ಸಂಗ್ರಹ, ಒಣಗಿದ ಪೊದೆಗಳು, ಒಳದಾರಿಗಳ ದುರಸ್ತಿ, ಹೂ- ಗಿಡಗಳಿಗೆ ನೀರು ಪೂರೈಕೆ, ಒಳ ಚರಂಡಿಗಳ ದುರಸ್ತಿ ಮುಂತಾದ ಕೆಲಸಗಳನ್ನು ನಿರ್ವಹಿಸಿದರು. ಸ್ಟಾಫ್‌ ಕ್ಲಬ್‌ ಕಾರ್ಯದರ್ಶಿ ಡಾ| ಗಿರೀಶ್‌ ಎಸ್‌.ಕೆ. ವಂದಿಸಿದರು.

ಪ್ಲಾಸ್ಟಿಕ್‌ ಮುಕ್ತ ಕ್ಯಾಂಪಸ್‌
ಮೀನುಗಾರಿಕಾ ಕಾಲೇಜಿನಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣವಾಗಿ ಹತೋಟಿಯಲ್ಲಿದ್ದು, ಬಹುತೇಕ ಪ್ಲಾಸ್ಟಿಕ್‌ ಮುಕ್ತ ಕ್ಯಾಂಪಸ್‌ ಆಗಿದೆ. ಇದಕ್ಕೆ ಎಲ್ಲ ಸಿಬಂದಿ ಮತ್ತು ವಿದ್ಯಾರ್ಥಿಗಳು ಕಾರಣಕರ್ತರು ಎಂದು ಎನ್ನೆಸ್ಸೆಸ್‌ ಕಾರ್ಯಕ್ರಮ ಅಧಿಕಾರಿ ಡಾ| ಎ.ಟಿ. ರಾಮಚಂದ್ರ ನಾಯ್ಕ ಸಮಾರೋಪದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next