Advertisement

ಕಸ ಹಾಕುವ ಸ್ಥಳದಲ್ಲಿ ರಂಗೋಲಿ: ಜಾಗೃತಿ

02:50 PM Feb 06, 2021 | Team Udayavani |

ಮುಳಬಾಗಿಲು: ನಗರದ ಸ್ವಚ್ಛತೆಗೆ ಆದ್ಯತೆ ನೀಡಲು ಮುಂದಾಗಿರುವ ನಗರಸಭೆ, ಅಧಿಕಾರಿಗಳು, ಪೌರಾಯುಕ್ತರು, ಅಧ್ಯಕ್ಷ ರಿಯಾಜ್‌ ಅಹಮದ್‌ ನೇತೃತ್ವದಲ್ಲಿ ಜನರು ಕಸ ಹಾಕುವ ಸ್ಥಳದಲ್ಲಿ ಸ್ವತ್ಛಗೊಳಿಸಿ ಸಗಣಿಯಿಂದ ಸಾರಿಸಿ ರಂಗೋಲಿ ಹಾಕುವ  ಮೂಲಕ ವಿನೂತನ ಜನಜಾಗೃತಿ ಮೂಡಿ ಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ರಿಯಾಜ್‌ ಅಹಮದ್‌ ಮತ್ತು ಪೌರಾಯುಕ್ತ ಶ್ರೀನಿವಾಸಮೂರ್ತಿ, ನಗರಸಭೆ ವ್ಯಾಪ್ತಿಯಲ್ಲಿ  ಪ್ರತಿನಿತ್ಯ ಮನೆ, ಹೋಟೆಲ್‌, ಬೇಕರಿ, ಅಂಗಡಿಗಳು, ಮಾರುಕಟ್ಟೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಾರ್ವಜನಿಕರು ರಸ್ತೆ,ಸಾರ್ವಜನಿಕ ಸ್ಥಳಗಳು ಅಥವಾ ಖಾಲಿ ನಿವೇಶನಗಳಲ್ಲಿ ಹಾಕಬಾರದು ಎಂದು ಹಲವು ಬಾರಿ ಸೂಚನೆ ನೀಡಿದ್ದರೂ ಕೆ.ಬೈಯಪಲ್ಲಿ ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ತರಕಾರಿ ಮಾರಾಟಗಾರರು ಪ್ರತಿನಿತ್ಯ ರಸ್ತೆಯಲ್ಲಿ ಹಾಕುತ್ತಿದ್ದರು.

ಇದರಿಂದ ರಸ್ತೆಯಲ್ಲಿ ಕಸದ ರಾಶಿ ಹೆಚ್ಚಾಗಿ ವಾಹನಗಳ ಓಡಾಟಕ್ಕೆ ತೊಂದರೆ ಯಾಗುತ್ತಿದೆಯಲ್ಲದೇ ಕೊಳೆತ ತರಕಾರಿಗಳ ದುರ್ವಾಸನೆಯಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗುತ್ತಿದೆ.ಅರಿವು ಮೂಡಿಸಲು ಕಸ ಹಾಕುವ ಸ್ಥಳವನ್ನು ಸ್ವತ್ಛಗೊಳಿಸಿ ಸಗಣಿಯಿಂದ ಸಾರಿಸಿ ರಂಗೋಲಿ ಹಾಕುವ ಮೂಲಕ ಸ್ವಚ್ಚತೆ ಕುರಿತು ಅರಿವು ಮೂಡಿಸಿದರು.

 ಇದನ್ನೂ ಓದಿ :ತಾಪಂ ಸದಸ್ಯರ ಸಾಮೂಹಿಕ ಗೈರು: ಸಭೆ ಮುಂದೂಡಿದ ಅಧ್ಯಕ್ಷೆ

ನಗರಸಭೆ ಅಧಿಕೃತ ವ್ಯಕ್ತಿಗಳು ಸಂಗ್ರಹಿಸುವವರಗೂ ಕಸವನ್ನು ತಮ್ಮ ಮನೆಗಳು ಮತ್ತು ಅಂಗಡಿಗಳ ಆವರಣದಲ್ಲೇ ಇಟ್ಟುಕೊಂಡು ಒಣಕಸ ಮತ್ತು ಹಸಿ ಕಸವನ್ನು ವಿಗಂಡಿಸಿ ನೀಡಬೇಕು ಎಂದು ಹೇಳಿದರು. ನಗರಸಭೆ ಎಇಇ ವೆಂಕಟೇಶ್‌,ನೋಡಲ್‌ ಅಧಿಕಾರಿ ಸುನೀಲ್‌ಕುಮಾರ್‌, ಕಿರಿಯ ಆರೋಗ್ಯ ನಿರೀಕ್ಷಕ ಮೇರಿ, ಪ್ರತಿಭಾ, ಶಿವಾರೆಡ್ಡಿ ಹಾಗೂ ಸಿಬ್ಬಂದಿ ಮತ್ತು ಕಾರ್ಮಿಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next