Advertisement

ಸ್ವಚ್ಛತೆ ಕಾಪಾಡಿದರೆ ಉತ್ತಮ ಆರೋಗ್ಯಕ್ಕೆ ವರದಾನ

08:35 PM Feb 15, 2021 | Team Udayavani |

ಬಂಗಾರಪೇಟೆ: ನಮ್ಮ ಮನೆ ಸುತ್ತಮುತ್ತಲು ಉತ್ತಮ ಪರಿಸರ, ಶಾಲೆ, ಆಸ್ಪತ್ರೆ, ಸಾರ್ವಜನಿಕ ಸ್ಥಳ ಗಳಲ್ಲಿ ಸ್ವಚ್ಛತೆ  ಕಾಪಾಡಿಕೊಂಡಲ್ಲಿ ಸಾಂಕ್ರಮಿಕ ಕಾಯಿಲೆಗಳಿಂದ ದೂರವಾಗಿ ಉತ್ತಮ ಆರೋಗ್ಯ ದಿಂದ ಜೀವನ ನಡೆಸಬಹುದಾಗಿರುವುದರಿಂದ ಎಲ್ಲರೂ ಸ್ವಚ್ಛತೆಗೆ ಆದ್ಯೆತೆ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಹೇಳಿದರು.

Advertisement

ಪಟ್ಟಣದ ಬಜಾರ್‌ ರಸ್ತೆಯಲ್ಲಿ ಪುರಸಭೆ ಹಾಗೂ ಸ್ವಾಮಿ ವಿವೇಕಾನಂದ ಯುವಕರ ಸಂಘದಿಂದ ಹಮ್ಮಿಕೊಂಡಿದ್ದ ಸಚ್ಛ ಭಾರತ್‌ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯ ಉತ್ತಮವಾಗಿರಲು ನಮ್ಮ ಸುತ್ತ ಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪಟ್ಟಣದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿ ಕೊಂಡಿದ್ದು, ಆವರಣವನ್ನು ಸ್ವಚ್ಛಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಅರಿವು ಮೂಡಿಸಿ: ನಗರಗಳು ಶುದ್ಧವಾಗಿ, ಸಮೃದ್ಧವಾಗಿ ಮತ್ತು ಆರೋಗ್ಯದಿಂದ ಇರಬೇಕು ಎಂದು ಪ್ರತಿಪಾದಿಸುತ್ತ ಮಹಾತ್ಮಗಾಂಧಿರವರ ಕನಸು ನನಸು ಮಾಡಲು ಇಂದಿನ ಯುವಜನ ಮುಂದಾಗ ಬೇಕು. ಪಟ್ಟಣದಲ್ಲಿ ಸ್ವತ್ಛತೆ ಕಾಪಾಡಿ ಶುದ್ಧ ಆಹಾರ ಸೇವನೆ ಮತ್ತು ಎಲ್ಲರೂ ಆರೋಗ್ಯ ವಂತರಾಗಿ ಬಾಳ ಬೇಕಾದರೆ ಯುವಜನ ಸ್ವಚ್ಛತೆ ‌ ಮತ್ತು ಶೌಚಾಲಯ ಬಳಕೆ ಹಾಗೂ ರೋಗಗಳು ಬಾರ ದಂತೆ ಮುಂಜಾಗ್ರತೆ ವಹಿಸುವ ಬಗ್ಗೆ ಸಾರ್ವ ಜನಿಕರಲ್ಲಿ ತಿಳುವಳಿಕೆ ಮೂಡಿಸಬೇಕೆಂದರು.

ತತ್ವಾದರ್ಶ ಪಾಲಿಸಿ: ಭಾರತೀಯ ಧಾರ್ಮಿಕತೆಯನ್ನು ಎತ್ತಿಹಿಡಿಯುವಲ್ಲಿ ಸ್ವಾಮಿ ವಿವೇಕಾನಂ ದರು ವಿಶ್ವದಲ್ಲೇ ಮೊದಲಿಗರಾಗಿ 1893 ರಲ್ಲಿ ಅಮೆರಿಕಾದ ಚಿಕಾಗೋ ನಗರದಲ್ಲಿ ನಡೆದ ಸಮ್ಮೇ ಳನದಲ್ಲಿ ಅವರಭಾಷಣಕ್ಕೆ ಪಾಶ್ಚಿಮಾತ್ಯರು ಬೆರ ಗಾಗಿ ಅವರ ಅನುಯಾಯಿಗಳಾದರು. ಸಮಾಜವು ಸಮಾನತೆಯನ್ನ ಹೊಂದಿದಾಗ ಮಾತ್ರ ಧರ್ಮವು ಉಳಿಯುತ್ತದೆಂಬ ವೈಯಕ್ತಿಕ ಸಂದೇಶ ನೀಡಿದರು.ಆದ್ದರಿಂದ ಜನಸೇವೆಯೇ ಜನಾರ್ದನ ಸೇವೆ ಎಂಬು  ದನ್ನು ಅವರು ಕೊಟ್ಟ ತತ್ವಗಳನ್ನು ಪಾಲಿಸಬೇಕೆಂದರು.

ಜಾಗೃತರಾಗಬೇಕು: ದೇಶದಲ್ಲಿ ಶೇ.60 ರಷ್ಟು ಯುವ ಜನತೆಯು ಕುಗ್ಗಿ ಹೋಗಿದ್ದಾರೆ. ಯುವಕರು ನಿರ್ದಿಷ್ಟ ದಾರಿಯಲ್ಲಿ ನಡೆಯುತ್ತಿಲ್ಲ. ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಯುವಕರೇ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ವಿವೇಕಾನಂದರು ಸಂದೇಶ ನೀಡಿ ಶತಮಾ‌ನ ಕಳೆದರೂ ಯುವ ಜನತೆ ಇನ್ನೂ ಎಚ್ಚೆತ್ತಿಲ್ಲ. ಇನ್ನಾದರೂ ಯುವಕರು ಜಾಗೃತರಾಗಬೇಕು. ನಿಸ್ವಾರ್ಥ, ಪಾರದರ್ಶಕತೆ, ಅಹಿಂಸೆ, ಸತ್ಯ ಪಾಲಿಸಬೇ ‌ಕು ಎಂದು ಕಿವಿಮಾತು ಹೇಳಿದರು.

Advertisement

ಪುರಸಭೆಯ ಸದಸ್ಯ ಪ್ರಶಾಂತ್‌, ಆರೋಗ್ಯಾಧಿಕಾರಿ ಗೋವಿಂದರಾಜು, ಸೋಮಣ್ಣ, ಕರವೇ ಚಲ ಪತಿ, ಸ್ವಾಮಿ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ‌ ‌ವಿಕುಮಾರ್‌, ಉಪಾಧ್ಯಕ್ಷ ಸತೀಶ್‌, ಪ್ರಧಾನದರ್ಶಿ ಚಂದ್ರಮೋಹನ್‌, ಗಜೇಂದ್ರರಾವ್‌, ಶಿವ ಕುಮಾರ್‌, ನಾಗೇಂದ್ರ, ಶೇಷಾದ್ರಿ, ನವೀನ್‌, ಅಶೋಕ್‌, ಪ್ರದೀಪ್‌, ಬಾಬು, ಮುದಾಸೀರ್‌, ನರಸಾ ರೆಡ್ಡಿ, ಶಫೀಕ್‌, ಮತೀನ್‌ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next