ಮೈಸೂರು: ನಂಜನಗೂಡು ತಾಲೂಕಿನ ಜ್ಯುಬಿಲಿಯಂಟ್ ಕಾರ್ಖಾನೆಯಿಂದ ಪಾಲಿಕೆಯಲ್ಲಿರುವ 2,500 ಮಂದಿ ಪೌರ ಕಾರ್ಮಿಕರಿಗೆ ಜಿಲ್ಲಾಡಳಿತದ ಮೂಲಕ ಅಗತ್ಯ ದಿನಸಿ ಕಿಟ್ ಗಳನ್ನು ಸಚಿವ ಎಸ್.ಟಿ.ಸೋಮಶೇಖರ್ ವಿತರಿಸಿದರು.
ನಗರದ ಟೌನ್‌ಹಾಲ್ ಮುಂಭಾಗದ ನಡೆದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಸಾಂಕೇತಿಕವಾಗಿ ಸಚಿವರು ದಿನಸಿ ಕಿಟ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜಿಲ್ಲೆಯಲ್ಲಿ ಕೋವಿಡ್ 19 ತಡೆಗೆ ಸ್ವಚ್ಛತೆಯೇ ಮುಖ್ಯ. ಸ್ವಚ್ಛತೆಗೆ ಮೂಲ ಕಾರಣವೇ ಪೌರ ಕಾರ್ಮಿಕರು.
ಕೋವಿಡ್ 19 ವೇಳೆ ಕಂಟೈನ್ಮೆಂಟ್ ಪ್ರದೇಶಗಳಿಗೂ ತೆರಳಿ ತಮ್ಮ ಜೀವಕ್ಕೆ ಅಪಾಯವಿದ್ದರೂ ಲೆಕ್ಕಿಸದೇ ನಗರವನ್ನು ಸ್ವಚ್ಛವಾಗಿರಿ ಸಲು ಕಾರಣರಾಗಿದ್ದೀರಿ ನಿಮಗೆ ನಾನು ತುಂಬು ಹೃದಯದ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ಶಾಸಕ ರಾಮದಾಸ್ ಮಾತನಾಡಿ, ಲಾಕ್‌ಡೌನ್ ನಡುವೆ ಯೂ ಪೌರ ಕಾರ್ಮಿಕರು ಭಯವಿಲ್ಲದೇ ಪಾಲಿಕೆ ನೀಡಿದ ಮಾರ್ಗಸೂಚಿಯನ್ವಯ ನಗರದೆಲ್ಲೆಡೆ ಪ್ರತಿನಿತ್ಯ ಸ್ವಚ್ಛತೆಗೆ ಮುಂದಾದರು. ಎಲ್ಲಾ ಕ್ಷೇತ್ರಗಳು ರಜೆ ಪಡೆದು ಮನೆಯಲ್ಲಿದ್ದರೆ ಪೌರ ಕಾರ್ಮಿಕರು ಮಾತ್ರ ಯಾವ ರಜೆಯಿಲ್ಲದೇ ನಗರದ ಸ್ವಚ್ಛತೆಗೆ ತಮ್ಮನ್ನು ತೊಡಗಿಸಿಕೊಂಡಿದ್ದರಿಂದಲೇ ಸರ್ಕಾರ ಅವರನ್ನು ಕೋವಿಡ್ 19 ವಾರಿಯರ್ಸ್ ಎಂದು ಗೌರವಿಸಿದೆ.
ನಿಮ್ಮ ಸೇವೆಗಾಗಿ ಸಚಿವರ ಅನುಮತಿಯಂತೆ ಎಲ್ಲರಿಗೂ ದಿನಸಿ ಕಿಟ್ ನೀಡಲಾಗುತ್ತಿದೆ, ಎಲ್ಲರೂ ಪಡೆದುಕೊಂಡು ಉತ್ತಮ ವಾಗಿ ಕಾರ್ಯ ನಿರ್ವಹಿಸಿ ಎಂದು ಹೇಳಿದರು. ಶಾಸಕ ಎಲ್.ನಾಗೇಂದ್ರ, ಉಪ ಮೇಯರ್ ಶ್ರೀಧರ್, ಡೀಸಿ ಅಭಿರಾಮ್ ಜಿ.ಶಂಕರ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು ಇದ್ದರು.